ಹೃದಯದಲ್ಲಿ ಒಲವಿನ ಹೆಜ್ಜೆಗಳನ್ನಿಟ್ಟ ನಿನ್ನ ಪಾದಗಳಿಗೆ..!
ಡಿಯರ್ ರಾಧ ನಿನಗೊತ್ತಾ..? ನಿನ್ನ ಗಜ್ಜೆ ಸದ್ದು.. ನನ್ನ ಹೃದಯದ ಬಡಿತದ ಜೊತೆ ಬೆರೆತು ಹೋಗಿದೆ. ಎಲ್ಲಾ ಹುಡುಗರು ಅವರು ಇಷ್ಟ ಪಡೋ ಹುಡುಗಿಯ ಕಣ್ಣು, ಮುಂಗುರುಳಿಗೆ ಸೋತರೆ ನಾನು, ನಿನ್ನ ಗೆಜ್ಜೆನಾದದ ದನಿಗೆ ಸೋತವನು. ಅದಕ್ಕೆ ನಿನ್ನ ಪಾದಗಳ ಮೇಲೆ ನನಗೆ ವಿಶೇಷವಾದ ಒಲವು! ನಿನ್ನ ಸೌಂದರ್ಯ ನಿಂತಿರೋದೇ ಅಲ್ಲಿ..! ಎಷ್ಟೋ ಸಲ ಭರತನಾಟ್ಯ ಮಾಡುವಾಗ ನಿನ್ನ ಪಾದಗಳನ್ನೇ ನೋ

ಡಿಯರ್ ರಾಧ ನಿನಗೊತ್ತಾ..? ನಿನ್ನ ಗಜ್ಜೆ ಸದ್ದು.. ನನ್ನ ಹೃದಯದ ಬಡಿತದ ಜೊತೆ ಬೆರೆತು ಹೋಗಿದೆ. ಎಲ್ಲಾ ಹುಡುಗರು ಅವರು ಇಷ್ಟ ಪಡೋ ಹುಡುಗಿಯ ಕಣ್ಣು, ಮುಂಗುರುಳಿಗೆ ಸೋತರೆ ನಾನು, ನಿನ್ನ ಗೆಜ್ಜೆನಾದದ ದನಿಗೆ ಸೋತವನು. ಅದಕ್ಕೆ ನಿನ್ನ ಪಾದಗಳ ಮೇಲೆ ನನಗೆ ವಿಶೇಷವಾದ ಒಲವು! ನಿನ್ನ ಸೌಂದರ್ಯ ನಿಂತಿರೋದೇ ಅಲ್ಲಿ..! ಎಷ್ಟೋ ಸಲ ಭರತನಾಟ್ಯ ಮಾಡುವಾಗ ನಿನ್ನ ಪಾದಗಳನ್ನೇ ನೋಡುತ್ತಿರುತ್ತಿದ್ದೆ. ಈಗಲೂ ನೀನು ನಡೆದಾಡುವಾಗ ಅದೊಂಥರ ನಾಟ್ಯವೇ. ಅಲ್ಲಿ ಗೆಜ್ಜೆಗಳು ನಿನ್ನ ಪಾದಗಳ ಜೊತೆ ವಾದಕ್ಕಿಳಿದಂತೆ ಕಾಣ್ಸುತ್ತೆ. ಆ ವಾದದ ವಾಧ್ಯ ನನ್ನ ಎದೆಗೆ ಅದೇನೋ ಸಮಾಧಾನ ಕೊಡುತ್ತೆ. ಹಾಗೇ ಆ ಗೆಜ್ಜೆ ಸದ್ದು ಎಷ್ಟೋ ದಿನಗಳ ನಿದ್ದೆಯನ್ನೂ ಕದ್ದಿದೆ. ಇದನ್ನೂ ಓದಿ: ಅವತ್ತು ನೆಟ್ಟ ಪಾರಿಜಾತ ಗಿಡ ಹೂ ಬಿಟ್ಟಿದೆ ಗೋಪಾಲ…! ಹೀಗೆಲ್ಲ ನನ್ನ ಎದೆಯಂಗಳದಲ್ಲಿ ಒಲವಿನ ರಂಗೋಲಿ ಬಿಡಿಸಿದ ನಿನ್ನ ಪ್ರೇಮದ ಗೆಜ್ಜೆನಾದಕ್ಕೆ ನಾನು ಸದಾ ಋಣಿ. ಅದಕ್ಕೆ ನಾವಿಬ್ಬರು ಸೇರಿ ಆಚರಿಸಿದ ಮೊದಲ ಹುಟ್ಟುಹಬ್ಬಕ್ಕೆ ನಿನ್ನ ಕಾಲ್ಗಳಿಗೆ ಗಿಫ್ಟ್ ಕೊಟ್ಟಿದ್ದು. ಆ ಬೆಳ್ಳಿಯ ಗೆಜ್ಜೆಯಲ್ಲಿ ನನ್ನ ಹೆಸರು ಅಗೋಚರವಾಗಿ ಬರೆದಿದೆ. ನೀನು ಎಷ್ಟೇ ಜನರ ನಡುವೆ ಓಡಾಡಿದ್ರೂ ಆ ಗೆಜ್ಜೆಯ ಸದ್ದು ನನಗೆ ಕೇಳಿಸುತ್ತೆ. ಆ ಸದ್ದು ನನ್ನ ಹೆಸರನ್ನೇ ಕೂಗುತ್ತದೆ..! ಹೌದು ರಾಧ.. ಒಲವಿನ ಉಡುಗೊರೆ ಹೊತ್ತು ಹೃದಯಕ್ಕೆ ಕಾಲಿಟ್ಟ ನಿನ್ನ ಪಾದಗಳು ನನಗೆ ತುಂಬಾ ಇಷ್ಟ. ಎಷ್ಟು ಗೊತ್ತಾ..? ಪಾದಗಳ ಮದರಂಗಿಯ ರಂಗೋಲಿಯ ಮೇಲೆ ಮುತ್ತಿನ ಗೆಜ್ಜೆಗಳಿಂದ ಅಲಂಕರಿಸುವಷ್ಟು! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..? ಇಂತಿ ನಿನ್ನ ಪ್ರೀತಿಯ ಕೃಷ್ಣ