ಚಿರತೆಯಂತೆ ವೇಗವಾಗಿ ಗೋಲು ಗಳಿಸುವ ಫುಟ್ಬಾಲ್ ತಾರೆ ಮೆಸ್ಸಿಯ ಆಹಾರದ ಗುಟ್ಟೇನು?
ಅರ್ಜೆಂಟೀನಾದ ದಿಗ್ಗಜ ಫುಟ್ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಅವರಿಗೆ ಸದ್ಯ 39 ವರ್ಷ ವಯಸ್ಸು. ಮೈದಾನದಲ್ಲಿ ಚುರುಕು ಮತ್ತು ವೇಗವಾಗಿ ಗೋಲ್ಗಳಿಸುವುದಕ್ಕೆ ಹೆಸರುವಾಸಿಯಾಗಿರುವ ಅವರು ಇತ್ತೀಚಿನ ವರ್ಷಗಳಲ್ಲಿ ತಮ್ಮ ಆಹಾರ ಕ್ರಮದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ.ಸ್ಪ್ಯಾನಿಷ್ ದಿನಪತ್ರಿಕೆ 'ಮುಂಡೋ ಡಿಪೋರ್ಟಿವೊ' ವರದಿ ಪ್ರಕಾರ, ಮೆಸ್ಸಿ ಅವರ ಆಹಾರ ತಜ್ಞ ಗಿ

ಅರ್ಜೆಂಟೀನಾದ ದಿಗ್ಗಜ ಫುಟ್ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಅವರಿಗೆ ಸದ್ಯ 39 ವರ್ಷ ವಯಸ್ಸು. ಮೈದಾನದಲ್ಲಿ ಚುರುಕು ಮತ್ತು ವೇಗವಾಗಿ ಗೋಲ್ಗಳಿಸುವುದಕ್ಕೆ ಹೆಸರುವಾಸಿಯಾಗಿರುವ ಅವರು ಇತ್ತೀಚಿನ ವರ್ಷಗಳಲ್ಲಿ ತಮ್ಮ ಆಹಾರ ಕ್ರಮದಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ.ಸ್ಪ್ಯಾನಿಷ್ ದಿನಪತ್ರಿಕೆ 'ಮುಂಡೋ ಡಿಪೋರ್ಟಿವೊ' ವರದಿ ಪ್ರಕಾರ, ಮೆಸ್ಸಿ ಅವರ ಆಹಾರ ತಜ್ಞ ಗಿಯುಲಿಯಾನೊ ಪೋಸರ್ ಅವರು 5 ಆರೋಗ್ಯಕರವಾದ ಆಹಾರ ನಿಯಮಗಳನ್ನು ಮೆಸ್ಸಿಗಾಗಿ ಸಿದ್ದಪಡಿಸಿದ್ದಾರೆ. ಅವುಗಳೆಂದರೆ, ನೀರು, ಆಲಿವ್ ಎಣ್ಣೆ, ಧಾನ್ಯಗಳು, ತಾಜಾ ಹಣ್ಣು ಮತ್ತು ತಾಜಾ ತರಕಾರಿಗಳು. ಈ 5 ಅಂಶಗಳನ್ನು ಆಧಾರವಾಗಿಟ್ಟುಕೊಂಡು ಮಸ್ಸಿ ಆಹಾರ ಸೇವಿಸುತ್ತಾರೆ.ಪೋಸರ್ ಅವರ ಪ್ರಕಾರ, ‘ಕೀಟನಾಶಕ ಮತ್ತು ರಸಗೊಬ್ಬರಗಳನ್ನು ಬಳಸಿ ಬೆಳೆಯಲಾದ ಆಹಾರಗಳು ಕಲುಷಿತವಾಗಿರುತ್ತವೆ. ಅವು ದೇಹಕ್ಕೆ ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡಬಹುದು’ ಎಂದಿದ್ದಾರೆ.ಮೆಸ್ಸಿ ಸಕ್ಕರೆ ಕಡಿತಗೊಳಿಸಲು ಕಾರಣವೇನು?ಮುಂಡೋ ಡಿಪೋರ್ಟಿವೊ ಪ್ರಕಾರ, ಸಕ್ಕರೆ ಅಂಶ ಸ್ನಾಯುಗಳಿಗೆ ವಿಷವಾಗಿ ಕಾಡುತ್ತದೆ. ಹೀಗಾಗಿ ಮೆಸ್ಸಿ ಸಕ್ಕರೆ ಅಂಶವಿರುವ ಆಹಾರಗಳನ್ನು ತ್ಯಜಿಸಿದ್ದಾರೆ. ಮಾತ್ರವಲ್ಲದೆ, ಮಾಂಸವು ಮೆಸ್ಸಿ ಅವರ ಆಹಾರದ ಭಾಗವಾಗಿದೆ. ಆದರೆ ಅದನ್ನು ನಿಯಮಿತವಾಗಿ ಸೇವಿಸುತ್ತಾರೆ. ಹೆಚ್ಚಿನ ಮಾಂಸ ಸೇವಿಸುವುದರಿಂದ ಜೀರ್ಣಕ್ರಿಯೆ ಕಷ್ಟವಾಗುತ್ತದೆ ಎಂದು ಪೋಸರ್ ಹೇಳುತ್ತಾರೆ.2014ರ ವಿಶ್ವಕಪ್ ನಂತರ ಮೆಸ್ಸಿ ಅವರು ಪೋಸರ್ ಹೇಳುವ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡರು. ಫುಟ್ಬಾಲ್ ಆಟಗಾರನಿಗೆ ಬೇಕಾದಂತಹ ಪೋಷಕಾಂಶಗಳ ನಿರ್ವಹಣೆಗೆ ಇದು ಸಹಕಾರಿಯಾಗಿದೆ. ಮಾತ್ರವಲ್ಲ, ದೀರ್ಘಕಾಲದವರೆಗೂ ಫಿಟ್ನೆಸ್ ಕಾಪಾಡುವುದು ಹಾಗೂ ವೃತ್ತಿ ಜೀವನದಲ್ಲಿ ಆಟದ ಗುಣಮಟ್ಟ ಕಾಯ್ದುಕೊಳ್ಳುವುದು ಇದರ ಉದ್ದೇಶವಾಗಿತ್ತು.ಲಿಯೋನೆಲ್ ಮೆಸ್ಸಿ ಏನು ತಿನ್ನುತ್ತಾರೆ?ಪೌಷ್ಟಿಕ ತಜ್ಞ ಮಾಶೆಡ್ ಅವರ ಪ್ರಕಾರ, ‘ಮೆಸ್ಸಿ 2014ರಿಂದ ಸಂಸ್ಕರಿಸಿದ ಆಹಾರವನ್ನು ತ್ಯಜಿಸಿ, ವಿಟಮಿನ್ಗಳು, ಧಾನ್ಯಗಳು, ತರಕಾರಿಗಳು, ಮೀನು ಮತ್ತು ಆಲಿವ್ ಎಣ್ಣೆಯಿಂದ ಸಮೃದ್ಧವಾಗಿರುವ ಆಹಾರವನ್ನು ಮಾತ್ರ ಸೇವಿಸುತ್ತಾರೆ. ನಾವು ಅವರ ಆಹಾರದಲ್ಲಿ ತಂದ ಬದಲಾವಣೆ ಆಟದ ಮೇಲೂ ಪ್ರಭಾವ ಬೀರಿತು’ ಎಂದು ಬಹಿರಂಗಪಡಿಸಿದ್ದಾರೆ. ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು ಅವರ ದಿನಚರಿಯ ಪ್ರಮುಖ ಭಾಗವಾಗಿದೆ. ದೈನಂದಿನ ಆಹಾರದ ಜೊತೆಗೆ ಯಥೇಚ್ಚವಾಗಿ ನೀರನ್ನು ಕುಡಿಯುತ್ತಾರೆ. ತರಕಾರಿ, ಹಣ್ಣು, ಧಾನ್ಯ ಮತ್ತು ಆರೋಗ್ಯಕರ ಕೊಬ್ಬುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮೆಸ್ಸಿಯ ನೆಚ್ಚಿನ ಪಾನೀಯದಕ್ಷಿಣ ಅಮೆರಿಕಾದ ಸಾಂಪ್ರದಾಯಿಕ ಪಾನೀಯವಾದ ‘ಯೆರ್ಬಾ ಮೇಟ್’ ಮೆಸ್ಸಿಯ ನೆಚ್ಚಿನ ಪಾನೀಯವಾಗಿದೆ. ಪಾಸ್ತಾ, ಮಿಲನೇಸಾ ಮತ್ತು ರೋಸ್ಟ್ ಮೀಲ್ಗಳಂತಹ ಆಹಾರವನ್ನು ಮೆಸ್ಸಿ ಹೆಚ್ಚು ಇಷ್ಟಪಡುತ್ತಾರೆ. ಚಾಕೊಲೇಟ್, ಐಸ್ ಕ್ರೀಮ್, ಪಿಜ್ಜಾ ಸೇವಿಸುತ್ತಾರೆ. ಕೆಲ ವೇಳೆ ಫಿಜ್ಜಾ ಕೂಡ ಸೇವಿಸುತ್ತಾರೆ.