ಫ್ಯಾಕ್ಟ್ ಚೆಕ್: ಎಸ್ಎಐ ಸಂಸ್ಥೆಗೆ ಕ್ರೀಡಾ ಸಚಿವಾಲಯದ ಮಾನ್ಯತೆ ಇಲ್ಲ
ಸ್ಪೋರ್ಟ್ಸ್ ಅಸೋಸಿಯೇನ್ ಆಫ್ ಇಂಡಿಯಾ–ಎಸ್ಎಐ ಹೆಸರಿನ ಕ್ರೀಡಾ ಸಂಸ್ಥೆಯು ತನಗೆ ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಮಾನ್ಯತೆ ಇದೆ ಎಂದು ಹೇಳಿಕೊಳ್ಳುತ್ತಿದೆ. ಆ ಸಂಸ್ಥೆಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಗಳನ್ನು ಆಯೋಜಿಸುವುದಾಗಿ ಹೇಳಿ ಆಟಗಾರರ ಆಯ್ಕೆ ಪತ್ರಗಳು, ಪ್ರಚಾರ ಸಾಮಗ್ರಿಗಳು, ಜಾಹೀರಾತುಗಳನ್ನು ಹೊರಡ

ಸ್ಪೋರ್ಟ್ಸ್ ಅಸೋಸಿಯೇನ್ ಆಫ್ ಇಂಡಿಯಾ–ಎಸ್ಎಐ ಹೆಸರಿನ ಕ್ರೀಡಾ ಸಂಸ್ಥೆಯು ತನಗೆ ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಮಾನ್ಯತೆ ಇದೆ ಎಂದು ಹೇಳಿಕೊಳ್ಳುತ್ತಿದೆ. ಆ ಸಂಸ್ಥೆಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಗಳನ್ನು ಆಯೋಜಿಸುವುದಾಗಿ ಹೇಳಿ ಆಟಗಾರರ ಆಯ್ಕೆ ಪತ್ರಗಳು, ಪ್ರಚಾರ ಸಾಮಗ್ರಿಗಳು, ಜಾಹೀರಾತುಗಳನ್ನು ಹೊರಡಿಸುತ್ತಿದೆ. ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವವರಿಂದ ₹1,500 ನೋಂದಣಿ ಶುಲ್ಕವನ್ನೂ ಪಡೆಯುತ್ತಿದೆ. ಅದರ ಜಾಹೀರಾತಿನಲ್ಲಿ ‘ಫಿಟ್ ಇಂಡಿಯಾ’ಯ ಲೊಗೋ ಕೂಡ ಹಾಕಿಕೊಂಡಿದೆ. ಈ ಬಗ್ಗೆ ಫ್ರೆಸ್ ಇನ್ಫಾರ್ಮೇಷನ್ ಬ್ಯೂರೊ (ಪಿಐಬಿ) ಫ್ಯಾಕ್ಟ್ಚೆಕ್ ಮಾಡಿ ವರದಿ ಮಾಡಿದ್ದು, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಈ ಸಂಸ್ಥೆಗೆ ಯಾವುದೇ ಮಾನ್ಯತೆ ಅಥವಾ ಸಂಯೋಜನೆಯನ್ನು ನೀಡಿಲ್ಲ. ‘ಈ ಕ್ರೀಡಾ ಸಂಸ್ಥೆ’ಗೂ ಫಿಟ್ ಇಂಡಿಯಾ ಅಭಿಯಾನಕ್ಕೂ ಯಾವುದೇ ಸಂಬಂಧವಿಲ್ಲ. ಫಿಟ್ ಇಂಡಿಯಾ ಲೋಗೋ ಅಥವಾ ಬ್ರ್ಯಾಂಡಿಂಗ್ ಬಳಸಲು ಈ ಸಂಸ್ಥೆಗೆ ಯಾವುದೇ ಅನುಮತಿ ಅಥವಾ ಅಧಿಕಾರ ನೀಡಿಲ್ಲ. ಅಧಿಕೃತ ಮಾಹಿತಿಗಾಗಿ, ಭಾರತೀಯ ಕ್ರೀಡಾ ಪ್ರಾಧಿಕಾರದ (Sports Authority of India - SAI) ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: sportsauthorityofindia.nic.in/sai_new/ ಎಂದು ಅದು ಹೇಳಿದೆ.