ಮೊರಾಕ್ಕೋ ಸೋಲಿಸಿ ಸೆಮಿಗೆ ಫ್ರಾನ್ಸ್ – ವಿಶ್ವದಾಖಲೆ ಬರೆದ ಎಂಬಾಪೆ
ಫಾಕ್ಸ್ಬರೋ: ಫಿಫಾ ವಿಶ್ವಕಪ್ 2026ರ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಫ್ರಾನ್ಸ್ (France) ತಂಡವು ಮೊರಾಕ್ಕೋ(Morocco) ವಿರುದ್ಧ 2-0 ಗೋಲುಗಳ ಭರ್ಜರಿ ಜಯ ಸಾಧಿಸುವ ಮೂಲಕ ಸೆಮಿಫೈನಲ್ಗೆ (Semi Final) ಪ್ರವೇಶಿಸಿದೆ. ಇದರೊಂದಿಗೆ ಫ್ರಾನ್ಸ್ ಸತತ ಮೂರನೇ ಬಾರಿಗೆ ವಿಶ್ವಕಪ್ನ ಅಂತಿಮ ನಾಲ್ಕರ ಘಟ್ಟವನ್ನು ತಲುಪಿದಂತಾಗಿದೆ. ಈ ಪಂದ್ಯದಲ್ಲಿ ಗೋಲು ಹೊಡೆಯುವ ಮೂಲಕ ಫ್

ಫಾಕ್ಸ್ಬರೋ: ಫಿಫಾ ವಿಶ್ವಕಪ್ 2026ರ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಫ್ರಾನ್ಸ್ (France) ತಂಡವು ಮೊರಾಕ್ಕೋ(Morocco) ವಿರುದ್ಧ 2-0 ಗೋಲುಗಳ ಭರ್ಜರಿ ಜಯ ಸಾಧಿಸುವ ಮೂಲಕ ಸೆಮಿಫೈನಲ್ಗೆ (Semi Final) ಪ್ರವೇಶಿಸಿದೆ. ಇದರೊಂದಿಗೆ ಫ್ರಾನ್ಸ್ ಸತತ ಮೂರನೇ ಬಾರಿಗೆ ವಿಶ್ವಕಪ್ನ ಅಂತಿಮ ನಾಲ್ಕರ ಘಟ್ಟವನ್ನು ತಲುಪಿದಂತಾಗಿದೆ. ಈ ಪಂದ್ಯದಲ್ಲಿ ಗೋಲು ಹೊಡೆಯುವ ಮೂಲಕ ಫ್ರಾನ್ಸ್ ತಂಡದ ಸ್ಟಾರ್ ಆಟಗಾರ ಹಾಗೂ ನಾಯಕ ಕಿಲಿಯನ್ ಎಂಬಾಪೆ (Kylian Mbapp) ವಿಶ್ವದಾಖಲೆ ಬರೆದಿದ್ದಾರೆ. ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಈ ರೋಮಾಂಚನಕಾರಿ ಪಂದ್ಯದ 60ನೇ ನಿಮಿಷದಲ್ಲಿ ಎಂಬಾಪೆ ಫ್ರಾನ್ಸ್ ಪರ ಮೊದಲ ಗೋಲು ಬಾರಿಸಿದರು. ಈ ಗೋಲಿನೊಂದಿಗೆ ಅವರು ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಎರಡು ಬೇರೆ ಬೇರೆ ವಿಶ್ವಕಪ್ ಆವೃತ್ತಿಗಳಲ್ಲಿ 8 ಗೋಲುಗಳನ್ನು ಗಳಿಸಿದ ವಿಶ್ವದ ಮೊದಲ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ 2022 ವಿಶ್ವಕಪ್ನಲ್ಲಿ ಎಂಬಾಪೆ 7 ಪಂದ್ಯಗಳಿಂದ 8 ಗೋಲ್ ಹೊಡೆದಿದ್ದರು. ಈ ಗೋಲಿನೊಂದಿಗೆ ಅವರ ಒಟ್ಟಾರೆ ವಿಶ್ವಕಪ್ ವೃತ್ತಿಜೀವನದ ಗೋಲುಗಳ ಸಂಖ್ಯೆ 20ಕ್ಕೆ ಏರಿದ್ದು, ಲಿಯೋನೆಲ್ ಮೆಸ್ಸಿ ಅವರ ಸಾರ್ವಕಾಲಿಕ ದಾಖಲೆಗಿಂತ ಕೇವಲ ಒಂದು ಗೋಲು ಹಿಂದಿದ್ದಾರೆ. The name is Kylian MBAPPE!!!! pic.twitter.com/rnc19imjrt — Miss ADEL (@a_derll) July 9, 2026 ಪಂದ್ಯದ ಮೊದಲಾರ್ಧದಲ್ಲಿ ಆಫ್ರಿಕಾದ ಬಲಿಷ್ಠ ತಂಡವಾದ ಮೊರಾಕ್ಕೋ ಅತ್ಯುತ್ತಮ ರಕ್ಷಣಾತ್ಮಕ (Defensive) ಆಟ ಪ್ರದರ್ಶಿಸಿತು. ಪಂದ್ಯದ 28ನೇ ನಿಮಿಷದಲ್ಲಿ ಫ್ರಾನ್ಸ್ಗೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಮೊರಾಕ್ಕೋದ ಗೋಲ್ಕೀಪರ್ ಯಾಸಿನ್ ಬೌನೊ ತಡೆದರು. ಹೀಗಾಗಿ ಮೊದಲಾರ್ಧವು 0-0 ಗೋಲುಗಳಿಂದ ಸಮಬಲಗೊಂಡಿತ್ತು. ಇದನ್ನೂ ಓದಿ: ಫಿಫಾ ವಿಶ್ವಕಪ್ನಲ್ಲಿ ಯಾರೂ ನಿರ್ಮಿಸದ ವಿಶಿಷ್ಟ ದಾಖಲೆ ಬರೆದ ಮೆಸ್ಸಿ ಪಂದ್ಯದ 60ನೇ ನಿಮಿಷದಲ್ಲಿ ಎಂಬಾಪೆ ಗಳಿಸಿದ ಗೋಲು ಮೊರಾಕ್ಕೋದ ರಕ್ಷಣಾ ಕೋಟೆಯನ್ನು ಧ್ವಂಸಗೊಳಿಸಿತು. ಇದಾಗಿ ಕೇವಲ ಆರೇ ನಿಮಿಷಗಳಲ್ಲಿ (66ನೇ ನಿಮಿಷ), ಬ್ಯಾಲನ್ ಡಿ’ಓರ್ ಪ್ರಶಸ್ತಿ ವಿಜೇತ ಉಸ್ಮಾನ್ ಡೆಂಬೆಲೆ ಅವರು ಮತ್ತೊಂದು ಆಕರ್ಷಕ ಗೋಲು ಬಾರಿಸಿ ಫ್ರಾನ್ಸ್ನ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು. ಈ ಗೆಲುವಿನೊಂದಿಗೆ ಫ್ರಾನ್ಸ್ ತಂಡವು ಜುಲೈ 14 ರಂದು ಡಲ್ಲಾಸ್ನಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಸ್ಪೇನ್ ಅಥವಾ ಬೆಲ್ಜಿಯಂ ತಂಡಗಳ ನಡುವಿನ ವಿಜೇತರನ್ನು ಎದುರಿಸಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಉತ್ತಮ ಪ್ರದರ್ಶನ ನೀಡಿದ್ದ ಮೊರಾಕ್ಕೋ ತಂಡವು ಕ್ವಾರ್ಟರ್ಫೈನಲ್ನಲ್ಲಿ ಸೋಲುವ ಮೂಲಕ ವಿಶ್ವಕಪ್ ಪ್ರಯಾಣವನ್ನು ಮುಗಿಸಿದೆ. ಫ್ರಾನ್ಸ್ ತಂಡದ ಈ ಭರ್ಜರಿ ಗೆಲುವು ಮತ್ತು ಎಂಬಾಪೆ ಅವರ ಐತಿಹಾಸಿಕ ಸಾಧನೆಗೆ ವಿಶ್ವಾದ್ಯಂತ ಫುಟ್ಬಾಲ್ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.