ಎಸ್ಐಆರ್: ಪಟ್ಟಿಯಲ್ಲಿದ್ದರೂ ಆ್ಯಪ್ನಲ್ಲಿ ಹೆಸರಿಲ್ಲ
ಬೆಂಗಳೂರು: ಮತದಾರರ ಎರಡೂ ಪಟ್ಟಿಯಲ್ಲಿ ಹೆಸರಿದ್ದರೂ ಬೂತ್ ಮತಗಟ್ಟೆ ಅಧಿಕಾರಿ (ಬಿಎಲ್ಒ) ಬಳಸುವ ಆ್ಯಪ್ನಲ್ಲಿ ಹೆಸರು ಇರುವುದಿಲ್ಲ. ಆನ್ಲೈನ್ನಲ್ಲಿ ಪ್ರಕಟಿಸಿರುವ ಮಾಹಿತಿ ಆ್ಯಪ್ನಲ್ಲಿ ಹೆಸರು ಇಲ್ಲದೆ ಪರಿಷ್ಕರಣೆ ಕಾರ್ಯ ಗೊಂದಲಕ್ಕೀಡಾಗಿದೆ.ಜಿಬಿಎ ವ್ಯಾಪ್ತಿಯಲ್ಲಿ ಮತದಾರರ ಸಮಗ್ರ ವಿಶೇಷ ಪರಿಷ್ಕರಣೆ (ಎಸ್ಐಆರ್) ಕಾರ್ಯ ಆರಂಭವಾಗಿ 10 ದಿನಗಳು ಕಳೆದಿವೆ. ಆದರ

ಬೆಂಗಳೂರು: ಮತದಾರರ ಎರಡೂ ಪಟ್ಟಿಯಲ್ಲಿ ಹೆಸರಿದ್ದರೂ ಬೂತ್ ಮತಗಟ್ಟೆ ಅಧಿಕಾರಿ (ಬಿಎಲ್ಒ) ಬಳಸುವ ಆ್ಯಪ್ನಲ್ಲಿ ಹೆಸರು ಇರುವುದಿಲ್ಲ. ಆನ್ಲೈನ್ನಲ್ಲಿ ಪ್ರಕಟಿಸಿರುವ ಮಾಹಿತಿ ಆ್ಯಪ್ನಲ್ಲಿ ಹೆಸರು ಇಲ್ಲದೆ ಪರಿಷ್ಕರಣೆ ಕಾರ್ಯ ಗೊಂದಲಕ್ಕೀಡಾಗಿದೆ.ಜಿಬಿಎ ವ್ಯಾಪ್ತಿಯಲ್ಲಿ ಮತದಾರರ ಸಮಗ್ರ ವಿಶೇಷ ಪರಿಷ್ಕರಣೆ (ಎಸ್ಐಆರ್) ಕಾರ್ಯ ಆರಂಭವಾಗಿ 10 ದಿನಗಳು ಕಳೆದಿವೆ. ಆದರೆ ಅಗತ್ಯ ಮಾಹಿತಿ ಕೊರತೆಯಿಂದ ಸಂಪೂರ್ಣ ಡಿಜಿಟಲೀಕರಣ ಕಾರ್ಯಕ್ಕೆ ತೊಡಕಾಗಿದೆ.ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯವರ ವೆಬ್ಸೈಟ್ನಲ್ಲಿ (ceo.karnataka.gov.in) 2025/26ರ ಮತದಾರರ ಪಟ್ಟಿಯ ಜೊತೆಗೆ 2002ರ ಮತದಾರರ ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಹೆಸರಿನ ಆಧಾರದಲ್ಲೂ ಅಂದಿನ ಪಟ್ಟಿಯಲ್ಲಿ ಮತದಾರರು ತಮ್ಮ ಹೆಸರನ್ನು ಖಾತರಿಪಡಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಯಾವ ಹೆಸರು ಟೈಪಿಸಿದರೂ ಅವರ ಮಾಹಿತಿ ಬರುವುದಿಲ್ಲ. ಆದರೆ, ಮತದಾರರ ಪಟ್ಟಿಯ ಪಿಎಎಫ್ನಲ್ಲಿ ಅವರ ಹೆಸರು ಇರುತ್ತದೆ.2002 ಹಾಗೂ 2025/26ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ ಅವರ ನೋಂದಣಿ ಪ್ರಕ್ರಿಯೆಯಲ್ಲಿ ಗೊಂದಲವಾಗಿದೆ. ಆನ್ಲೈನ್ನಲ್ಲಿ ಪಡೆಯುವ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಅದೇ ಮಾಹಿತಿ ಬಿಎಲ್ಒಗಳ ಆ್ಯಪ್ನಲ್ಲಿ ಲಭ್ಯವಿಲ್ಲ. ಹೀಗಾಗಿ, ಗಣತಿ ನಮೂನೆ ಪಡೆದು ಅದನ್ನು ಆ್ಯಪ್ನಲ್ಲಿ ಅಳವಡಿಸುವಾಗ ಮತದಾರರ ಮಾಹಿತಿ ಸಿಗುತ್ತಿಲ್ಲ. ‘ಅದನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸುತ್ತಾರೆ’ ಎಂದು ಬಿಎಲ್ಒಗಳು ಸಬೂಬು ಹೇಳುತ್ತಿದ್ದಾರೆ.ರಾಜರಾಜೇಶ್ವರಿ ನಗರದಲ್ಲಿರುವ ಒಬ್ಬ ಮಹಿಳಾ ಮತದಾರರ ಹೆಸರು 2025ರ ಪಟ್ಟಿಯಲ್ಲಿ ಇದೆ. 2002ರ ಮತದಾರರ ಪಟ್ಟಿಯಲ್ಲಿಯೂ ಅವರ ಹೆಸರಿದ್ದು, ಅದರಲ್ಲಿ ಅವರ ತಂದೆಯ ಹೆಸರಿದೆ. ಗಣತಿ ನಮೂನೆಯನ್ನು ಪಡೆದು ಹಿಂದಿನ ಮಾಹಿತಿಯನ್ನು ಅವರು ಭರ್ತಿ ಮಾಡಿದ್ದಾರೆ. ಬಿಎಲ್ಒ ಅದನ್ನು ಆ್ಯಪ್ನಲ್ಲಿ ಅಳವಡಿಸಲು ಹೋದಾಗ, 2002ರ ಮತದಾರರ ಪಟ್ಟಿಯ ಮಾಹಿತಿ ಅಲ್ಲಿಲ್ಲ. ಚುನಾವಣಾ ಆಯೋಗವೇ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ಮಾಹಿತಿ ಆ್ಯಪ್ನಲ್ಲಿ ಏಕಿಲ್ಲ ಎಂಬುದಕ್ಕೆ ಬಿಎಲ್ಒ ಬಳಿ ಉತ್ತರ ಇರಲಿಲ್ಲ. ‘ಇದನ್ನು ಕಚೇರಿಗೆ ಕೊಡುತ್ತೇವೆ. ಅವರು ಏನು ನಿರ್ಧಾರ ಮಾಡುತ್ತಾರೋ ನೋಡೋಣ’ ಎಂದು ಹೇಳಿದ್ದಾರೆ.ಮತದಾರರು ಗಣತಿ ನಮೂನೆ ಭರ್ತಿ ಮಾಡಿಕೊಟ್ಟಾಗ, ಬಿಎಲ್ಒಗಳು ಅದನ್ನು ಆ್ಯಪ್ನಲ್ಲಿ ನಮೂದಿಸಿದಾಗ, 2002ರಲ್ಲಿನ ಮತದಾರರ ಪಟ್ಟಿಯಲ್ಲಿ ಹೊಂದಿಕೆಯಾಗುವ ಕೆಲವು ಆಯ್ಕೆಗಳನ್ನು ನೀಡುತ್ತದೆ. ಅದರಲ್ಲಿ ಈ ಮತದಾರರ ಮಾಹಿತಿಗೆ ಅನುಗುಣವಾಗಿದ್ದರೆ ಅದನ್ನು ನಮೂದಿಸಿದರೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಆದರೆ, ಆ್ಯಪ್ ನೀಡುವ ಆಯ್ಕೆಗಳಲ್ಲಿ ಮತದಾರರು ನೀಡಿರುವ ಮಾಹಿತಿ ಲಭ್ಯವಾಗುತ್ತಿಲ್ಲ. ಹೀಗಾಗಿ, ಬಿಎಲ್ಒಗಳು ಸ್ಥಳದಲ್ಲೇ ಆ್ಯಪ್ನಲ್ಲಿ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೂ, ಮನೆ ಮುಂದೆ ನೀಲಿ ಸ್ಟಿಕರ್ ಅಂಟಿಸಿಹೋಗುತ್ತಿದ್ದಾರೆ.ಬಿಎಲ್ಒಗಳ ಮೇಲಿನ ಚುನಾವಣಾ ನೋಂದಣಾಧಿಕಾರಿ (ಇಆರ್ಒ), ಜಿಲ್ಲಾ ಚುನಾವಣಾಧಿಕಾರಿಗಳಿಗೂ (ಡಿಇಒ) ವೆಬ್ಸೈಟ್ನಲ್ಲಿರುವ ಎಲ್ಲ ಮಾಹಿತಿಗಳು ಆ್ಯಪ್ನಲ್ಲಿ ಇಲ್ಲ ಎಂಬುದು ಇತ್ತೀಚೆಗೆ ಗೊತ್ತಾಗಿದೆ. ‘ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಚುನಾವಣಾ ಆಯೋಗದಿಂದ ವಿವರಣೆ ನಿರೀಕ್ಷೆಯಲ್ಲಿದ್ದಾರೆ. ಅಲ್ಲಿಂದ ಮಾಹಿತಿ ಪಡೆದು ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ಸ್ವಲ್ಪ ಸಮಯ ಹಿಡಿಯಬಹುದು’ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.ಆನ್ಲೈನ್ ಅರ್ಜಿ ಮಾಹಿತಿಯೂ ಇಲ್ಲಬಿಎಲ್ಒಗಳು ಮತದಾರರ ಮನೆಗೆ ಬಂದು ಗಣತಿ ನಮೂನೆ (ಇಎಫ್) ನೀಡುವ ಮುನ್ನವೇ ಆನ್ಲೈನ್ನಲ್ಲಿ ಅರ್ಜಿ ಭರ್ತಿ ಮಾಡಿರುವ ಮತದಾರರ ಸಂಪೂರ್ಣ ಮಾಹಿತಿಗಳೂ ಆ್ಯಪ್ನಲ್ಲಿ ತೋರಿಸುತ್ತಿಲ್ಲ.2025 ಹಾಗೂ 2002ರ ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರೊಬ್ಬರು ಆನ್ಲೈನ್ನಲ್ಲಿ ನಮೂನೆಯನ್ನು ಭರ್ತಿ ಮಾಡಿ, ಹೊಸ ಚಿತ್ರ ಅಪ್ಲೋಡ್ ಮಾಡಿ, ಆಧಾರ್ ಮೂಲಕ ಜೂನ್ 30ರಂದೇ ಸಲ್ಲಿಸಿದ್ದಾರೆ. ಜುಲೈ 8ರಂದು ಬಿಎಲ್ಒ ಮನೆಗೆ ಭೇಟಿ ನೀಡಿ ಇಎಫ್ ನೀಡಿದ್ದಾರೆ. ಆನ್ಲೈನ್ನಲ್ಲಿ ಭರ್ತಿ ಮಾಡಿರುವುದಾಗಿ ಮತದಾರರು ಮಾಹಿತಿ ನೀಡಿದ್ದಾರೆ. ಅದರಂತೆ ಬಿಎಲ್ಒ ಆ್ಯಪ್ನಲ್ಲಿ ಪರಿಶೀಲಿಸಿದಾಗ, ಮಾಹಿತಿ ಕಾಣದೆ ಅರ್ಜಿ ‘ಬ್ಲಾಂಕ್’ ಆಗಿತ್ತು. ಆತಂಕಗೊಂಡ ಮತದಾರ, ಬಿಎಲ್ಒ ಅವರನ್ನು ಪ್ರಶ್ನಿಸಿದಾಗ, ‘ನನಗೆ ಇದು ಗೊತ್ತಾಗುತ್ತಿಲ್ಲ. ಹಿರಿಯ ಅಧಿಕಾರಿಗಳನ್ನು ಕೇಳುತ್ತೇನೆ. ನೀವು ಆನ್ಲೈನ್ನಲ್ಲಿ ಸಲ್ಲಿಸಿರುವುದಕ್ಕೆ ಮಾಹಿತಿ ಇದೆಯಲ್ಲ, ನೋಡೋಣ ಬಿಡಿ. ಮುಂದೆ ಏನಾದರೂ ಸಮಸ್ಯೆಯಾದರೆ ನೋಟಿಸ್ ನೀಡಿ, ಅವರೇ ಮತ್ತೆ ಮಾಹಿತಿ ಕೇಳುತ್ತಾರೆ’ ಎಂದು ಹೇಳಿದ್ದಾರೆ.