ಕಾಯಕ ಸಮುದಾಯಗಳ ಒಕ್ಕೂಟದಿಂದ ರಘುಗೆ ಅಭಿನಂದನೆ ಜುಲೈ 11ರಂದು: ಮೈ.ನಾ. ಲೋಕೇಶ್
ಮೈಸೂರು: ಕಾಯಕ ಸಮುದಾಯಗಳ ಒಕ್ಕೂಟದಿಂದ ವಿಧಾನಪರಿಷತ್ ಸದಸ್ಯ ಆರ್. ರಘು ಕೌಟಿಲ್ಯ ಅವರಿಗೆ ಅಭಿನಂದನಾ ಸಮಾರಂಭವನ್ನು ಜುಲೈ 11ರಂದು ಬೆಳಿಗ್ಗೆ 10ಕ್ಕೆ ನಗರದ ಜೆ.ಕೆ. ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಮೈಸೂರು ವಿಭಾಗದ ಸಂಚಾಲಕ ಮೈ.ನಾ. ಲೋಕೇಶ್ ತಿಳಿಸಿದರು.‘ರಘು ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿದ ಬಿಜೆಪಿಗೆ ಕೃತಜ್ಞತೆ ಸಮರ್ಪಣೆಗಾಗಿ ಸಮಾರಂಭ ಹಮ್

ಮೈಸೂರು: ಕಾಯಕ ಸಮುದಾಯಗಳ ಒಕ್ಕೂಟದಿಂದ ವಿಧಾನಪರಿಷತ್ ಸದಸ್ಯ ಆರ್. ರಘು ಕೌಟಿಲ್ಯ ಅವರಿಗೆ ಅಭಿನಂದನಾ ಸಮಾರಂಭವನ್ನು ಜುಲೈ 11ರಂದು ಬೆಳಿಗ್ಗೆ 10ಕ್ಕೆ ನಗರದ ಜೆ.ಕೆ. ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಒಕ್ಕೂಟದ ಮೈಸೂರು ವಿಭಾಗದ ಸಂಚಾಲಕ ಮೈ.ನಾ. ಲೋಕೇಶ್ ತಿಳಿಸಿದರು.‘ರಘು ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿದ ಬಿಜೆಪಿಗೆ ಕೃತಜ್ಞತೆ ಸಮರ್ಪಣೆಗಾಗಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿಸುವರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆ ವಹಿಸುವರು’ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.‘ಸಂಸದ ಪಿ.ಸಿ. ಮೋಹನ್, ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯಸಚೇತಕ ಎನ್. ರವಿಕುಮಾರ್, ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಸಂಸದ ಪ್ರತಾಪ ಸಿಂಹ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್. ಸುಬ್ಬಣ್ಣ, ಮಾಜಿ ಶಾಸಕರಾದ ಸಿ.ಎಸ್. ನಿರಂಜನ್ಕುಮಾರ್, ಎನ್. ಮಹೇಶ್, ಬಿ. ಹರ್ಷವರ್ಧನ್, ವಿಧಾನಪರಿಷತ್ ಮಾಜಿ ಸದಸ್ಯರಾದ ಗೋ. ಮಧುಸೂದನ್, ತೋಂಟದಾರ್ಯ ಭಾಗವಹಿಸುವರು’ ಎಂದು ತಿಳಿಸಿದರು.‘ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಬೆಳವಣಿಗೆಯಲ್ಲಿ ಕಾಯಕ ಸಮಾಜಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದರೆ, ಇಂದಿಗೂ ನಮ್ಮ ಸಮಾಜಗಳನ್ನು ಕಡೆಗಣಿಸಲಾಗುತ್ತಿದೆ. ರಾಜಕೀಯ ಪಕ್ಷಗಳು ನಮ್ಮನ್ನು ಕೇವಲ ಮತ ಬ್ಯಾಂಕ್ ಆಗಿ ಪರಿಗಣಿಸಿವೆ. ಆದರೆ, ಬಿಜೆಪಿಯು ಮಡಿವಾಳ ಸಮುದಾಯದ ರಘು ಕೌಟಿಲ್ಯ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ಇಡೀ ಕಾಯಕ ಸಮುದಾಯ, ಶೋಷಿತ ವರ್ಗ, ತಳ ಸಮುದಾಯಕ್ಕೆ ಗೌರವ, ಮನ್ನಣೆ ನೀಡಿದೆ. ಆ ಪಕ್ಷದ ಈ ನಡೆಯನ್ನು ಬೇರೆ ರಾಜಕೀಯ ಪಕ್ಷಗಳು ಅನುಸರಿಸಬೇಕು’ ಎಂದು ಕೋರಿದರು.ಕಾಯಕ ಸಮುದಾಯಗಳ ಮುಖಂಡರಾದ ಸತ್ಯನಾರಾಯಣ, ಚೇತನ್ ಕಣಿವೆಹಳ್ಳಿ, ಚೆನ್ನಕೇಶವಶೆಟ್ಟಿ, ಪಿ. ಗಿರೀಶ್, ಬಾಬು ಪತ್ತಾರ್, ಎಂ. ಸುರೇಶ್ ಬಾಬು, ಸೋಮಣ್ಣ ಇದ್ದರು.ವಿಜಯೇಂದ್ರಗೆ ‘ಕಾಯಕ ರಕ್ಷಕ’ ಪ್ರಶಸ್ತಿ: ಸಮಾರಂಭದಲ್ಲಿ ಬಿ.ವೈ.ವಿಜಯೇಂದ್ರ ಅವರಿಗೆ ಒಕ್ಕೂಟದಿಂದ ‘ಕಾಯಕ ರಕ್ಷಕ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ‘ಕಾಯಕ ಸಮುದಾಯಗಳ ಬಗೆಗಿನ ಅವರ ಅವರ ಕಾಳಜಿ ಹಾಗೂ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಿ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ಕಾಯಕ ಸಮುದಾಯಗಳ ಒಕ್ಕೂಟದ ಸಂಚಲಕ ಚೇತನ್ ಕಣಿವೇಹಳ್ಳಿ ತಿಳಿಸಿದ್ದಾರೆ.