ಯುಎಇ–ಭಾರತ ವಿಮಾನ ಪ್ರಯಾಣ ದರ ಶೇ 30ರಷ್ಟು ಇಳಿಕೆ: ಮಂಗಳೂರು ಪ್ರಯಾಣ ದುಬಾರಿ
ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿದುಬೈ: ಯುಎಇಯಿಂದ ಭಾರತಕ್ಕೆ ಜುಲೈನಲ್ಲಿ ಪ್ರಯಾಣಿಸಲು ಯೋಜಿಸುತ್ತಿರುವವರಿಗೆ ಸಿಹಿಸುದ್ದಿ. ಹಲವು ಮಾರ್ಗಗಳಲ್ಲಿ ರಿಟರ್ನ್ ವಿಮಾನ ಟಿಕೆಟ್ ದರವು ಕಳೆದ ಕೆಲವು ವಾರಗಳಿಗೆ ಹೋಲಿಸಿದರೆ ಶೇ 20ರಿಂದ 30ರಷ್ಟು ಇಳಿಕೆಯಾಗಿದೆ ಎಂದು ಟ್ರಾವೆಲ್ ಏಜೆಂಟ್ಗಳು ಹಾಗೂ ಟಿಕೆಟ್ ದರಗಳ ವಿಶ್ಲೇಷಣೆಯಿಂದ ಗೊತ್ತಾಗಿದೆ.ಬೆಂಗಳೂರಿನಲ್ಲಿ ವಾಹನ ನ
ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿದುಬೈ: ಯುಎಇಯಿಂದ ಭಾರತಕ್ಕೆ ಜುಲೈನಲ್ಲಿ ಪ್ರಯಾಣಿಸಲು ಯೋಜಿಸುತ್ತಿರುವವರಿಗೆ ಸಿಹಿಸುದ್ದಿ. ಹಲವು ಮಾರ್ಗಗಳಲ್ಲಿ ರಿಟರ್ನ್ ವಿಮಾನ ಟಿಕೆಟ್ ದರವು ಕಳೆದ ಕೆಲವು ವಾರಗಳಿಗೆ ಹೋಲಿಸಿದರೆ ಶೇ 20ರಿಂದ 30ರಷ್ಟು ಇಳಿಕೆಯಾಗಿದೆ ಎಂದು ಟ್ರಾವೆಲ್ ಏಜೆಂಟ್ಗಳು ಹಾಗೂ ಟಿಕೆಟ್ ದರಗಳ ವಿಶ್ಲೇಷಣೆಯಿಂದ ಗೊತ್ತಾಗಿದೆ.ಬೆಂಗಳೂರಿನಲ್ಲಿ ವಾಹನ ನಿಲುಗಡೆಗೆ ದುಬೈ ಮಾದರಿಯ ತಂತ್ರಜ್ಞಾನಉತ್ತರ ಮತ್ತು ಪಶ್ಚಿಮ ಭಾರತದ ಹಲವು ನಗರಗಳಿಗೆ 1,029 ದಿರ್ಹಂನಿಂದಲೇ (ಸುಮಾರು ₹23,400) ರಿಟರ್ನ್ ಟಿಕೆಟ್ಗಳು ಲಭ್ಯವಿದ್ದರೆ, ದಕ್ಷಿಣ ಭಾರತದ ನಗರಗಳಿಗೆ ಇನ್ನೂ ತುಸು ಹೆಚ್ಚಿನ ದರವೇ ಇದೆ.ಮಂಗಳೂರಿಗೆ ವಿಮಾನ ದರದಲ್ಲೂ ಇತ್ತೀಚೆಗೆ ಸುಮಾರು ಶೇ 20ರಷ್ಟು ಇಳಿಕೆಯಾಗಿದೆ.ದುಬೈಗಿಂತ ಅಬುಧಾಬಿಯಿಂದ ಭಾರತಕ್ಕೆ ವಿಮಾನ ದರ ಕಡಿಮೆಯಾಗಿದೆ. ಹೈದರಾಬಾದ್ ಹಾಗೂ ಚೆನ್ನೈ ಮಾರ್ಗಗಳಲ್ಲೂ ದರ ಇಳಿಕೆಯಾಗಿದೆ.ಆದರೆ, ಆಗಸ್ಟ್ನಲ್ಲಿ ಪ್ರಯಾಣಿಸಲು ಉದ್ದೇಶಿಸಿರುವವರು ಈಗಲೇ ಟಿಕೆಟ್ ಕಾಯ್ದಿರಿಸಬೇಕು, ಏಕೆಂದರೆ ಶಾಲೆಗಳು ಪುನರಾರಂಭವಾಗುವ ಮುನ್ನ ಬೇಡಿಕೆ ಹೆಚ್ಚುವುದರಿಂದ ದರ ಏರಿಕೆಯಾಗುವ ಸಾಧ್ಯತೆ ಇದೆ.ಯುಎಇ: ದುಬೈಯಲ್ಲಿರುವ ಭಾರತದ ಕಾನ್ಸುಲೇಟ್ ಕಚೇರಿಯಲ್ಲಿ ವಾಕ್-ಇನ್ ಸೇವೆ ಸ್ಥಗಿತದೆಹಲಿ, ಅಹಮದಾಬಾದ್, ಮುಂಬೈ ಮತ್ತು ಪುಣೆಗೆ ಟಿಕೆಟ್ ದರ ಕಡಿಮೆ ಇದೆ.‘ಜುಲೈನಲ್ಲಿ 7ರಿಂದ 10 ದಿನಗಳ ಪ್ರವಾಸಕ್ಕೆ 1,080 ದಿರ್ಹಂನಿಂದಲೇ ರಿಟರ್ನ್ ಟಿಕೆಟ್ಗಳು ಸಿಗುತ್ತಿವೆ. ಆದರೆ ಕೊಚ್ಚಿ, ತಿರುವನಂತಪುರ ಮತ್ತು ಕೋಯಿಕ್ಕೋಡ್ ಸೇರಿದಂತೆ ದಕ್ಷಿಣ ಭಾರತದ ಕೆಲವು ನಗರಗಳಿಗೆ ಟಿಕೆದ್ ದರ ಹೆಚ್ಚಿದೆ.ಜುಲೈನಲ್ಲಿ ಯುಎಇ–ಭಾರತ ವಿಮಾನಯಾನ ದರಅಹಮದಾಬಾದ್: 1,029 ದಿರ್ಹಂ (ಸುಮಾರು ₹26,700)ನವದೆಹಲಿ: 1,041 ದಿರ್ಹಂ (ಸುಮಾರು ₹27,000) ಮುಂಬೈ: 1,074 ದಿರ್ಹಂ (ಸುಮಾರು ₹27,900)ಪುಣೆ: 1,114 ದಿರ್ಹಂ (ಸುಮಾರು ₹28,900) ಬೆಂಗಳೂರು: 1,389 ದಿರ್ಹಂ (ಸುಮಾರು ₹36,000) ಕೋಯಿಕ್ಕೋಡ್: 1,578 ದಿರ್ಹಂ (ಸುಮಾರು ₹40,900) ಮಂಗಳೂರು: 1,928 ದಿರ್ಹಂ (ಸುಮಾರು ₹50,000) ಆಳ-ಅಗಲ | ಬೆಂಗಳೂರು ನವೋದ್ಯಮ: ಸಾಧನೆಯ ಹಾದಿಯಲ್ಲಿ ಸಾಲು ಸಾಲು ಸವಾಲು