ಕೋಟ್ಯಂತರ ಹೃದಯಗಳ ಆರಾಧ್ಯ ಜಾನಕಿಯಮ್ಮ ಸಿಂಪಲ್ಲಾಗಿ ಇದ್ದದ್ದು ಏಕೆ?
ಜಾನಕಿಯಮ್ಮ. ದಕ್ಷಿಣ ಭಾರತದ ಅದೆಷ್ಟೋ ಸಂಗೀತ ಪ್ರಿಯರ ಆರಾಧ್ಯ ದೇವತೆ. ಫೋನ್ಗಳ ರಿಂಗ್ ಟೋನ್ಗಳಾಗಿ, ಕಾಲರ್ಟ್ಯೂನ್ಗಳಾಗಿ, ಬೆಳಗಿನ ಅಲಾರಾಮ್ಗಾಗಿ, ಪ್ರೀತಿ ನಿವೇದನೆಗಾಗಿ, ನೊಂದ ಹೃದಯಕ್ಕೆ ಸಾಂತ್ವಾನ ನೀಡುವುದಕ್ಕಾಗಿ...ಅದೆಷ್ಟು ಕಾರಣಗಳಿಗಾಗಿ ಜಾನಕಿ ಅವರ ಕಂಠದಲ್ಲಿ ಮೂಡಿ ಬಂದ ಹಾಡುಗಳನ್ನು ಜನರು ಕೇಳುತ್ತಿದ್ದಾರೆ ಎನ್ನುವುದಕ್ಕೆ ಲೆಕ್ಕವಿಲ್ಲ.ಖ್ಯಾತ ಗಾಯಕಿ

ಜಾನಕಿಯಮ್ಮ. ದಕ್ಷಿಣ ಭಾರತದ ಅದೆಷ್ಟೋ ಸಂಗೀತ ಪ್ರಿಯರ ಆರಾಧ್ಯ ದೇವತೆ. ಫೋನ್ಗಳ ರಿಂಗ್ ಟೋನ್ಗಳಾಗಿ, ಕಾಲರ್ಟ್ಯೂನ್ಗಳಾಗಿ, ಬೆಳಗಿನ ಅಲಾರಾಮ್ಗಾಗಿ, ಪ್ರೀತಿ ನಿವೇದನೆಗಾಗಿ, ನೊಂದ ಹೃದಯಕ್ಕೆ ಸಾಂತ್ವಾನ ನೀಡುವುದಕ್ಕಾಗಿ...ಅದೆಷ್ಟು ಕಾರಣಗಳಿಗಾಗಿ ಜಾನಕಿ ಅವರ ಕಂಠದಲ್ಲಿ ಮೂಡಿ ಬಂದ ಹಾಡುಗಳನ್ನು ಜನರು ಕೇಳುತ್ತಿದ್ದಾರೆ ಎನ್ನುವುದಕ್ಕೆ ಲೆಕ್ಕವಿಲ್ಲ.ಖ್ಯಾತ ಗಾಯಕಿ ಎಸ್.ಜಾನಕಿ ನಿಧನಇಂತಹ ಮೇರು ಗಾಯಕಿ ಇಂದು ಗಾನ ಪಯಣ ಮುಗಿಸಿ ಇಹಲೋಕ ತ್ಯಜಿಸಿದ್ದಾರೆ. 48 ಸಾವಿರ ಹಾಡುಗಳನ್ನು ಹಾಡಿದ ಜಾನಕಿ ಅವರದ್ದು ಸರಳ ಉಡುಗೆ ತೊಡುಗೆ. ಬಹುತೇಕ ಸಂದರ್ಭದಲ್ಲಿ ಅವರು ಉಡುತ್ತಿದ್ದುದು ಬಿಳಿಯ ಸೀರೆಗಳನ್ನೆ. ಮಹಾರಾಜ ಮೈದಾನದಲ್ಲಿ ಜಾನಕಿ ಅಂತಿಮ ದರ್ಶನಕ್ಕೆ ಅವಕಾಶ: ಯತೀಂದ್ರ ಸಿದ್ದರಾಮಯ್ಯ2013ರಲ್ಲಿ ಪದ್ಮಭೂಷಣ ನಿರಾಕರಿಸಿದ ನಂತರ ಎಸ್. ಜಾನಕಿ ಹೇಳಿದ್ದು...ದಶಕಗಳ ಕಾಲ ಚಿತ್ರರಂಗದಲ್ಲಿದ್ದರೂ ಅವರು ತಮ್ಮ ವಿಶಿಷ್ಟ ಮತ್ತು ಸರಳ ವ್ಯಕ್ತಿತ್ವವನ್ನು ಉಡುಪಿನಲ್ಲೂ ಕಾಯ್ದುಕೊಂಡು ಬಂದಿದ್ದರು.ವರದಿಗಳ ಪ್ರಕಾರ ಪತಿಯ ಮರಣದ ನಂತರ ಬಣ್ಣದ ಸೀರೆಗೆ ಎಸ್. ಜಾನಕಿ ವಿದಾಯ ಹೇಳಿದ್ದರು. 1997ರಲ್ಲಿ ಜಾನಕಿ ಅವರ ಪತಿ ವಿ. ರಾಮ್ಪ್ರಸಾದ್ ಕಾಲವಾಗಿತ್ತು. ಅದರ ನಂತರ ವೈಯಕ್ತಿಕ ಆಯ್ಕೆಯಾಗಿ ಬಿಳಿ ಸೀರೆಗಳನ್ನು ಧರಿಸುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದರು. ಬಣ್ಣದ ಸೀರೆಗಳು, ಮುದ್ರಿತ ವಿನ್ಯಾಸ ಮತ್ತು ಚಿನ್ನದ ಅಂಚುಳ್ಳ ಸೀರೆಗಳನ್ನು ಧರಿಸುವುದನ್ನು ನಿಲ್ಲಿಸಲು ಅವರು ವೈಯಕ್ತಿಕವಾಗಿ ನಿರ್ಧರಿಸಿದ್ದರು. ಅಂದಿನಿಂದ, ಅವರು ಸಾರ್ವಜನಿಕವಾಗಿ ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಸರಳವಾದ, ಯಾವುದೇ ಅಲಂಕಾರಗಳಿಲ್ಲದ ಬಿಳಿ ಸೀರೆಗಳಲ್ಲೇ ಕಾಣಿಸಿಕೊಳ್ಳುತ್ತಿದ್ದರು ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ತಿಳಿಸಿದೆ.ಹಣೆಯ ಮೇಲೆ ವಿಭೂತಿ, ಮುಖದ ಮೇಲೊಂದು ಮುಗುಳು ನಗುವಿರಿಸಿಕೊಂಡಿರುತ್ತಿದ್ದ ಅವರು ತಮ್ಮ ನಡತೆ ಮತ್ತು ಉಡುಪಿನ ಶಿಸ್ತಿನಿಂದಲೂ ಹೇಗೆ ಮಾದರಿಯಾಗಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದರು.PHOTOS | ಇತ್ತೀಚೆಗೆ ಅಭಿಮಾನಿಗಳ ಜತೆ ನಗು ಬೀರಿದ್ದ ಎಸ್. ಜಾನಕಿಗಾಯಕಿ ಎಸ್. ಜಾನಕಿ ನಿಧನ: ಸಿಎಂ ಡಿ.ಕೆ.ಶಿವಕುಮಾರ್, ಎಚ್ಡಿಕೆ ಸೇರಿ ಗಣ್ಯರ ಸಂತಾಪ