ಮೈಸೂರು| ಕಂಬಳ ಬೇಡ, ಸರ್ಕಾರ ಭಂಡತನ ಬಿಡಲಿ: ಬಿ.ವೈ. ವಿಜಯೇಂದ್ರ
ಮೈಸೂರು: ದಸರೆಯಲ್ಲಿ ಕಂಬಳ ಬೇಡ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಭಂಡತನವನ್ನು ಬಿಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ಇಲ್ಲಿ ಶನಿವಾರ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಮೈಸೂರಿನ ಜನರ ಭಾವನೆಗೆ ಬೆಲೆ ಕೊಡಬೇಕು ಎಂದರು.ಕರಾವಳಿಯಲ್ಲೇ ಕಂಬಳವನ್ನು ಸರ್ಕಾರ ಅದ್ದೂರಿಯಾಗಿ ಮಾಡಲಿ. ಅಲ್ಲಿನ ಪರಂಪರೆಯನ್ನು

ಮೈಸೂರು: ದಸರೆಯಲ್ಲಿ ಕಂಬಳ ಬೇಡ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಭಂಡತನವನ್ನು ಬಿಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ಇಲ್ಲಿ ಶನಿವಾರ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಮೈಸೂರಿನ ಜನರ ಭಾವನೆಗೆ ಬೆಲೆ ಕೊಡಬೇಕು ಎಂದರು.ಕರಾವಳಿಯಲ್ಲೇ ಕಂಬಳವನ್ನು ಸರ್ಕಾರ ಅದ್ದೂರಿಯಾಗಿ ಮಾಡಲಿ. ಅಲ್ಲಿನ ಪರಂಪರೆಯನ್ನು ಮೈಸೂರಿನ ಪರಂಪರೆಗೆ ತುರುಕಬೇಡಿ. ಕಂಬಳಕ್ಕೂ ತನ್ನದೇ ಆದ ಶ್ರೀಮಂತಿಕೆ ಇದೆ. ಅದನ್ನು ಸರ್ಕಾರ ಉಳಿಸಿಕೊಂಡು ಹೋಗಬೇಕು. ಕರಾವಳಿಯಲ್ಲಿ ಕಂಬಳವನ್ನ ಇನ್ನೂ ಆದ್ದೂರಿಯಾಗಿ ಮಾಡಲಿ, ಅದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದರು.
Read the complete story at Prajavani