48 ಸಾವಿರಕ್ಕೂ ಹೆಚ್ಚು ಹಾಡಿಗೆ ಧ್ವನಿಯಾದ ಜಾನಕಿಯಮ್ಮನ ಸಂಗೀತ ಪಯಣ ಹೀಗಿತ್ತು..
ದಕ್ಷಿಣ ಭಾರತದ ಗಾನ ಕೋಗಿಲೆ ಖ್ಯಾತಿಯ ಎಸ್. ಜಾನಕಿ ಅವರು ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ.ಮೈಸೂರಿನ ಬೋಗಾದಿಯ ಆಪ್ತರ ಮನೆಯಲ್ಲಿ ವಾಸವಿದ್ದ ಅವರನ್ನು ಅನಾರೋಗ್ಯದ ಕಾರಣ, ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯ ಸ್ತಂಭನದಿಂದಾಗಿ ಮೃತಪಟ್ಟಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.ಅಭಿಮಾನಿಗಳ ಪ್ರೀತಿಯ 'ಜಾನಕಿಯಮ್ಮ' ಜನಿಸಿದ್ದು ಆಂಧ್ರಪ್ರದೇಶದ

ದಕ್ಷಿಣ ಭಾರತದ ಗಾನ ಕೋಗಿಲೆ ಖ್ಯಾತಿಯ ಎಸ್. ಜಾನಕಿ ಅವರು ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ.ಮೈಸೂರಿನ ಬೋಗಾದಿಯ ಆಪ್ತರ ಮನೆಯಲ್ಲಿ ವಾಸವಿದ್ದ ಅವರನ್ನು ಅನಾರೋಗ್ಯದ ಕಾರಣ, ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯ ಸ್ತಂಭನದಿಂದಾಗಿ ಮೃತಪಟ್ಟಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.ಅಭಿಮಾನಿಗಳ ಪ್ರೀತಿಯ 'ಜಾನಕಿಯಮ್ಮ' ಜನಿಸಿದ್ದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ (1938ರ ಏಪ್ರಿಲ್ 23ರಂದು). ಮೂರನೇ ವಯಸ್ಸಿನಲ್ಲೇ ಅವರಲ್ಲಿ ಸಂಗೀತದ ಆಸಕ್ತಿ ಮೊಳಕೆಯೊಡೆದಿತ್ತು. ನಂತರದ ದಿನಗಳಲ್ಲಿ ಆಲ್ ಇಂಡಿಯಾ ರೇಡಿಯೊದ ರಾಷ್ಟ್ರೀಯ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಜನಪ್ರಿಯರಾಗಿದ್ದರು. ನಂತರ ಮದ್ರಾಸ್ನ ಎವಿಎಂ ಸ್ಟುಡಿಯೊದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಈ ಬಗ್ಗೆ ಮಲಯಾಳಂನ ‘ಮಾತೃಭೂಮಿ’ (www.mathrubhumi.com) ವರದಿ ಮಾಡಿದೆ.2013ರಲ್ಲಿ ಪದ್ಮಭೂಷಣ ನಿರಾಕರಿಸಿದ ನಂತರ ಎಸ್. ಜಾನಕಿ ಹೇಳಿದ್ದು...ಖ್ಯಾತ ಗಾಯಕಿ ಎಸ್.ಜಾನಕಿ ನಿಧನಟಿ. ಚಲಪತಿ ರಾವ್ ಅವರು ಸಂಗೀತ ಸಂಯೋಜಿಸಿದ್ದ ತಮಿಳು ಸಿನಿಮಾ ‘ವಿಧಿಯಿನ್ ವಿಲಯಾಟ್ಟು’ವಿನಲ್ಲಿ ಹಾಡುವ ಮೂಲಕ ಹಿನ್ನಲೆ ಗಾಯನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. 1957ರಲ್ಲಿ ತೆರೆ ಕಾಣಬೇಕಾದ ಆ ಸಿನಿಮಾಗೆ ಬಿಡುಗಡೆ ಭಾಗ್ಯವೇ ಒದಗಿಬರಲಿಲ್ಲ. ಆದರೆ, ಜಾನಕಿ ಅವರು ಅಲ್ಲಿಂದಾಚೆಗೆ ತಿರುಗಿ ನೋಡಿದ್ದೇ ಇಲ್ಲ.ತೆಲುಗು, ಕನ್ನಡ, ಮಲಯಾಳಂ, ತಮಿಳು ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಎಲ್ಲ ಭಾಷೆಗಳ ಸಿನಿಮಾಗಳಲ್ಲಿಯೂ ಹಾಡಿದ್ದಾರೆ. ಅಷ್ಟೇ ಅಲ್ಲ; ಹಿಂದಿ, ಬಂಗಾಳಿ, ಒರಿಯಾ, ಇಂಗ್ಲಿಷ್, ಸಂಸ್ಕೃತ, ಅಸ್ಸಾಮಿ, ಸಿಂಧಿ, ಕೊಂಕಣಿ, ತುಳು, ಜರ್ಮನ್ ಸೇರಿದಂತೆ ಇನ್ನಷ್ಟು ಭಾಷೆಗಳಲ್ಲಿಯೂ ಹಾಡಿ ಸೈ ಎನಿಸಿಕೊಂಡಿದ್ದಾರೆ. ಮಲಯಾಳಂ ಸಿನಿಮಾಗಳ ಸುಮಾರು 1,200ಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿರುವ ಅವರು, ಭಾರತದ 17 ಭಾಷೆಗಳಲ್ಲಿ 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇಂಗ್ಲಿಷ್, ಜಪಾನೀಸ್, ಅರೇಬಿಕ್, ಜರ್ಮನ್ ಮತ್ತು ಸಿಂಹಳ ಭಾಷೆಗಳಲ್ಲಿಯೂ ಹಾಡಿದ ಕೀರ್ತಿ ಅವರದ್ದು.ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಪ್ರಶಸ್ತಿಯನ್ನು ನಾಲ್ಕು ಬಾರಿ ಮುಡಿಗೇರಿಸಿಕೊಂಡಿರುವುದು ಅವರ ಕಂಠಸಿರಿಗೆ ಸಾಕ್ಷಿ. ತಮಿಳು ಸಿನಿಮಾ ‘ಪದಿನಾರು ವಯತಿನಿಲೆ' ಚಿತ್ರದ ‘ಸಿಂದೂರ ಪೂವೆ...’ ಗೀತೆಗೆ 1976ರಲ್ಲಿ ಮೊದಲ ಸಲ ಈ ಪ್ರಶಸ್ತಿಯನ್ನು ಬಾಚಿಕೊಂಡಿದ್ದ ಅವರು, ಮಲಯಾಳಂ ಭಾಷೆಯ `ಓಪ್ಪೋಲ್' ಸಿನಿಮಾದ ‘ಎಟ್ಟುಮನೂರ್ ಅಂಬಲತ್ತಿಲ್...’ ಗಾಯನಕ್ಕೆ 1980ರಲ್ಲಿ, ತೆಲುಗಿನ `ಸಿತಾರ' ಸಿನಿಮಾದ ‘ವೆನ್ನಲ್ಲೋ ಗೋದಾರಿ ಆನಂದಂ...’ ಹಾಡಿಗೆ 1984ರಲ್ಲಿ ಮತ್ತು ತಮಿಳಿನ `ದೇವರ್ ಮಗನ್’ ಸಿನಿಮಾದ ‘ಇಂಚಿ ಇಡುಪ್ಪಝಗಿ’ ಹಾಡಿಗೆ 1992ರಲ್ಲಿ ಪ್ರಶಸ್ತಿ ಗಳಿಸಿದ್ದರು.PHOTOS | ಇತ್ತೀಚೆಗೆ ಅಭಿಮಾನಿಗಳ ಜತೆ ನಗು ಬೀರಿದ್ದ ಎಸ್. ಜಾನಕಿಮಹಾರಾಜ ಮೈದಾನದಲ್ಲಿ ಜಾನಕಿ ಅಂತಿಮ ದರ್ಶನಕ್ಕೆ ಅವಕಾಶ: ಯತೀಂದ್ರ ಸಿದ್ದರಾಮಯ್ಯಮಲಯಾಳಂ ಚಿತ್ರರಂಗದ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ 14 ಸಲ, ಇದೇ ರೀತಿ ತಮಿಳಿನಲ್ಲಿ 7 ಸಲ, ತೆಲುಗಿನಲ್ಲಿ 10 ಬಾರಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ತಮಿಳುನಾಡು ಸರ್ಕಾರ ನೀಡುವ 'ಕಲೈಮಾಮಣಿ' ಪ್ರಶಸ್ತಿಯನ್ನು 1986ರಲ್ಲಿ ಗಳಿಸಿದ್ದ ಇವರು, 2002ರಲ್ಲಿ ಕೇರಳ ಸರ್ಕಾರದಿಂದ 'ಸಿನಿಮಾ ಆರ್ಕೈವರ್ಸ್ ಪ್ರಶಸ್ತಿ' ಪಡೆದಿದ್ದಾರೆ. 2013ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿತ್ತಾದರೂ, ತುಂಬಾ ತಡವಾಗಿ ಈ ಗೌರವ ನೀಡಲಾಗುತ್ತಿದೆ ಎಂದು ನಿರಾಕರಿಸಿದ್ದರು.ಗಾಯಕಿಯಾಗಿ ಮಾತ್ರವಲ್ಲದೆ, ತಮಿಳು, ತೆಲುಗು ಸಿನಿಮಾಗಳಿಗೆ ಹಲವು ಹಾಡುಗಳನ್ನು ಬರೆದಿದ್ದಾರೆ.ಮೈಸೂರಿನ ಮಾನಸ ಗಂಗೋತ್ರಿ ಆವರಣದಲ್ಲಿರುವ ತೆರೆದ ಸಭಾಂಗಣದಲ್ಲಿ 2017ರ ಅಕ್ಟೋಬರ್ 28ರಂದು ‘ಎಸ್. ಜಾನಕಿ ಮ್ಯೂಸಿಕಲ್ ನೈಟ್’ ನಡೆಸಿಕೊಡುವ ಮೂಲಕ, ಸಾರ್ವಜನಿಕ ಗಾಯನಕ್ಕೆ ಅಧಿಕೃತವಾಗಿ ವಿದಾಯ ಘೋಷಿಸಿದ್ದರು.ಮೈಸೂರಿನಲ್ಲಿ ಕೊನೆಯ ದಿನಗಳನ್ನು ಕಳೆದ ಜಾನಕಿಹಾಡು ನಿಲ್ಲಿಸಿದ ಗಾನ ಕೋಗಿಲೆ..ಜಾನಕಿ ಧ್ವನಿಯಲ್ಲಿ ಮೂಡಿದ್ದು 48 ಸಾವಿರ ಗೀತೆಗಳು!