ಧಾರ್ಮಿಕ ಕಾರ್ಯಗಳಿಂದ ಮಾನಸಿಕ ನೆಮ್ಮದಿ: ಮಹಾಂತ ರುದ್ರೇಶ್ವರ ಸ್ವಾಮೀಜಿ
ಹೊಳಲ್ಕೆರೆ: ‘ದೇವಸ್ಥಾನಕ್ಕೆ ಹೋಗುವುದು, ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ’ ಎಂದು ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಶಿವಗಂಗಾ ಹಾಗೂ ಮಹಾದೇವಪುರದ ಸಮೀಪ ನಿರ್ಮಿಸಿರುವ ರಾಮೇಶ್ವರ ದೇವಸ್ಥಾನದ ನಿರ್ಮಾಣದ ಸುವರ್ಣ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.‘ಶಿವಗಂಗಾದ

ಹೊಳಲ್ಕೆರೆ: ‘ದೇವಸ್ಥಾನಕ್ಕೆ ಹೋಗುವುದು, ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ’ ಎಂದು ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಶಿವಗಂಗಾ ಹಾಗೂ ಮಹಾದೇವಪುರದ ಸಮೀಪ ನಿರ್ಮಿಸಿರುವ ರಾಮೇಶ್ವರ ದೇವಸ್ಥಾನದ ನಿರ್ಮಾಣದ ಸುವರ್ಣ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.‘ಶಿವಗಂಗಾದ ಜಯಣ್ಣ ಅವರು ರಾಮೇಶ್ವರ ದೇವಸ್ಥಾನವನ್ನು ನಿರ್ಮಿಸಿ ಭಕ್ತರಿಗೆ ನೆರವಾಗಿದ್ದಾರೆ. ದೇವಸ್ಥಾನ ನಿರ್ಮಾಣ ಆಗಿ 50 ವರ್ಷ ತುಂಬಿರುವುದರಿಂದ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ. ಗ್ರಾಮಸ್ಥರೆಲ್ಲ ಒಗ್ಗೂಡಿ ದೇವರ ಕಾರ್ಯ ಗಳಲ್ಲಿ ಭಾಗವಹಿಸುತ್ತಾರೆ’ ಎಂದರು.‘ಇಲ್ಲಿರುವ ರಾಮೇಶ್ವರ ಲಿಂಗದ ಲಕ್ಷಣವನ್ನು ನೋಡಿದರೆ ಬಾದಾಮಿ ಚಾಲುಕ್ಯರ ಕಾಲಕ್ಕಿಂತ ಪೂರ್ವದ್ದು ಎಂದು ತಿಳಿಯುತ್ತದೆ. ಇದು ಅಂದಾಜು 1500 ವರ್ಷಗಳಷ್ಟಾದರೂ ಪ್ರಾಚೀನವಾದದ್ದು. ಜಯಣ್ಣ ಅವರು ಕಾಡು ಗಿಡಗಳ ಮಧ್ಯೆ ಕಳೆದು ಹೋಗಿದ್ದ ಈ ಲಿಂಗವನ್ನು ಗುರುತಿಸಿ ಅದಕ್ಕೊಂದು ದೇವಸ್ಥಾನ ನಿರ್ಮಾಣ ಮಾಡಿದ್ದು, ಇತಿಹಾಸ ಉಳಿಸಿದ್ದಾರೆ. ಜಯಣ್ಣ ಅವರ ಸಹೋದರರು ಅದರ ಪೂಜಾ ನಿರ್ವಹಣೆಯನ್ನು ಮುಂದುವರಿಸಿರುವುದು ಶ್ಲಾಘನೀಯ’ ಎಂದು ಶಾಸನತಜ್ಞ ಬಿ.ರಾಜಶೇಖರಪ್ಪ ಹೇಳಿದರು.ನಿವೃತ್ತ ಎಂಜಿನಿಯರ್ ಗುಂಡೇರಿ ಚಂದ್ರಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು.ವಕೀಲ ಎಂ.ಸಿ.ತಿಪ್ಪೇಸ್ವಾಮಿ, ರೇಣುಕಾರಾಧ್ಯ, ದೇವಿರಮ್ಮ, ಎಸ್. ಆರ್.ಜಯಪ್ರಕಾಶ್, ಆರ್. ಶಂಭುಲಿಂಗಪ್ಪ, ಆರ್. ಸೌಭಾಗ್ಯಾ, ಪ್ರೊ.ಎಸ್.ಎಂ.ಕೊಟ್ರೇಶಪ್ಪ, ಪಿ.ಯಶೋಧಾ, ಜ್ಯೋತಿ ಉಪಸ್ಥಿತರಿದ್ದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260711-44-367552604