ಮೈಸೂರಿನಲ್ಲಿ ಕೊನೆಯ ದಿನಗಳನ್ನು ಕಳೆದ ಜಾನಕಿ
ಮೈಸೂರು: ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರು ಕೊನೆಯ ದಿನಗಳನ್ನು ತಮ್ಮ ನೆಚ್ಚಿನ ಮೈಸೂರಿನಲ್ಲಿ ಕಳೆದರು.ಇಲ್ಲಿನ ಬೋಗಾದಿಯ ಹರ್ಷ ಬಾರ್ ಹಿಂಭಾಗದ ಅಭಿಮಾನಿಯೊಬ್ಬರ ಮನೆಯಲ್ಲಿ ಅವರು ವಾಸವಿದ್ದರು. ಈ ಮನೆಯ ಮಾಲೀಕರಾದ ಭವ್ಯಾ ಅವರು ಜಾನಕಿ ಅವರು ಉಳಿದುಕೊಳ್ಳಲು ಅಗತ್ಯವಾದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು.ಇಲ್ಲಿಯೇ ಎರಡು ವರ್ಷಗಳಿಂದಲೂ ಇದ್ದ ಅವರು ಜಿಲ್ಲೆಯ ವಿ

ಮೈಸೂರು: ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರು ಕೊನೆಯ ದಿನಗಳನ್ನು ತಮ್ಮ ನೆಚ್ಚಿನ ಮೈಸೂರಿನಲ್ಲಿ ಕಳೆದರು.ಇಲ್ಲಿನ ಬೋಗಾದಿಯ ಹರ್ಷ ಬಾರ್ ಹಿಂಭಾಗದ ಅಭಿಮಾನಿಯೊಬ್ಬರ ಮನೆಯಲ್ಲಿ ಅವರು ವಾಸವಿದ್ದರು. ಈ ಮನೆಯ ಮಾಲೀಕರಾದ ಭವ್ಯಾ ಅವರು ಜಾನಕಿ ಅವರು ಉಳಿದುಕೊಳ್ಳಲು ಅಗತ್ಯವಾದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು.ಇಲ್ಲಿಯೇ ಎರಡು ವರ್ಷಗಳಿಂದಲೂ ಇದ್ದ ಅವರು ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ಆಗಾಗ ಭೇಟಿ ನೀಡುತ್ತಿದ್ದರು. ಅಪಾರ ದೈವಭಕ್ತೆಯಾದ ಅವರು ನಂಜನಗೂಡು ನಂಜುಂಡೇಶ್ವರ, ಚಾಮುಂಡೇಶ್ವರಿ, ಯೋಗಾನರಸಿಂಹಸ್ವಾಮಿ ದೇವಾಲಯ ಸೇರಿದಂತೆ ವಿವಿಧೆಡೆ ಭೇಟಿ ಕೊಟ್ಟಿದ್ದರು. ಅವರಿಗೆ ಇಲ್ಲಿ ಯಾರೂ ಸಂಬಂಧಿಕರು ಇರಲಿಲ್ಲ. ಆದರೆ ಅಭಿಮಾನಿಗಳ ಪ್ರೀತಿಗೆ ಕೊರತೆ ಇರಲಿಲ್ಲ ಎಂದು ಅವರ ಅಭಿಮಾನಿಗಳು ಹೇಳಿದರು.ಪುತ್ರನ ನಿಧನದ ನಂತರ ಬಹಳ ಶೋಕಿತರಾಗಿದ್ದರು. ವಯೋಸಹಜ ಸಮಸ್ಯೆಗಳೂ ಅವರನ್ನು ಬಾಧಿಸುತ್ತಿತ್ತು ಎಂದು ಅವರು ತಿಳಿಸಿದರು.ಜಾನಕಿ ಅಮ್ಮ ಇಲ್ಲೇ ಇರುತ್ತಿದ್ದರು. ನಾವೂ ಆಗಾಗ ಬಂದು ಭೇಟಿಯಾಗುತ್ತಿದ್ದೆವು. ನೋಡುತ್ತಿದ್ದೆವು. ಬಹಳ ದಿನಗಳಿಂದಲೂ ಅವರು ಇಲ್ಲೇ ಇದ್ದರು ಎಂದು ಬೋಗಾದಿಯ ನಿವಾಸಿ ಸಂಜಯ್ ಹೇಳಿದರು.ಅವರನ್ನು ನೋಡಿಕೊಳ್ಳುತ್ತಿದ್ದ ಭಾಗ್ಯಾ ದುಃಖಿತರಾಗಿ ಕುಳಿತಿದ್ದರು. ಬೇಡ ಬೇಡ ಎಂದರೂ ಮಂಗಳೂರಿಗೆ ಹೋಗಿದ್ದರು. ಅಲ್ಲಿಂದ ಬಂದ ಮೇಲೆ ವೈರಲ್ ಜ್ವರ ಎಂದು ಆಸ್ಪತ್ರೆಗೆ ಹೋದರು. ಈಗ ನೋಡಿದರೆ ಹೀಗಾಗಿದೆ. ಇನ್ಮುಂದೆ ಅವರನ್ನು ಹೇಗೆ ನೋಡಿಕೊಳ್ಳಲಿ ಎಂದು ಅಳುತ್ತಲೇ ಕೇಳಿದರು.ಅವರಿಗೆ ಇಲ್ಲಿ ಸಂಬಂಧಿಕರು ಯಾರೂ ಇರಲಿಲ್ಲ. ಅಭಿಮಾನಿಗಳೇ ಎಲ್ಲವೂ ಆಗಿದ್ದರು ಎಂದು ಹೇಳಿದರು.ನಂಜನಗೂಡು ಗಣಪತಿ ಗುಡಿಯ ಅರ್ಚಕ ಶಂಕರನಾರಾಯಣ ಅವರು, ‘15 ದಿನಗಳ ಹಿಂದೆ ನಾನೇ ಬಂದು ಭೇಟಿಯಾಗಿ ದೇವಸ್ಥಾನದ ಪ್ರಸಾದ ಕೊಟ್ಟು ಹೋಗಿದ್ದೆ. ಕುಟುಂಬದವರೆಲ್ಲರೂ ಬಂದು ಫೋಟೊ ತೆಗೆಸಿಕೊಂಡಿದ್ದೆವು. ಆಗಾಗ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಬರುತ್ತಿದ್ದರು. ಅಪಾರ ದೈವ ಭಕ್ತೆಯಾಗಿದ್ದರು’ ಎಂದು ನೆನೆದರು.ನಂಜನಗೂಡಿನ ಈಶ್ವರ ದೇವಾಲಯದ ಅರ್ಚಕ ವಿಶ್ವನಾಥ್ ದೀಕ್ಷಿತ್, ‘ಜಾನಕಿ ಅಮ್ಮ ನನಗೆ 2 ವರ್ಷದಿಂದ ಪರಿಚಯ. ಕುಟುಂಬದವರಂತೆ ಆಗಿ ಹೋಗಿದ್ದರು. ನಮ್ಮ ಮನೆಗೂ ಎರಡು ಮೂರು ಬಾರಿ ಬಂದಿದ್ದರು. ಎರಡೂವರೆ ವರ್ಷದಿಂದಲೂ ಇಲ್ಲಿ ಇರುತ್ತಿದ್ದರು’ ಎಂದರು.ನವೀನ್ ಎನ್ನುವವರು ಅವರ ಕಟ್ಟಾ ಅಭಿಮಾನಿ. ಇಲ್ಲಿನ ಬೋಗಾದಿಯ ಹರ್ಷ ಬಾರ್ ಎದುರಿರುವ ತಮ್ಮ ಪೀಠೋಪಕರಣಗಳ ಅಂಗಡಿಗೆ ಎಸ್.ಜಾನಕಿ ಫರ್ನಿಚರ್ ಅಂಡ್ ಟಿಂಬರ್ಸ್ ಅಂಗಡಿ ಎಂದೇ ಹೆಸರಿಟ್ಟಿದ್ದಾರೆ.ಖ್ಯಾತ ಗಾಯಕಿ ಎಸ್.ಜಾನಕಿ ನಿಧನಗಾಯಕಿ ಎಸ್. ಜಾನಕಿ ನಿಧನ: ಸಿಎಂ ಡಿ.ಕೆ.ಶಿವಕುಮಾರ್, ಎಚ್ಡಿಕೆ ಸೇರಿ ಗಣ್ಯರ ಸಂತಾಪ