ಚಿಕ್ಕಬಳ್ಳಾಪುರ|ನ್ಯಾಯಾಧೀಶರ ಕುರ್ಚಿ ಮೇಲೆ ಸಾಸಿವೆ ಚೆಲ್ಲಿ ವಾಮಾಚಾರ: ಆರೋಪಿ ಬಂಧನ
ಚಿಕ್ಕಬಳ್ಳಾಪುರ: ನಗರದ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಕುಳಿತುಕೊಳ್ಳುವ ಕುರ್ಚಿ ಮತ್ತು ಡಯಾಸ್ ಮೇಲೆ ಸಾಸಿವೆ ಚೆಲ್ಲಿ ವಾಮಾಚಾರ ಮಾಡಿದ ಆರೋಪದ ಮೇಲೆ ಮಂಜುಳಾ (65) ಎಂಬುವವರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜುಳಾ, ದಾವೆಯೊಂದರಲ್ಲಿ ಮೂರನೇ ಪ್ರತಿವಾದಿ ಆಗಿರುವ ಚಿಕ್ಕಬಳ್ಳಾಪುರದ ವ್ಯಕ
ಚಿಕ್ಕಬಳ್ಳಾಪುರ: ನಗರದ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಕುಳಿತುಕೊಳ್ಳುವ ಕುರ್ಚಿ ಮತ್ತು ಡಯಾಸ್ ಮೇಲೆ ಸಾಸಿವೆ ಚೆಲ್ಲಿ ವಾಮಾಚಾರ ಮಾಡಿದ ಆರೋಪದ ಮೇಲೆ ಮಂಜುಳಾ (65) ಎಂಬುವವರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜುಳಾ, ದಾವೆಯೊಂದರಲ್ಲಿ ಮೂರನೇ ಪ್ರತಿವಾದಿ ಆಗಿರುವ ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬರ ಸಹೋದರಿ ಆಗಿದ್ದಾರೆ.ಸಾಸಿವೆ ಚೆಲ್ಲಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಒಂದನೇ ಹೆಚ್ಚುವರಿ ಸಿವಿಲ್ ಹಿರಿಯ ನ್ಯಾಯಾಧೀಶರ ಆದೇಶದ ಮೇರೆಗೆ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ನೇತ್ರಾ, ನಗರ ಠಾಣೆಗೆ ದೂರು ನೀಡಿದ್ದರು.‘ಯಾವ ಕಾರಣಕ್ಕಾಗಿ ಈ ರೀತಿ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ನ್ಯಾಯಾಲಯದಲ್ಲಿ ಆತಂಕ ಮತ್ತು ಭಯದ ವಾತಾವರಣ ಸೃಷ್ಟಿಯಾಗಿದೆ. ಮಂಜುಳಾ ಅವರ ವಿರುದ್ಧ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿ ಹಾಗೂ ವಾಮಾಚಾರ ಪ್ರತಿಬಂಧಕ ಹಾಗೂ ನಿರ್ಮೂಲನಾ ಅಧಿನಿಯಮದ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಕೋರಿದ್ದರು.
Read the complete story at Prajavani