ಈಶಾ ಯೋಗ ಕೇಂದ್ರದಲ್ಲಿ ಮದುವೆಯಾದ ಕಿರುತೆರೆ ನಟಿ ಪಲಕ್ ಪುರಸ್ವಾನಿ
ಕಿರುತೆರೆ ನಟಿ ಹಾಗೂ ಹಿಂದಿ ಬಿಗ್ಬಾಸ್ ಒಟಿಟಿ ಸೀಸನ್ 2ರ ಸ್ಪರ್ಧಿಯಾಗಿದ್ದ ಪಲಕ್ ಪುರಸ್ವಾನಿ ಅವರು ತಮ್ಮ ಪ್ರಿಯಕರನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಅವರ ‘ಈಶಾ ಯೋಗ ಕೇಂದ್ರ’ದಲ್ಲಿ ಪಲಕ್ ಪುರಸ್ವಾಮಿ ಅವರು ರೋಹನ್ ಖನ್ನಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಇಬ್ಬರ ಮದುವೆ ಅತ್ಯಂತ ಸರಳ

ಕಿರುತೆರೆ ನಟಿ ಹಾಗೂ ಹಿಂದಿ ಬಿಗ್ಬಾಸ್ ಒಟಿಟಿ ಸೀಸನ್ 2ರ ಸ್ಪರ್ಧಿಯಾಗಿದ್ದ ಪಲಕ್ ಪುರಸ್ವಾನಿ ಅವರು ತಮ್ಮ ಪ್ರಿಯಕರನ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಅವರ ‘ಈಶಾ ಯೋಗ ಕೇಂದ್ರ’ದಲ್ಲಿ ಪಲಕ್ ಪುರಸ್ವಾಮಿ ಅವರು ರೋಹನ್ ಖನ್ನಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಇಬ್ಬರ ಮದುವೆ ಅತ್ಯಂತ ಸರಳ ಹಾಗೂ ಆಧ್ಯಾತ್ಮಿಕ ವಾತಾವರಣದಲ್ಲಿ ನೆರವೇರಿದೆ.ಜೂನ್ 26ರಂದು ಆಪ್ತರು ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ಮದುವೆಯಾಗಿದೆ. ಮದುವೆಯ ಸುಂದರ ಚಿತ್ರಗಳನ್ನು ದಂಪತಿ ಇಂದು (ಜುಲೈ.11) ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಚಿತ್ರಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.ಇನ್ಸ್ಟಾಗ್ರಾಂನಲ್ಲಿ ಸರಣಿ ಫೋಟೊಗಳನ್ನು ಹಂಚಿಕೊಂಡ ನಟಿ ಪಲಕ್ ಪುರಸ್ವಾಮಿ ಭಾವನಾತ್ಮಕವಾಗಿ ಅಡಿಬರಹ ಬರೆದಿದ್ದಾರೆ. ‘ಕೆಲವು ಪ್ರೇಮ ಕಥೆಗಳನ್ನು ವಿಧಿ ಬರೆಯುತ್ತದೆ. ಆದರೆ ನಮ್ಮ ಕಥೆಯನ್ನು ಸ್ವತಃ ಮಹಾದೇವನೇ ಆರಿಸಿದ್ದಾನೆ. ಎರಡು ಆತ್ಮಗಳು.. ಇಂದಿನಿಂದ ಶಾಶ್ವತವಾಗಿ ಒಂದಾಗಿವೆ. 26.06.2026’ ಎಂದು ತಮ್ಮ ಮದುವೆಯ ದಿನಾಂಕದೊಂದಿಗೆ ಅಡಿಬರಹ ಬರೆದಿದ್ದಾರೆ.ಸರಳ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಈ ವಿವಾಹದಲ್ಲಿ, ಪಲಕ್ ಕೆಂಪು ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸಿದ್ದಾರೆ. ರೋಹನ್ ಶ್ವೇತವರ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಈಶಾ ಕೇಂದ್ರದ ಪ್ರಶಾಂತ ಮತ್ತು ಆಧ್ಯಾತ್ಮಿಕ ಪರಿಸರದಲ್ಲಿ ಇವರಿಬ್ಬರು ಸಪ್ತಪದಿ ತುಳಿದಿದ್ದಾರೆ.ಇನ್ನು, ಫೋಟೊಗಳು ನೋಡಿದ ಕಿರುತೆರೆ ಹಾಗೂ ಚಿತ್ರರಂಗದ ಪ್ರಮುಖರು ಮತ್ತು ಅಭಿಮಾನಿಗಳು ನವದಂಪತಿಗೆ ಶುಭ ಹಾರೈಸಿದ್ದಾರೆ. ಕಳೆದ ವರ್ಷ ಅಂದರೆ 2025ರ ಏಪ್ರಿಲ್ನಲ್ಲಿ ಟರ್ಕಿಯ ಕ್ಯಾಪಡೋಸಿಯಾ ಪ್ರವಾಸದಲ್ಲಿದ್ದಾಗ ರೋಹನ್ ಖನ್ನಾ ಅವರು ಪಲಕ್ ಅವರಿಗೆ ಪ್ರೇಮ ನಿವೇದನೆ ಮಾಡಿದ್ದರು. ಆ ಬಳಿಕ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಪಲಕ್, ರೋಹನ್ ಜೊತೆ ಹೊಸ ಜೀವನ ಆರಂಭಿಸಿದ್ದಾರೆ. View this post on Instagram