ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ: ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ
ಮಂಡ್ಯ: ‘ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಒಂದು ಅವಕಾಶ ಕೊಟ್ಟು ನೋಡಲಿ. ಪಕ್ಷ ಸಂಘಟನೆ ಮಾಡಿಲ್ಲವಾದರೆ ತೆಗೆದು ಹಾಕಲಿ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಮೇಲೆ ಒತ್ತಡ ಹಾಕಿದ್ದೇನೆ. ಹಿರಿಯ ನಾಯಕರ ಭೇಟಿ ಮಾಡಿ ಅವಕಾಶ ಕೇಳಿದ್ದೇನೆ’ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು. ಶನಿವಾರ ಮಾಧ್ಯಮದವರೊಂದಿಗೆ ಅವರು ಮಾತ

ಮಂಡ್ಯ: ‘ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಒಂದು ಅವಕಾಶ ಕೊಟ್ಟು ನೋಡಲಿ. ಪಕ್ಷ ಸಂಘಟನೆ ಮಾಡಿಲ್ಲವಾದರೆ ತೆಗೆದು ಹಾಕಲಿ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರ ಮೇಲೆ ಒತ್ತಡ ಹಾಕಿದ್ದೇನೆ. ಹಿರಿಯ ನಾಯಕರ ಭೇಟಿ ಮಾಡಿ ಅವಕಾಶ ಕೇಳಿದ್ದೇನೆ’ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು. ಶನಿವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಮೂರನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಮ್ಮ ಕುಟುಂಬದವರು 8 ಬಾರಿ ಸ್ಪರ್ಧೆ ಮಾಡಿದ್ದಾರೆ. ನಮ್ಮ ತಂದೆ, ತಾಯಿ ಮತ್ತು ನನಗೆ ಶಾಸಕ ಸ್ಥಾನದ ಅವಕಾಶ ಸಿಕ್ಕಿದೆ. ಮೊದಲ ಹಂತದಲ್ಲಿ 14 ಶಾಸಕರಿಗೆ ಸಚಿವ ಸ್ಥಾನ ನೀಡಿದ್ದಾರೆ. ರಾಹುಲ್ ಗಾಂಧಿಯವರು ಪ್ರವಾಸದಲ್ಲಿರುವ ಕಾರಣ, ಸಚಿವ ಸಂಪುಟ ವಿಸ್ತರಣೆ ತಡವಾಗಿದೆ. ಸದ್ಯದಲ್ಲೇ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದರು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ಅಧ್ಯಕ್ಷನಾಗಿ ಕಪ್ಪು ಚುಕ್ಕೆ ಬಾರದ ಹಾಗೆ ಕೆಲಸ ಮಾಡಿದ್ದೇನೆ. ನರೇಂದ್ರಸ್ವಾಮಿ ಮತ್ತು ನನಗೆ ಇಬ್ಬರಿಗೂ ಅನುಭವ ಇದೆ. ಸರ್ಕಾರ ಇದುವರೆಗೂ ಗೌರವಯುತವಾಗಿ ನಡೆಸಿಕೊಂಡಿದೆ ಎಂದರು. ಕೆಆರ್ಎಸ್ ಅಣೆಕಟ್ಟೆ ಈ ಬಾರಿ ಮಳೆಯ ಕೊರತೆಯಿಂದ ತುಂಬಿಲ್ಲ. ಹೀಗಾಗಿ ಬೆಳೆಗಳಿಗಿಂತ ಕುಡಿಯುವ ನೀರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ಕೆರೆ–ಕಟ್ಟೆ, ಜನ–ಜಾನುವಾರುಗಳಿಗೆ ನೀರು ಬಿಡಲು ಮನವಿ ಮಾಡಿದ್ದೇವೆ ಎಂದರು. ಸಿಎಂ ಜೊತೆ ಚರ್ಚಿಸಿ ಜಲಸಂಪನ್ಮೂಲ ಸಚಿವರು ನಿರ್ಧಾರ ಕೈಗೊಳ್ಳುತ್ತಾರೆ. ಮೋಡ ಬಿತ್ತನೆಗೂ ಒತ್ತಾಯಿಸಿದ್ದೇವೆ. ಕಷ್ಟಕಾಲದಲ್ಲಿ ಬರ ಪರಿಹಾರ ಕೊಡಬೇಕು. ಈ ಬಗ್ಗೆ ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು. ‘ನನ್ನ ಮೇಲೆ ಕ್ರಷರ್ ದೂಳಿಲ್ಲ: ರವೀಂದ್ರಗೆ ಶಾಸಕ ರಮೇಶ ತಿರುಗೇಟು‘ರವೀಂದ್ರ ಶ್ರೀಕಂಠಯ್ಯ ಅವರನ್ನು ನೋಡಿ ಗಾಬರಿಯಾದೆ. ಕ್ರಷರ್ ದೂಳಿನಿಂದ ಎದ್ದು ಬಂದು ರೈತರ ಒಣಗಿದ ಕಬ್ಬು ವೀಕ್ಷಿಸಿದ್ದಾರೆ. ಸದ್ಯ ಮೂರು ವರ್ಷವಾದ ನಂತರ ರೈತರ ಪರ ಬಂದಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.ನನ್ನ ಮೇಲೆ ರಿಯಲ್ ಎಸ್ಟೇಟ್ ಮಾಡ್ತಾರೆ ಎಂದು ಆರೋಪಿಸಿದ್ದಾರೆ. ನಾನು ಕದ್ದುಮುಚ್ಚಿ ಕ್ರಷರ್ ಹಾಕಿಲ್ಲ. ಕ್ರಷರ್ ದೂಳು ನನ್ನ ಮೇಲಿಲ್ಲ. ರೈತರ ಬಳಿ ಜಮೀನು ಖರೀದಿಸಿ ವ್ಯಾಪಾರ ಮಾಡುತ್ತೇವೆ ಅಷ್ಟೆ. ಬಿಗ್ ಕಪ್ ಹತ್ತಿರ ಬಂದರೆ ಅವರಿಗೂ ಕಾಫಿ ಕೊಡಿಸುತ್ತೇನೆ. ನಾನು ಜನರಿಗೆ ಸಿಗುವ ಶಾಸಕ. ಶ್ರೀರಂಗಪಟ್ಟಣ ರೈಲ್ವೆ ನಿಲ್ದಾಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಕೆಳಗೆ ಇಳಿದು ಬರಲಿಲ್ಲ ಅಂತ ದೂರದಲ್ಲೇ ನಿಂತಿದ್ದ ರವೀಂದ್ರ ಅವರು ಕುಮಾರಣ್ಣನವರಿಗೆ ಮಾರ್ಗದರ್ಶನ ಮಾಡುತ್ತಾರೆ. ಕುಮಾರಣ್ಣ ನಿಮಗೆ ಟಿಕೆಟ್ ಕೊಡದಿದ್ದರೆ ನೀವು ಗೆಲ್ತಿದ್ರಾ? ರವೀಂದ್ರ ಅವರು ಜೆಡಿಎಸ್ಗೆ ರಾಜೀನಾಮೆ ಕೊಟ್ಟು, ವಿರೋಧ ಪಕ್ಷದ ನಾಯಕರಾಗಲಿ. ನೀವೇ ಸರ್ಕಾರಕ್ಕೆ ತಿದ್ದಿ ಬುದ್ಧಿ ಹೇಳಿ’ ಎಂದು ವ್ಯಂಗ್ಯವಾಡಿದರು.