ಟಿ20: ಬಟ್ಲರ್, ಬ್ರೂಕ್ ಸಿಡಿಲಬ್ಬರ; ಭಾರತ ವಿರುದ್ಧ ಇಂಗ್ಲೆಂಡ್ಗೆ ಜಯ
ಸೌತಾಂಪ್ಟನ್: ಜೋಸ್ ಬಟ್ಲರ್ (131;64ಎ) ಮತ್ತು ನಾಯಕ ಹ್ಯಾರಿ ಬ್ರೂಕ್ (ಔಟಾಗದೇ 95;45ಎ) ಅವರು ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ವಿರುದ್ಧದ ಐದನೇ ಮತ್ತು ಕೊನೆಯ ಟಿ20 ಕ್ರಿಕೆಟ್ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿತು.ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 3 ವಿಕೆಟ್ಗೆ 257 ರನ್ಗಳ ಬೃಹತ್ ಮೊತ್ತ ಪೇರಿಸಿತು. ಈ ಮೊತ್ತವನ್ನು ಬೆನ

ಸೌತಾಂಪ್ಟನ್: ಜೋಸ್ ಬಟ್ಲರ್ (131;64ಎ) ಮತ್ತು ನಾಯಕ ಹ್ಯಾರಿ ಬ್ರೂಕ್ (ಔಟಾಗದೇ 95;45ಎ) ಅವರು ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ವಿರುದ್ಧದ ಐದನೇ ಮತ್ತು ಕೊನೆಯ ಟಿ20 ಕ್ರಿಕೆಟ್ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿತು.ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 3 ವಿಕೆಟ್ಗೆ 257 ರನ್ಗಳ ಬೃಹತ್ ಮೊತ್ತ ಪೇರಿಸಿತು. ಈ ಮೊತ್ತವನ್ನು ಬೆನ್ನತ್ತಿದ ಭಾರತ 8 ವಿಕೆಟ್ಗಳನ್ನು ಕಳೆದುಕೊಂಡು 201 ರನ್ ಗಳಿಸಲು ಮಾತ್ರ ಶಕ್ತವಾಯಿತು.ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದಾಗಿದ್ದರೆ, ಉಳಿದ ಮೂರು ಪಂದ್ಯಗಳನ್ನು ಆತಿಥೇಯ ತಂಡ ಗೆದ್ದು 3–0ಯಿಂದ ಸರಣಿಯನ್ನು ವಶ ಮಾಡಿಕೊಂಡಿತ್ತು. ಇಂದಿನ ಕೊನೆಯ ಪಂದ್ಯವನ್ನು ಗೆದ್ದುಕೊಂಡಿತು.ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿತು. ಎರಡನೇ ಓವರ್ನಲ್ಲಿ ಪ್ರಸಿದ್ಧ ಕೃಷ್ಣ ಅವರು ಫಿಲ್ ಸಾಲ್ಟ್ (6) ಅವರ ವಿಕೆಟ್ ಉರುಳಿಸಿದರು. ಆದರೆ, ನಂತರದಲ್ಲಿ ಬಟ್ಲರ್ ಮತ್ತು ಬ್ರೂಕ್ ಅವರು ಭಾರತದ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 102 ಎಸೆತಗಳಲ್ಲಿ ದಾಖಲೆಯ 233 ರನ್ ಸೇರಿಸಿದರು.ಬಟ್ಲರ್ ಇನಿಂಗ್ಸ್ನಲ್ಲಿ 12 ಬೌಂಡರಿ ಮತ್ತು ಎಂಟು ಸಿಕ್ಸರ್ ಒಳಗೊಂಡಿದ್ದರೆ, ಬ್ರೂಕ್ ಇನಿಂಗ್ಸ್ನಲ್ಲಿ ನಾಲ್ಕು ಬೌಂಡರಿ ಮತ್ತು ಎಂಟು ಸಿಕ್ಸರ್ ಸೇರಿದ್ದವು. ಸಂಕ್ಷಿಪ್ತ ಸ್ಕೋರ್:ಇಂಗ್ಲೆಂಡ್: 20 ಓವರ್ಗಳಲ್ಲಿ 3 ವಿಕೆಟ್ಗೆ 257 ಭಾರತ: 20 ಓವರ್ಗಳಲ್ಲಿ 8 ವಿಕೆಟ್ಗೆ 201