ನೀಟ್ ಪೇಪರ್ ಲೀಕ್ ಕೇಸ್ – ಬಂಧಿತ 13 ಮಂದಿಯ ನ್ಯಾಯಾಂಗ ಬಂಧನ ಜು.24ರವರೆಗೆ ವಿಸ್ತರಣೆ
ನವದೆಹಲಿ: ನೀಟ್-ಯುಜಿಸಿ ಪ್ರಶ್ನೆಪತ್ರಿಕೆ ಸೋರಿಕೆ (Neet Paper Leak) ಪ್ರಕರಣದ 13 ಆರೋಪಿಗಳ ನ್ಯಾಯಾಂಗ ಬಂಧನವನ್ನು ಜು.24ರವರೆಗೆ ವಿಸ್ತರಿಸಿ ದೆಹಲಿಯ ರೌಸ್ ಅವೆನ್ಯೂ ಕೋರ್ಟ್ (Rouse Avenue District Court) ಆದೇಶ ಹೊರಡಿಸಿದೆ. ಆರೋಪಿಗಳ ನಾಯಾಂಗ ಬಂಧನ (Judicial Custody) ಅವಧಿಯನ್ನು 14 ದಿನಗಳ ಕಾಲ ವಿಸ್ತರಿಸುವಂತೆ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿ

ನವದೆಹಲಿ: ನೀಟ್-ಯುಜಿಸಿ ಪ್ರಶ್ನೆಪತ್ರಿಕೆ ಸೋರಿಕೆ (Neet Paper Leak) ಪ್ರಕರಣದ 13 ಆರೋಪಿಗಳ ನ್ಯಾಯಾಂಗ ಬಂಧನವನ್ನು ಜು.24ರವರೆಗೆ ವಿಸ್ತರಿಸಿ ದೆಹಲಿಯ ರೌಸ್ ಅವೆನ್ಯೂ ಕೋರ್ಟ್ (Rouse Avenue District Court) ಆದೇಶ ಹೊರಡಿಸಿದೆ. ಆರೋಪಿಗಳ ನಾಯಾಂಗ ಬಂಧನ (Judicial Custody) ಅವಧಿಯನ್ನು 14 ದಿನಗಳ ಕಾಲ ವಿಸ್ತರಿಸುವಂತೆ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ವೇಳೆ ಆರೋಪಿಗಳು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಈ ವೇಳೆ ಸಿಬಿಐ ಅಧಿಕಾರಿಗಳು, ವಿಚಾರಣೆ ಇನ್ನೂ ಪ್ರಗತಿಯಲ್ಲಿದೆ. ಪ್ರಕರಣ ಸಂಬಂಧ ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜು.20ರೊಳಗೆ ನೀಟ್ ಮರುಪರೀಕ್ಷೆ ಫಲಿತಾಂಶ? ಸಿಬಿಐ ಮನವಿಯಂತೆ ಆರೋಪಿಗಳಾದ ಶಿವರಾಜ್, ತೇಜಸ್ ಶಾ, ದಿನೇಶ್, ವಿಕಾಸ್, ಮಂಗಿ ಲಾಲ್, ಯಶ್, ಪ್ರಹ್ಲಾದ್, ಡಾ.ಮನೋಜ್, ಧನಂಜಯ್, ಶುಭಂ, ಮನೀಷಾ, ಮನೀಶಾ ವಾಘ್ಮನಾರ್ ಸೇರಿ ಒಟ್ಟು 13 ಜನರ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ಅಕ್ರಮದ ಹಿನ್ನೆಲೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಮೇ 3ರಂದು ನಡೆದಿದ್ದ ಪರೀಕ್ಷೆಯನ್ನು ರದ್ದುಗೊಳಿಸಿ, ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಬಳಿಕ ಜೂನ್ 21ರಂದು ದೇಶಾದ್ಯಂತ ಮರುಪರೀಕ್ಷೆಯನ್ನು ಕಟ್ಟುನಿಟ್ಟಿನ ಭದ್ರತೆಯಲ್ಲಿ ನಡೆದಿದೆ.ಇದನ್ನೂ ಓದಿ: ನೀಟ್ಗಾಗಿ ಟೆಲಿಗ್ರಾಂ ನಿಷೇಧ – ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಹೈಕೋರ್ಟ್