2013ರಲ್ಲಿ ಪದ್ಮಭೂಷಣ ನಿರಾಕರಿಸಿದ ನಂತರ ಎಸ್. ಜಾನಕಿ ಹೇಳಿದ್ದು...
ದಕ್ಷಿಣ ಭಾರತದ ಗಾನ ಕೋಗಿಲೆ ಎಸ್.ಜಾನಕಿ (88) ಇಹಲೋಕ ತ್ಯಜಿಸಿದ್ದಾರೆ. ಆರು ದಶಕಗಳಲ್ಲಿ, 20 ಭಾಷೆಗಳಲ್ಲಿ ಸುಮಾರು 48 ಸಾವಿರ ಹಾಡುಗಳಿಗೆ ಧ್ವನಿಯಾಗಿದ್ದ ಅವರನ್ನು ಅಭಿಮಾನಿಗಳು, ಆಪ್ತರು ಪ್ರೀತಿಯಿಂದ ಕರೆಯುತ್ತಿದ್ದುದು 'ಜಾನಕಿ ಅಮ್ಮ' ಎಂತಲೆ. 2026ರ ಜನವರಿಯಲ್ಲಿ ಪುತ್ರನ ಮರಣದ ನಂತರ ಮೈಸೂರಿನಲ್ಲಿ ಅಭಿಮಾನಿಯೊಬ್ಬರ ಮನೆಯಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದಿದ್
ದಕ್ಷಿಣ ಭಾರತದ ಗಾನ ಕೋಗಿಲೆ ಎಸ್.ಜಾನಕಿ (88) ಇಹಲೋಕ ತ್ಯಜಿಸಿದ್ದಾರೆ. ಆರು ದಶಕಗಳಲ್ಲಿ, 20 ಭಾಷೆಗಳಲ್ಲಿ ಸುಮಾರು 48 ಸಾವಿರ ಹಾಡುಗಳಿಗೆ ಧ್ವನಿಯಾಗಿದ್ದ ಅವರನ್ನು ಅಭಿಮಾನಿಗಳು, ಆಪ್ತರು ಪ್ರೀತಿಯಿಂದ ಕರೆಯುತ್ತಿದ್ದುದು 'ಜಾನಕಿ ಅಮ್ಮ' ಎಂತಲೆ. 2026ರ ಜನವರಿಯಲ್ಲಿ ಪುತ್ರನ ಮರಣದ ನಂತರ ಮೈಸೂರಿನಲ್ಲಿ ಅಭಿಮಾನಿಯೊಬ್ಬರ ಮನೆಯಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದ ಜಾನಕಿ ಅಮ್ಮ ಶನಿವಾರ (ಜುಲೈ11) ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಈ ಮೂಲಕ ಗಾಯನ ಲೋಕದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಸುವರ್ಣ ಯುಗದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ.ಪದ್ಮಭೂಷಣ ನಿರಾಕರಿಸಿದ್ದ ಜಾನಕಿ4 ಬಾರಿ ರಾಷ್ಟ್ರಪ್ರಶಸ್ತಿ, ತಮಿಳು, ಮಲಯಾಳ, ಕನ್ನಡ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ, ವಿವಿಧ ರಾಜ್ಯಗಳ ಪುರಸ್ಕಾರ ಜಾನಕಿ ಅವರಿಗೆ ಸಂದಿವೆ. ಆದರೆ 2013ರಲ್ಲಿ ಭಾರತ ಸರ್ಕಾರ ಘೋಷಿಸಿದ್ದ ಪದ್ಮಭೂಷಣವನ್ನು ನಿರಾಕರಿಸಿದ್ದರು. ಪ್ರಶಸ್ತಿ ಪ್ರಕಟವಾದಾಗ ಪ್ರತಿಕ್ರಿಯಿಸಿದ್ದ ಜಾನಕಿಯವರು, 'ತಮಗೆ 75 ವರ್ಷ ವಯಸ್ಸಾಗುವರೆಗೂ ಕೇಂದ್ರ ಸರ್ಕಾರ ಗುರುತಿಸದೆ, ಈಗ ಪದ್ಮಭೂಷಣ ನೀಡುತ್ತಿರುವುದು ತಡವಾಯಿತು' ಎಂದು ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ 'ಸರ್ಕಾರದ ವಿರುದ್ಧ ತನಗೆ ಯಾವುದೇ ಅಸಮಾಧಾನವಿಲ್ಲ' ಎಂದೂ ಹೇಳಿದ್ದರು. ದಕ್ಷಿಣ ಭಾರತದ ಕಲಾವಿದರನ್ನು ಕೇಂದ್ರ ಸರ್ಕಾರ ಸರಿಯಾಗಿ ಗುರುತಿಸುವುದಿಲ್ಲ ಎಂಬ ಅಸಮಾಧಾನವನ್ನೂ ಅವರು ವ್ಯಕ್ತಪಡಿಸಿದ್ದರು.'ನಾನು ಕಳೆದ 55 ವರ್ಷಗಳಿಂದ ಹಾಡುತ್ತಿದ್ದೇನೆ. ನಾನು ಅನೇಕ ಭಾಷೆಗಳಲ್ಲಿ ವಿವಿಧ ಹಾಡುಗಳನ್ನು ಹಾಡಿದ್ದೇನೆ. ಅವರೆಲ್ಲರೂ ನನ್ನ ಹಾಡುಗಳನ್ನು ಮೆಚ್ಚುತ್ತಾರೆ. ಜನರ ಮನ್ನಣೆಗಿಂತ ನನಗೆ ಬೇರೆ ಏನು ಬೇಕು' ಎಂದೂ ಹೇಳಿದ್ದರು.'ಪ್ರಶಸ್ತಿ ಘೋಷಣೆಯಾದ ಬಗ್ಗೆ ಜಾನಕಿ ಅಮ್ಮ ಅವರಿಗೆ ನೇರವಾಗಿ ತಿಳಿಸದೆ, ಬೇರೆಯವರ ಮೂಲಕ ತಿಳಿಸಲಾಗಿತ್ತು' ಎಂದೂ ಅವರು ಮಗ ಮುರಳಿ ಕೃಷ್ಣ ಪ್ರತಿಕ್ರಿಯಿಸಿದ್ದರು.