ಫಿಫಾ ವಿಶ್ವಕಪ್: ನಾರ್ವೆಗೆ ಸೋಲು, ಸೆಮಿಫೈನಲ್ಗೇರಿದ ಇಂಗ್ಲೆಂಡ್
ಫ್ಲೋರಿಡಾ: ಜೂಡ್ ಬೆಲ್ಲಿಂಗ್ಹ್ಯಾಮ್ ಗಳಿಸಿದ ಎರಡು ಗೋಲುಗಳ ಬಲದಿಂದ ಇಂಗ್ಲೆಂಡ್ ತಂಡವು ನಾರ್ವೆಯನ್ನು ಸೋಲಿಸಿ, ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೂರನೇ ತಂಡವಾಗಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ.ಮಿಯಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾರ್ವೆ ಮೊದಲ ಗೋಲಿನ ಸಂಭ್ರಮಾಚರಣೆ ನಡೆಸಿತು. ಆಂಡ್ರೀಸ್ ಶೆಲ್ಡೆರಪ್ ಅವರು 36ನೇ ನಿಮಿ

ಫ್ಲೋರಿಡಾ: ಜೂಡ್ ಬೆಲ್ಲಿಂಗ್ಹ್ಯಾಮ್ ಗಳಿಸಿದ ಎರಡು ಗೋಲುಗಳ ಬಲದಿಂದ ಇಂಗ್ಲೆಂಡ್ ತಂಡವು ನಾರ್ವೆಯನ್ನು ಸೋಲಿಸಿ, ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೂರನೇ ತಂಡವಾಗಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ.ಮಿಯಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾರ್ವೆ ಮೊದಲ ಗೋಲಿನ ಸಂಭ್ರಮಾಚರಣೆ ನಡೆಸಿತು. ಆಂಡ್ರೀಸ್ ಶೆಲ್ಡೆರಪ್ ಅವರು 36ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಮುನ್ನಡೆ ತಂದುಕೊಟ್ಟರು. 11 ನಿಮಿಷಗಳ ಅಂತರದಲ್ಲಿ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದ ಬೆಲ್ಲಿಂಗ್ಹ್ಯಾಮ್, ಹೋರಾಟವನ್ನು ಸಮಬಲಗೊಳಿಸಿದರು. ನಂತರ ಹೆಚ್ಚುವರಿ ಅವಧಿಯಲ್ಲಿ (93 ನಿಮಿಷ) ಮತ್ತೊಂದು ಗೋಲು ಸಿಡಿಸುವ ಮೂಲಕ ಗೆಲುವನ್ನು ಖಾತ್ರಿ ಪಡಿಸಿದರು.ಇದರೊಂದಿಗೆ ನಾರ್ವೆ ಪಡೆಯ ಚೊಚ್ಚಲ ಪ್ರಶಸ್ತಿ ಕನಸು ಕಮರಿತು. ಎರಡೂ ತಂಡಗಳ ಸೂಪರ್ಸ್ಟಾರ್ಗಳಾದ ಎರ್ಲಿಂಗ್ ಹಾಲೆಂಡ್ (ನಾರ್ವೆ) ಹಾಗೂ ಹ್ಯಾರಿ ಕೇನ್ (ಇಂಗ್ಲೆಂಡ್) ಗೋಲು ಗಳಿಸಲು ವಿಫಲವಾದರು.ಉಪಾಂತ್ಯಕ್ಕೆ ತಲುಪಲು ವಿಫಲವಾದರೂ, ಈ ವಿಶ್ವಕಪ್ ನಾರ್ವೆ ತಂಡದ ಪಾಲಿಗೆ ಶ್ರೇಷ್ಠ ಅಭಿಯಾನ ಎನಿಸಿತು. 1938 ಹಾಗೂ 1998ರಲ್ಲಿ 16ನೇ ಸುತ್ತಿನಲ್ಲಿ, 1994ರಲ್ಲಿ ಗುಂಪು ಹಂತದಲ್ಲಿ ನಿರ್ಗಮಿಸಿದ್ದ ಈ ತಂಡ, ಇದೇ ಮೊದಲ ಬಾರಿಗೆ ಕ್ವಾರ್ಟರ್ಫೈನಲ್ ತಲುಪಿತ್ತು.ಹೊರನಡೆದರೂ ಉತ್ತಮ ಸಾಧನೆ ಮಾಡಿದ ನಾರ್ವೆit's free kick but they’re busy flirting pic.twitter.com/KEP7o1bYE5— not so hourly haaland (@hourlyerling) July 11, 2026 ನಾಯಕನಷ್ಟೇ ಗೋಲು ಗಳಿಸಿದ ಬೆಲ್ಲಿಂಗ್ಹ್ಯಾಮ್ಈ ಪಂದ್ಯದಲ್ಲಿ ಎರಡು ಗೋಲುಗಳನ್ನು ಬಾರಿಸಿ ಪಂದ್ಯಶ್ರೇಷ್ಠ ಎನಿಸಿದ ಬೆಲ್ಲಿಂಗ್ಹ್ಯಾಮ್, ಪ್ರಸ್ತುತ ವಿಶ್ವಕಪ್ನಲ್ಲಿ ಇಂಗ್ಲೆಂಡ್ ಪರ ಅತಿಹೆಚ್ಚು ಗೋಲು ಗಳಿಸಿದ ಆಟಗಾರರ ಲಿಸ್ಟ್ನಲ್ಲಿ ಜಂಟಿ ಅಗ್ರಸ್ಥಾನಕ್ಕೇರಿದರು. ನಾಯಕ ಹ್ಯಾರಿ ಕೇನ್ ಹಾಗೂ ಬೆಲ್ಲಿಂಗ್ಹ್ಯಾಮ್ ಖಾತೆಯಲ್ಲಿ ಆರು ಗೋಲುಗಳಿವೆ. ಫಿಫಾ ಇತಿಹಾಸದಲ್ಲಿ ಒಂದೇ ಟೂರ್ನಿಯಲ್ಲಿ ಇಂಗ್ಲೆಂಡ್ನ ಇಬ್ಬರು ಕನಿಷ್ಠ ಐದು ಗೋಲು ಬಾರಿಸಿದ್ದು ಇದೇ ಮೊದಲು.ಇಂಗ್ಲೆಂಡ್ ತಂಡದ ಜೋರ್ಡನ್ ಪಿಕ್ಫಾರ್ಡ್ ಅವರು ಫಿಫಾ ವಿಶ್ವಕಪ್ನ 18ನೇ ಪಂದ್ಯದಲ್ಲಿ ಕಣಕ್ಕಿಳಿದರು. ಇದರೊಂದಿಗೆ, ಇಂಗ್ಲೆಂಡ್ ಪರ ಅತಿಹೆಚ್ಚು ಪಂದ್ಯಗಳಲ್ಲಿ ಆಡಿದ ಗೋಲ್ಕೀಪರ್ ಎನಿಸಿಕೊಂಡರು. ಇದುವರಗೆ ಈ ದಾಖಲೆ ಪೀಟರ್ ಶಿಲ್ಟನ್ ಅವರ ಹೆಸರಿನಲ್ಲಿತ್ತು. ಅವರು 17 ಪಂದ್ಯಗಳಲ್ಲಿ ಇಂಗ್ಲೆಂಡ್ ʼಗ್ಲೌʼ ಧರಿಸಿದ್ದರು.ದಾಖಲೆ ಬರೆದ ಜೋರ್ಡನ್ಸೆಮಿಫೈನಲ್ನಲ್ಲಿ ಅರ್ಜೆಂಟೀನಾ/ಸ್ಪೇನ್ ಎದುರಾಳಿಮತ್ತೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಹಾಗೂ ಸ್ಪೇನ್ ಸೆಣಸಾಟ ನಡೆಸುತ್ತಿವೆ. ಆ ಪಂದ್ಯದಲ್ಲಿ ಗೆದ್ದವರು, ಜುಲೈ 15ರಂದು ಅಟ್ಲಾಂಟಾದಲ್ಲಿ ನಡೆಯಲಿರುವ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ಗೆ ಸವಾಲೊಡ್ಡಲಿದ್ದಾರೆ.ಹಾಗೆಯೇ, ಸೋತವರೊಂದಿಗೆ ನಾರ್ವೆ ಪಡೆ ಮೂರನೇ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದೆ.