ಜವಾರೆ ಎಸ್. ಪೂನಾವಾಲ ಬೆಂಗಳೂರು ಬೇಸಿಗೆ ಡರ್ಬಿ: ಡಾರ್ಟಗ್ನಾನ್ಗೆ ರೋಚಕ ಗೆಲುವು
ಬೆಂಗಳೂರು: ಪೆಸಿ ಶ್ರಾಫ್ ತರಬೇತಿಯಲ್ಲಿ ಪಳಗಿರುವ ಡಾರ್ಟಗ್ನಾನ್ ಕುದುರೆಯು ಭಾನುವಾರ ನಡೆದ ‘ಜವಾರೆ ಎಸ್. ಪೂನಾವಾಲಾ ಬೆಂಗಳೂರು ಬೇಸಿಗೆ ಡರ್ಬಿ’ಯಲ್ಲಿ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಡಾರ್ಟಗ್ನಾನ್ ಕುದುರೆಯು ತನ್ನ ಮಾಲೀಕರಿಗೆ ಸುಮಾರು ₹ 2.45 ಕೋಟಿ ಬಹುಮಾನ ಮತ್ತು ₹5 ಲಕ್ಷದ ಮೌಲ್ಯದ ಆಕರ್ಷಕ ಟ್ರೋಫಿ ದೊರಕಿಸಿಕೊಟ್ಟಿತು. ಬೆಂಗಳೂರ

ಬೆಂಗಳೂರು: ಪೆಸಿ ಶ್ರಾಫ್ ತರಬೇತಿಯಲ್ಲಿ ಪಳಗಿರುವ ಡಾರ್ಟಗ್ನಾನ್ ಕುದುರೆಯು ಭಾನುವಾರ ನಡೆದ ‘ಜವಾರೆ ಎಸ್. ಪೂನಾವಾಲಾ ಬೆಂಗಳೂರು ಬೇಸಿಗೆ ಡರ್ಬಿ’ಯಲ್ಲಿ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಡಾರ್ಟಗ್ನಾನ್ ಕುದುರೆಯು ತನ್ನ ಮಾಲೀಕರಿಗೆ ಸುಮಾರು ₹ 2.45 ಕೋಟಿ ಬಹುಮಾನ ಮತ್ತು ₹5 ಲಕ್ಷದ ಮೌಲ್ಯದ ಆಕರ್ಷಕ ಟ್ರೋಫಿ ದೊರಕಿಸಿಕೊಟ್ಟಿತು. ಬೆಂಗಳೂರು ಟರ್ಫ್ ಕ್ಲಬ್ ಆವರಣದಲ್ಲಿ ನಡೆದ ಪ್ರತಿಷ್ಠಿತ ಬೇಸಿಗೆ ಡರ್ಬಿಯು ರೇಸ್ಪ್ರಿಯರಿಗೆ ಭರ್ಜರಿ ರಸದೌತಣ ಉಣಬಡಿಸಿತು. ಡರ್ಬಿ ದಿನದಲ್ಲಿ ನಡೆದ ಒಂಬತ್ತು ರೇಸ್ಗಳನ್ನೂ ಕಣ್ತುಂಬಿಕೊಂಡರು.ನಿರೀಕ್ಷೆಯಂತೆ ಶ್ರಾಫ್ ಗರಡಿಯಲ್ಲಿ ಪಳಗಿರುವ ಗಂಡು ಕುದುರೆ ಡಾರ್ಟಗ್ನಾನ್ ಮತ್ತು ಹೆಣ್ಣು ಕುದುರೆ ಮಾರ್ಗರೆಟಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ರೇಸ್ ಪ್ರಾರಂಭದಿಂದಲೂ ಯಶ್ ನರೇಡು ಅವರು ಡಾರ್ಟಗ್ನಾನ್ ಕುದುರೆಯನ್ನು ಕೊನೆಯ 400 ಮೀಟರ್ಸ್ ತನಕ ಮೂರನೇ ಸ್ಥಾನದಲ್ಲಿಯೇ ಓಡಿಸುತ್ತಿದ್ದರೆ, ವಿವೇಕ್ ಅವರು ಮಾರ್ಗರೆಟಾ ಕುದುರೆ ಎಂಟನೇ ಸ್ಥಾನದಲ್ಲಿ ಓಡುತ್ತಿತ್ತು. ಅಂತಿಮ 300 ಮೀಟರ್ಸ್ನಲ್ಲಿ ಡಾರ್ಟಗ್ನಾನ್ ಮುನ್ನಡೆ ಪಡೆಯಿತು. ಈ ಹಂತದಲ್ಲಿ ಮಾರ್ಗರೆಟಾ ಕೂಡ ವೇಗ ಹೆಚ್ಚಿಸಿಕೊಂಡು ಡಾರ್ಟ್ಗ್ನಾನ್ ಸಮೀಪಕ್ಕೆ ಬಂದಿತು. ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಕೊನೆಯ 100 ಮೀಟರ್ಸ್ನಲ್ಲಿ ಡಾರ್ಟಗ್ನಾನ್ ಒರೆಯಾಗಿ ಓಡತೊಡಗಿದಾಗ ಪರಸ್ಪರ ಡಿಕ್ಕಿಯಾಗುವುದನ್ನು ತಪ್ಪಿಸಲು ಮಾರ್ಗರೆಟಾ ಕೂಡ ಓರೆಯಾಗಿ ಎಡಬದಿಗೆ ಓಡಿತು. ನಂತರ ಲೈನ್ ಸರಿಪಡಿಸಿಕೊಂಡ ಡಾರ್ಟಗ್ನಾನ್ ಅರ್ಧ ಲೆಂತ್ ಅಂತರದಿಂದ ಮಾರ್ಗರೆಟಾ ಸವಾಲನ್ನು ಮೆಟ್ಟಿನಿಂತು ಟ್ರೋಫಿ ತನ್ನದಾಗಿಸಿಕೊಂಡಿತು. ಡರ್ಬಿಯ 2000 ಮೀಟರ್ಸ್ ದೂರವನ್ನು ಕ್ರಮಿಸಲು ಡಾರ್ಟಗ್ನಾನ್ 2 ನಿಮಿಷ 3.89 ಸೆಕೆಂಡ್ ತೆಗೆದುಕೊಂಡಿತು. ನಾಟಿ ಎಂಪರರ್ ಮೂರನೇ ಸ್ಥಾನ ಪಡೆಯಿತು. ಮೂನ್ವೀಲ್ ನಾಲ್ಕನೇ ಸ್ಥಾನ ಗಳಿಸಿತು. ಚಾಂಪಿಯನ್ ಡಾರ್ಟಗ್ನಾನ್ ಕುದುರೆಯು ವಿಜಯ್ ಬಿ. ಶ್ರೈಕ್ ಮತ್ತು ಇತರರು ಪ್ರತಿನಿಧಿಸುವ ಹಾರ್ಸ್ ಹ್ಯಾವೆನ್ ಬ್ರೀಡಿಂಗ್ ಮತ್ತು ರೇಸಿಂಗ್ ಪ್ರೈವೇಟ್ ಲಿಮಿಟೆಡ್ ಮಾಲೀಕತ್ವದಲ್ಲಿದೆ.ವಿಚಾರಣೆ: ಡಾರ್ಟ್ಗ್ಯಾನ್ ಕುದುರೆಯು ಒರೆಯಾಗಿ ಚಲಿಸಿ ಮಾರ್ಗರೆಟಾ ಅಶ್ವವು ಪಕ್ಕಕ್ಕೆ ಸರಿದು ಓಡುವಂತಾದ ಘಟನೆಯ ಕುರಿತು ವಿಚಾರಣೆ ನಡೆಸಲು ರೇಸ್ ನಂತರ ಸ್ಟೀವರ್ಡ್ಗಳ ತುರ್ತು ಸಭೆ ಆಯೋಜನೆಗೊಂಡಿತು. ಡಾರ್ಟ್ಗ್ನಾನ್ ಕುದುರೆಯನ್ನು ಸವಾರನು ಉದ್ದೇಶಪೂರ್ವಕವಾಗಿ ಲೈನ್ನಿಂದ ಹೊರಗೆ ಓಡಿಸಿದ್ದರೆ ಎಂಬುದನ್ನು ಪರಿಶೀಲಿಸಲಾಯಿತು. ಡಾರ್ಟ್ಗ್ನಾನ್ ಕುದುರೆಯು ಮಾರ್ಗರೆಟಾಗೆ ಯಾವುದೇ ಅಡಚಣೆ ಮಾಡಿಲ್ಲವೆಂಬುದನ್ನು ಖಚಿತಪಡಿಸಲಾಯಿತು. ನಂತರ ಫಲಿತಾಂಶವನ್ನು ಪ್ರಕಟಿಸಲಾಯಿತು. ಅಗ್ರ ನಾಲ್ಕು ಸ್ಥಾನ ಪಡೆದ ಕುದುರೆಗಳುಕುದುರೆ ಸಂಖ್ಯೆ;ಹೆಸರು;ತರಬೇತುದಾರ;ಜಾಕಿ;ಸಮಯ;ಬಹುಮಾನ 1;ಡಾರ್ಟಗ್ನಾನ್;ಪೆಸಿ ಶ್ರಾಫ್;ಯಶ್ ನರೇಡು;2ನಿ.3.89ಸೆ.;₹2.45 ಕೋಟಿ5;ಮಾರ್ಗರೆಟಾ;ಪೆಸಿ ಶ್ರಾಫ್;ವಿವೇಕ್ ಜಿ;2ನಿ.3.97ಸೆ.;₹81.67 ಲಕ್ಷ2;ನಾಟಿ ಎಂಪರರ್;ಪ್ರಸನ್ನ ಕುಮಾರ್;ಸೂರಜ್ ನರೇಡು;2ನಿ.4.17ಸೆ.;₹40.83 ಲಕ್ಷ6;ಮೂನ್ವೀಲ್;ಎಸ್. ಅತೋಲಾಹಿ;ಟ್ರೆವರ್ ಪಟೇಲ್;2ನಿ.4.80ಸೆ.;₹20.41 ಲಕ್ಷಡರ್ಬಿಯಲ್ಲಿ ಪಾಲ್ಗೊಂಡ ನಟ ಅಭಿಷೇಕ್ ಅಂಬರೀಶ್ ಡರ್ಬಿ ಗೆದ್ದ ಮಾರ್ಗರೆಟಾ ಕುದುರೆಯೊಂದಿಗೆ ಜಾಕಿ ವಿವೇಕ್ ಜಿ) ಬೇಸಿಗೆ ಡರ್ಬಿಯನ್ನು ವೀಕ್ಷಿಸಲು ಬಂದ ಯುವತಿಯರು –ಪ್ರಜಾವಾಣಿ ಚಿತ್ರಡರ್ಬಿಯಲ್ಲಿ ಜಯ ಗಳಿಸಿದ ಡಾರ್ಟಗ್ನನ್ (ಜಾಕಿ: ಯಶ್ ನರೇಡು) ಕುದುರೆಯ ಮಾಲೀಕರಾದ ವಿಜಯ್ ಶಿರ್ಕೆ ಮತ್ತು ಪದ್ಮಜಾ ಶಿರ್ಕೆ ಪ್ರಶಸ್ತಿ ಸ್ವೀಕರಿಸಿದರು. ಜವಾರೆ ಎಸ್. ಪೂನಾವಾಲ ಅವರ ಪತ್ನಿ ಬೆಹ್ರೋಜ್ ಝೆಡ್ ಪೂನಾವಾಲ ಮತ್ತು ಬೆಂಗಳೂರು ಟರ್ಫ್ ಕ್ಲಬ್ ಅಧ್ಯಕ್ಷ ಎಲ್ ಶಿವಶಂಕರ್ ಉಪಸ್ಥಿತರಿದ್ದರು ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್