ಬೆಂಗಳೂರಲ್ಲಿ ಅಳಿಯನಿಂದ ಡೆಡ್ಲಿ ಅಟ್ಯಾಕ್ಗೆ ಒಳಗಾಗಿದ್ದ ಅತ್ತೆ ಸಾವು
* 3 ತಿಂಗಳ ಗಂಡು ಮಗನಿಗೆ ಎರಡು ತೊಲ ಬಂಗಾರ ಕೊಡಲಿಲ್ಲ ಅಂತ ನಡೆದಿತ್ತು ಮಾರಣಾಂತಿಕ ಹಲ್ಲೆ ಬೆಂಗಳೂರು: ಅಳಿಯನಿಂದ ಭೀಕರವಾಗಿ ಹಲ್ಲೆಗೆ ಒಳಗಾಗಿದ್ದ ಅತ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. 45 ವರ್ಷದ ರೋಷನಬಿ ಮೃತ ಮಹಿಳೆ. ಮೂರು ತಿಂಗಳ ಗಂಡು ಮಗನಿಗೆ ಎರಡು ತೊಲ ಬಂಗಾರ ಕೊಡಲಿಲ್ಲವೆಂದು ಅಳಿಯ ಅಕ್ಬರ್ ಮಾರಣಾಂತಿಕ ಹಲ್ಲೆ ನಡೆಸಿದ್ದ. ಗಂಭೀ

* 3 ತಿಂಗಳ ಗಂಡು ಮಗನಿಗೆ ಎರಡು ತೊಲ ಬಂಗಾರ ಕೊಡಲಿಲ್ಲ ಅಂತ ನಡೆದಿತ್ತು ಮಾರಣಾಂತಿಕ ಹಲ್ಲೆ ಬೆಂಗಳೂರು: ಅಳಿಯನಿಂದ ಭೀಕರವಾಗಿ ಹಲ್ಲೆಗೆ ಒಳಗಾಗಿದ್ದ ಅತ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. 45 ವರ್ಷದ ರೋಷನಬಿ ಮೃತ ಮಹಿಳೆ. ಮೂರು ತಿಂಗಳ ಗಂಡು ಮಗನಿಗೆ ಎರಡು ತೊಲ ಬಂಗಾರ ಕೊಡಲಿಲ್ಲವೆಂದು ಅಳಿಯ ಅಕ್ಬರ್ ಮಾರಣಾಂತಿಕ ಹಲ್ಲೆ ನಡೆಸಿದ್ದ. ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಕಳೆದ 7 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕುಟುಂಬ ನೆಲೆಸಿತ್ತು. ಮಕ್ಕಳ ಜೊತೆ ವಿದ್ಯಾರಣ್ಯಪುರದ ಮೇಡಿ ಅಗ್ರಹಾರ ಬಳಿ ರೋಷನಬಿ ವಾಸವಾಗಿದ್ದರು. ಚಿನ್ನ ಕೊಡದಿದ್ದಕ್ಕೆ ಕೊಲೆ ಮಾಡುವುದಾಗಿ ಅತ್ತೆಗೆ ಅಳಿಯ ಬೆದರಿಕೆ ಒಡ್ಡಿದ್ದ. ಹಲ್ಲೆ ಬಳಿಕ ರೋಷನಬಿಯನ್ನು ಹತ್ತಿರದ ಆಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದರು. ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಪತ್ನಿ ಹೇಳಿದ್ದೇನು? ಆರೋಪಿಯ ಪತ್ನಿ ರಂಜಾನ್ ಮಾತನಾಡಿದ್ದು, ಎಳು ವರ್ಷದ ಹಿಂದೆ ಲವ್ ಮ್ಯಾರೇಜ್ ಆಗಿದ್ವಿ. ಮದುವೆ ಆದಾಗಿಂದ ನನಗೆ ವರದಕ್ಷಿಣೆ ಕಿರುಕುಳ ಕೊಡ್ತಿದ್ದ. ಎರಡನೇ ಮಗು ಆದ್ಮೇಲೆ ಹೆಚ್ಚು ಹಿಂಸೆ ಕೊಡ್ತಿದ್ದ. ಎರಡು ತೊಲ ಬಂಗಾರ ಕೊಡಿಸಲೇಬೇಕು ಅಂತಾ ಜಗಳ ಮಾಡ್ತಿದ್ದ. ನಾನು ಎಲ್ಲವನ್ನೂ ತಡ್ಕೊಂಡಿದ್ದೆ. ನಮ್ ಅಮ್ಮ ಆಗಲ್ಲಪ್ಪಾ ಅಷ್ಟು ಹಣ ಇಲ್ಲ ಅಂದ್ರೂ ಕೇಳ್ತಿರಲಿಲ್ಲ. ಜು.10 ರಂದು ಕೊಡಲಿ ತಗೊಂಡ್ ಬಂದು ಏಕಾಏಕಿ ಹೊಡೆದ್ರು. ಏನು ಮಾತಾಡ್ಲಿಲ್ಲ ಹೊಡೆದ್ರು. ಅವ್ನಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು. ಏಳು ವರ್ಷದ ಹಿಂದೆ ರಂಜಾನ್ಳನ್ನು ಕರೆದೊಯ್ದು ಆರೋಪಿ ಅಕ್ಬರ್ ಮದುವೆಯಾಗಿದ್ದ. ಯಾದಗಿರಿಯ ಸುರಪುರ ತಾಲೂಕಿನ ಕೋಣಾಳ ಅನ್ನೋ ಗ್ರಾಮದ ಆರೋಪಿ ಹಾಗೂ ಯುವತಿ ವಿವಾಹವಾಗಿದ್ದರು. ಶಾಲೆ ಓದುತ್ತಿದ್ದಾಕೆಯನ್ನ ಬೆದರಿಸಿ ಕರೆತಂದು ಮದುವೆ ಆಗಿದ್ದ. ರಿಲೇಶನ್ ಹುಡುಗ ಅಂತಾ ಕೊನೆಗೆ ಯುವತಿ ಕುಟುಂಬಸ್ಥರು ಒಪ್ಪಿಕೊಂಡಿದ್ದರು. ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗು ಇತ್ತು. ಕಳೆದ ಒಂದು ತಿಂಗಳ ಹಿಂದಷ್ಟೇ ಗಂಡು ಮಗು ಜನಿಸಿತ್ತು. ಮದುವೆ ಆದಾಗಿಂದ್ಲೂ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಪತ್ನಿಗೆ ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನ ಒಮ್ಮೆ ಅಕ್ಬರ್ ಪತ್ನಿ ರಂಜಾನ್ಗೆ ಸೀಮೆಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದ. ಬಂಗಾರ ಕೊಡಿಸು, ಹಣ ಕೊಡು ಎಂದು ಪತ್ನಿ ಹಾಗೂ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದ. ಮಗು ಹುಟ್ಟಿದಮೇಲೆ ಬಂಗಾರಕ್ಕಾಗಿ ಜಗಳ ಆಡ್ತಿದ್ದ. ಅಲ್ಲಿವರೆಗೂ ವಾಪಸ್ ಕರೆದುಕೊಂಡು ಹೋಗಲ್ಲ ಎಂದು ಹೇಳಿದ್ದ. ಜೂನ್ 10 ರಂದು ಮಧ್ಯಾಹ್ನ ಏಕಾಏಕಿ ಕೊಡಲಿ ಸಮೇತ ಬಂದು ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಇಂದು ಮೃತಪಟ್ಟಿದ್ದಾರೆ.