ಹೈದರಾಬಾದ್ನಲ್ಲಿ ಅರಮನೆಯಂತ ಮನೆ ಇದ್ರೂ ಮೈಸೂರಲ್ಲೇ ಪ್ರಾಣ ಬಿಡ್ತೀನಿ ಎಂದಿದ್ರು
ಮೈಸೂರು: ಹೈದರಾಬಾದ್ನಲ್ಲಿ ಜಾನಕಿಯಮ್ಮನ (S.Janaki) ಮನೆ ಪ್ಯಾಲೇಸ್ ರೀತಿ ಇದೆ. ಅವರು ನನ್ನ ಮೇಲಿನ ಪ್ರೀತಿಗೆ ಮೈಸೂರಿಗೆ ಬರುತ್ತಿದ್ದರು. ಮೈಸೂರಿನಲ್ಲೇ (Mysuru) ಪ್ರಾಣ ಬಿಡುವುದು ನನ್ನ ಆಸೆ ಎನ್ನುತ್ತಿದ್ದರು ಎಂದು ಅವರ ಸಾಕುಮಗ ನವೀನ್ ಭಾವುಕರಾಗಿ ನುಡಿದಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ನಾನು 12ವರ್ಷದವನಿದ್ದಾಗಿನಿಂದ

ಮೈಸೂರು: ಹೈದರಾಬಾದ್ನಲ್ಲಿ ಜಾನಕಿಯಮ್ಮನ (S.Janaki) ಮನೆ ಪ್ಯಾಲೇಸ್ ರೀತಿ ಇದೆ. ಅವರು ನನ್ನ ಮೇಲಿನ ಪ್ರೀತಿಗೆ ಮೈಸೂರಿಗೆ ಬರುತ್ತಿದ್ದರು. ಮೈಸೂರಿನಲ್ಲೇ (Mysuru) ಪ್ರಾಣ ಬಿಡುವುದು ನನ್ನ ಆಸೆ ಎನ್ನುತ್ತಿದ್ದರು ಎಂದು ಅವರ ಸಾಕುಮಗ ನವೀನ್ ಭಾವುಕರಾಗಿ ನುಡಿದಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ನಾನು 12ವರ್ಷದವನಿದ್ದಾಗಿನಿಂದ ಜಾನಕಿ ಅಮ್ಮನ ಹುಚ್ಚು ಅಭಿಮಾನಿ. ಚೆನೈ ಅಭಿಮಾರಾಮಿಪುರದಲ್ಲಿ ಅವರನ್ನು ಮೊದಲು ಭೇಟಿಯಾಗಿದ್ದೆ. 2008ರಿಂದ ಅವರು ಮೈಸೂರಲ್ಲೇ ಇರುತ್ತಿದ್ದರು. ಕಳೆದ 2 ವರ್ಷಗಳಿಂದ ನಮ್ಮ ಮನೆಯಲ್ಲೇ ಇದ್ದರು. ಭಾಗ್ಯ ಎನ್ನುವವರು ಜಾನಕಿ ಅಮ್ಮನನ್ನು ನೋಡಿಕೊಳ್ಳುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೈಸೂರಿನ ಜೊತೆ ಎಸ್.ಜಾನಕಮ್ಮನ ಅವಿನಾಭಾವ ನಂಟು 2018ನಲ್ಲಿ ಮೈಸೂರಿನಲ್ಲೇ ಕಡೆಯ ಕಾರ್ಯಕ್ರಮ ನೀಡಿದ್ದರು. ನನಗಾಗಿ ಈ ಕಾರ್ಯಕ್ರಮ ಮಾಡ್ತಿದ್ದೀನಿ ಎಂದಿದ್ದರು. ಆನಂತರ ಬಂದ ಯಾವುದೇ ಪ್ರಶಸ್ತಿಗಳನ್ನು ಅವರು ಸ್ವೀಕರಿಸಿಲ್ಲ. ಅಮ್ಮ ಭೇಟಿಗೆ ಕೊಡುತ್ತಿದ್ದ ದಿನಾಂಕವನ್ನ ಲೆಕ್ಕ ಹಾಕಿಕೊಂಡು ನಾನು ಕಾಯುತ್ತಿದ್ದೆ. ಜಾನಕಿ ಅಮ್ಮ ಆರಾಮಾಗಿದ್ದರು. ಕಾಲು ಇನ್ಫೆಕ್ಷನ್ ಆಗಿ ನೋವಿತ್ತು. ಹಾಸ್ಪಿಟಲ್ ಅಂದ್ರೆ ಭಯ ಪಡ್ತಿದ್ರು. ಮನೆಗೆ ನರ್ಸ್ ಕರೆಸಿ ಚಿಕಿತ್ಸೆ ಕೊಡಿಸಿದ್ವಿ. ಆದರೆ ಎದ್ದು ಕುಳಿತುಕೊಳ್ಳಲು ಕಷ್ಟ ಪಡುತ್ತಿದ್ದರು. ತಕ್ಷಣ ಅಪೋಲೋ ಆಸ್ಪತ್ರೆಗೆ ದಾಖಲಿಸಿದೆವು. ವೈದ್ಯರು 20-30% ಮಾತ್ರ ಗ್ಯಾರಂಟಿ ಕೊಡ್ತೀವಿ ಎಂದಿದ್ದರು. ಈಗ ಅವರು ನಮ್ಮನ್ನ ಅಗಲಿದ್ದಾರೆ ಎಂದು ಭಾವುಕರಾದರು. ಮಧ್ಯಾಹ್ನ 3ಗಂಟೆ ವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರಿಗೆ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ನಮ್ಮ ಫಾರಂ ಹೌಸ್ನಲ್ಲೇ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರು ತಿಳಿಸಿದ್ದಾರೆ. ಅಭಿಮಾನಿ ಮತ್ತು ಕಲಾವಿದರ ಸಂಬಂಧ ಎಷ್ಟರ ಮಟ್ಟಿಗೆ ಆತ್ಮೀಯವಾಗಿರಬಹುದು ಎಂಬುದಕ್ಕೆ ಎಸ್.ಜಾನಕಮ್ಮ ಮತ್ತು ಮೈಸೂರಿನ ನವೀನ್ ಕುಟುಂಬದ ಸಂಬಂಧವೇ ಜೀವಂತ ಉದಾಹರಣೆ. ಮೈಸೂರನ್ನು ತಮ್ಮ ಎರಡನೇ ಮನೆಯಾಗಿ ಕಂಡ ಜಾನಕಮ್ಮ, ಬದುಕಿನ ಕೊನೆಯ ದಿನಗಳನ್ನೂ ಇಲ್ಲಿಯೇ ಕಳೆದರು. ಈಗ ಅದೇ ಮೈಸೂರಿನ ಮಣ್ಣಿನಲ್ಲೇ ಅವರಿಗೆ ಅಂತಿಮ ವಿದಾಯ ಸಿಗುತ್ತಿದೆ. ಇದನ್ನೂ ಓದಿ: ಸಂಗೀತ ಲೋಕದ ಸಾಮ್ರಾಜ್ಞೆ ಎಸ್.ಜಾನಕಿ ಹಾಡಿದ್ದು 40 ಸಾವಿರಕ್ಕೂ ಹೆಚ್ಚು ಹಾಡುಗಳು