ಬೆಂಗಳೂರು: ಕಲ್ಲು ಎತ್ತಿ ಹಾಕಿ ಸ್ನೇಹಿತನ ಕೊಲೆ
ಬೆಂಗಳೂರು: ಕುಮಾರಸ್ವಾಮಿ ಲೇಔಟ್ನ ಅಟಲ್ ಬಿಹಾರಿ ವಾಜಪೇಯಿ ಉದ್ಯಾನದಲ್ಲಿ ಶನಿವಾರ ರಾತ್ರಿ ಪಾನಮತ್ತ ಸ್ನೇಹಿತರ ನಡುವೆ ನಡೆದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ.ರಾಕೇಶ್ ಉರುಫ್ ರಾಕಿ (19) ಕೊಲೆಯಾದ ಯುವಕ. ತ್ವರಿತವಾಗಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.ಕುಮಾರಸ್ವಾಮಿ ಲೇಔಟ್ ಬಳಿಯ ರಾಜ್ಯೋ
ಬೆಂಗಳೂರು: ಕುಮಾರಸ್ವಾಮಿ ಲೇಔಟ್ನ ಅಟಲ್ ಬಿಹಾರಿ ವಾಜಪೇಯಿ ಉದ್ಯಾನದಲ್ಲಿ ಶನಿವಾರ ರಾತ್ರಿ ಪಾನಮತ್ತ ಸ್ನೇಹಿತರ ನಡುವೆ ನಡೆದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ.ರಾಕೇಶ್ ಉರುಫ್ ರಾಕಿ (19) ಕೊಲೆಯಾದ ಯುವಕ. ತ್ವರಿತವಾಗಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.ಕುಮಾರಸ್ವಾಮಿ ಲೇಔಟ್ ಬಳಿಯ ರಾಜ್ಯೋತ್ಸವ ನಗರದ ರಾಕೇಶ್, ಎಗ್ ರೈಸ್ ಅಂಗಡಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ರಾಕೇಶ್, ರಾಜ್ಯೋತ್ಸವ ನಗರದಲ್ಲಿ ತಾಯಿ ಮತ್ತು ಇಬ್ಬರು ಸಹೋದರರ ಜತೆ ವಾಸವಾಗಿದ್ದ.ಶನಿವಾರ ತಡರಾತ್ರಿ ಸ್ನೇಹಿತನ ಜೊತೆ ಉದ್ಯಾನದೊಳಗೆ ಮದ್ಯದ ಪಾರ್ಟಿ ಮಾಡಿದ್ದ. ಪಾರ್ಟಿಯಲ್ಲಿ ಮದ್ಯ ಸೇವಿಸಿದ್ದ ರಾಕೇಶ್ ಮತ್ತು ಸ್ನೇಹಿತನ ನಡುವೆ ಹಣದ ವಿಚಾರಕ್ಕೆ ಜಗಳವಾಗಿದೆ. ರಾಕೇಶ್, ತನ್ನ ಬಳಿ ಪಡೆದ ₹7,500 ವಾಪಸ್ ಕೊಡುವಂತೆ ಸ್ನೇಹಿತನನ್ನು ಕೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಜಗಳದ ವೇಳೆ ಸ್ನೇಹಿತ, ರಾಕೇಶ್ನ ಕಣ್ಣಿನ ಭಾಗಕ್ಕೆ ಮುಷ್ಠಿಯಿಂದ ಗುದ್ದಿದ್ದಾನೆ. ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳೀಯರು ಭಾನುವಾರ ಬೆಳಿಗ್ಗೆ ವಾಯು ವಿಹಾರಕ್ಕಾಗಿ ಉದ್ಯಾನದೊಳಗೆ ಹೋದಾಗ ಕೊಲೆ ಪ್ರಕರಣ ಗೊತ್ತಾಗಿದೆ. ಕೆ.ಎಸ್.ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.