ಸೂರ್ಯ, ಚಂದ್ರ ಇರುವವರೆಗೂ ಜಾನಕಮ್ಮ ಶಾಶ್ವತ: ವಿಜಯ್ಪ್ರಕಾಶ್
ಮೈಸೂರು: ಖ್ಯಾತ ಹಿನ್ನೆಲೆ ಗಾಯಕ ವಿಜಯ್ಪ್ರಕಾಶ್ ಅವರು ಎಸ್. ಜಾನಕಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮವೊಂದಕ್ಕೆ ಜಾನಕಮ್ಮ ಅವರನ್ನು ಆಹ್ವಾನಿಸಲು ಪ್ರಯತ್ನಿಸಿದ್ದೆವು. ಅಷ್ಟರೊಳಗೆ ಈ ಸುದ್ದಿ ಬಂದು ಬೇಸರ ಮೂಡಿಸಿದೆ ಎಂದರು.ಅವರ ಹಾಡಿನಿಂದ ಮನರಂಜನೆ ಜೊತೆ ಕಲಿಕೆಯೂ ಸಿಗುತ್ತಿತ್ತು. ಸಾವಿರ

ಮೈಸೂರು: ಖ್ಯಾತ ಹಿನ್ನೆಲೆ ಗಾಯಕ ವಿಜಯ್ಪ್ರಕಾಶ್ ಅವರು ಎಸ್. ಜಾನಕಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮವೊಂದಕ್ಕೆ ಜಾನಕಮ್ಮ ಅವರನ್ನು ಆಹ್ವಾನಿಸಲು ಪ್ರಯತ್ನಿಸಿದ್ದೆವು. ಅಷ್ಟರೊಳಗೆ ಈ ಸುದ್ದಿ ಬಂದು ಬೇಸರ ಮೂಡಿಸಿದೆ ಎಂದರು.ಅವರ ಹಾಡಿನಿಂದ ಮನರಂಜನೆ ಜೊತೆ ಕಲಿಕೆಯೂ ಸಿಗುತ್ತಿತ್ತು. ಸಾವಿರಾರು ಹಾಡುಗಳಿಗೆ ಜೀವ ತುಂಬಿದವರು. ಅವರು ಸೂರ್ಯ, ಚಂದ್ರ ಇರುವವರೆಗೂ ಶಾಶ್ವತವಾಗಿರುತ್ತಾರೆ ಎಂದರು.ಹೊಸಬರನ್ನು ಪ್ರೀತಿಯಿಂದ ಕಂಡು ಪ್ರೋತ್ಸಾಹ ನೀಡುತ್ತಿದ್ದರು. ನಾನೊಬ್ಬ ದೊಡ್ಡ ಗಾಯಕಿ ಎಂಬ ಅಹಃ ಇರಲಿಲ್ಲ. ಅವರ ನಿಧನದಿಂದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು.ಜನರು ಅವರನ್ನು ನೋಡಲು ಬರುತ್ತಿರುವುದನ್ನು ನೋಡಿದರೆ, ಅವರು ಗೆದ್ದಿರುವುದೇನು ಎಂಬುದು ತಿಳಿಯುತ್ತದೆ. ಹೃದಯ ಮನಸ್ಸಿನಲ್ಲಿ ಅವರ ಗಾಯನದ ಮಾಧುರ್ಯತೆ ಸದಾ ಕಾಲ ಇರುತ್ತದೆ ಎಂದು ಹೇಳಿದರು.
Read the complete story at Prajavani