ಬೆಂಗಳೂರು: ಬೈಕ್ನಿಂದ ಬಿದ್ದು ಸವಾರ ಸಾವು
ಬೆಂಗಳೂರು: ಹೊರವರ್ತುಲ ರಸ್ತೆಯ ಚೌಡೇಶ್ವರಿ ನಗರದ ಬಳಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಪ್ರವೀಣ್ (35) ಎಂಬುವರು ಮೃತಪಟ್ಟಿದ್ದಾರೆ.ನಾಗರಬಾವಿ ಬಳಿಯ ವಿದ್ಯಾಗಿರಿ ನಗರ ನಿವಾಸಿಯಾಗಿದ್ದ ಪ್ರವೀಣ್, ಒಳಾಂಗಣ ವಿನ್ಯಾಸಕಾರರಾಗಿ ಕೆಲಸ ಮಾಡುತ್ತಿದ್ದರು. ಅವರು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೈಕ್ನಲ್ಲಿ ಮನೆಗೆ ಹೋಗುತ್ತ

ಬೆಂಗಳೂರು: ಹೊರವರ್ತುಲ ರಸ್ತೆಯ ಚೌಡೇಶ್ವರಿ ನಗರದ ಬಳಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಪ್ರವೀಣ್ (35) ಎಂಬುವರು ಮೃತಪಟ್ಟಿದ್ದಾರೆ.ನಾಗರಬಾವಿ ಬಳಿಯ ವಿದ್ಯಾಗಿರಿ ನಗರ ನಿವಾಸಿಯಾಗಿದ್ದ ಪ್ರವೀಣ್, ಒಳಾಂಗಣ ವಿನ್ಯಾಸಕಾರರಾಗಿ ಕೆಲಸ ಮಾಡುತ್ತಿದ್ದರು. ಅವರು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೈಕ್ನಲ್ಲಿ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರವೀಣ್, ರಸ್ತೆ ಉಬ್ಬು ಗಮನಿಸದೆ ಅತಿ ವೇಗದಲ್ಲಿ ಬೈಕ್ ಚಾಲನೆ ಮಾಡಿದ್ದಾರೆ. ಬೈಕ್, ರಸ್ತೆ ಉಬ್ಬಿನ ಮೇಲೆ ಹತ್ತುತ್ತಿದ್ದಂತೆ ಅವರು ನಿಯಂತ್ರಣ ತಪ್ಪಿ ವಾಹನ ಸಮೇತ ಸ್ವಲ್ಪ ದೂರ ಹೋಗಿ ಬಿದ್ದಿದ್ದಾರೆ. ಈ ವೇಳೆ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.ಅಪಘಾತದ ಸಂದರ್ಭದಲ್ಲಿ ಪ್ರವೀಣ್, ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ, ಅವರ ತಲೆಗೆ ಪೆಟ್ಟು ಬಿದ್ದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರಾಜಾಜಿನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read the complete story at Prajavani