ಶಕುಂತಲಾ ಮತ್ತು ಭೀಷ್ಟಪ್ಪ ದಂಡಿನ ಸ್ಮಾರಕ ನಿರ್ಮಾಣ ಪೂರ್ವಭಾವಿ ಸಭೆ ಇಂದು
ಗದಗ: ಇಲ್ಲಿನ ರಾಜೀವ್ಗಾಂಧಿ ನಗರದಲ್ಲಿರುವ ಕೆ.ವಿ.ಎಸ್.ಆರ್. ಪ್ರೌಢಶಾಲಾ ಆವರಣದಲ್ಲಿ ಶ್ರೀಮತಿ ಶಕುಂತಲಾ ಭೀಷ್ಟಪ್ಪ ದಂಡಿನ ಹಾಗೂ ಭೀಷ್ಟಪ್ಪ ಫಕ್ಕೀರಪ್ಪ ದಂಡಿನ ಅವರ ಸ್ಮಾರಕ ನಿರ್ಮಿಸಲು ನಿರ್ಧರಿಸಲಾಗಿದ್ದು, ಈ ಕುರಿತ ಪೂರ್ವಭಾವಿ ಸಭೆ ಜುಲೈ 12ರಂದು ಬೆಳಿಗ್ಗೆ 10 ಗಂಟೆಗೆ ಕೆ.ಎಸ್.ಎಸ್ ಮಹಾವಿದ್ಯಾಲಯದ ಬಿ.ಎಫ್.ದಂಡಿನ ಸಭಾಂಗಣದಲ್ಲಿ ಜರುಗಲಿದೆ.ಹಳೆಯ ವಿದ್ಯಾರ್ಥಿಗಳ

ಗದಗ: ಇಲ್ಲಿನ ರಾಜೀವ್ಗಾಂಧಿ ನಗರದಲ್ಲಿರುವ ಕೆ.ವಿ.ಎಸ್.ಆರ್. ಪ್ರೌಢಶಾಲಾ ಆವರಣದಲ್ಲಿ ಶ್ರೀಮತಿ ಶಕುಂತಲಾ ಭೀಷ್ಟಪ್ಪ ದಂಡಿನ ಹಾಗೂ ಭೀಷ್ಟಪ್ಪ ಫಕ್ಕೀರಪ್ಪ ದಂಡಿನ ಅವರ ಸ್ಮಾರಕ ನಿರ್ಮಿಸಲು ನಿರ್ಧರಿಸಲಾಗಿದ್ದು, ಈ ಕುರಿತ ಪೂರ್ವಭಾವಿ ಸಭೆ ಜುಲೈ 12ರಂದು ಬೆಳಿಗ್ಗೆ 10 ಗಂಟೆಗೆ ಕೆ.ಎಸ್.ಎಸ್ ಮಹಾವಿದ್ಯಾಲಯದ ಬಿ.ಎಫ್.ದಂಡಿನ ಸಭಾಂಗಣದಲ್ಲಿ ಜರುಗಲಿದೆ.ಹಳೆಯ ವಿದ್ಯಾರ್ಥಿಗಳು ಈ ಕಾರ್ಯಕ್ಕೆ ಉತ್ಸುಕರಾಗಿದ್ದಾರೆ. ಕೆ.ವಿ.ಎಸ್.ಆರ್ ಹಾಗೂ ಕೆ.ಎಸ್.ಎಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಸಭೆಯಲ್ಲಿ ಪಾಲ್ಗೊಂಡು, ಸಲಹೆ–ಸೂಚನೆ ನೀಡಬೇಕೆಂದು ಶರಣು ಗೋಗೇರಿ (9620988939), ಜೆ.ಸಿ. ಜಂಪನ್ನವರ (ಮೊ.ಸಂ: 8904335329) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260712-23-1638438626
Read the complete story at Prajavani