₹3,200 ಕೋಟಿ ವೆಚ್ಚದ ಕಾಮಗಾರಿಗೆ 18ರಂದು ಮುಖ್ಯಮಂತ್ರಿ ಚಾಲನೆ
ಮಾಲೂರು: ತಾಲ್ಲೂಕಿನಲ್ಲಿ ₹3,200 ಕೋಟಿ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ವಿವಿಧ ಇಲಾಖೆಗಳ ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದೇ 18ರ ಶನಿವಾರ ತಾಲ್ಲೂಕಿಗೆ ಭೇಟಿ ನೀಡಲಿದ್ದಾರೆ ಎಂದು ಶಾಸಕ ಕೆ.ವೈ. ನಂಜೇಗೌಡ ಶುಕ್ರವಾರ ತಿಳಿಸಿದರು.ತಾಲ್ಲೂಕಿನ ಚೊಕ್ಕಂಡಹಳ್ಳಿ ಬಳಿ ಸಾಧನಾ ಸಮಾವೇಶದ ತಯಾರಿಗೆ ಭೂಮಿಪೂಜೆ
ಮಾಲೂರು: ತಾಲ್ಲೂಕಿನಲ್ಲಿ ₹3,200 ಕೋಟಿ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ವಿವಿಧ ಇಲಾಖೆಗಳ ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದೇ 18ರ ಶನಿವಾರ ತಾಲ್ಲೂಕಿಗೆ ಭೇಟಿ ನೀಡಲಿದ್ದಾರೆ ಎಂದು ಶಾಸಕ ಕೆ.ವೈ. ನಂಜೇಗೌಡ ಶುಕ್ರವಾರ ತಿಳಿಸಿದರು.ತಾಲ್ಲೂಕಿನ ಚೊಕ್ಕಂಡಹಳ್ಳಿ ಬಳಿ ಸಾಧನಾ ಸಮಾವೇಶದ ತಯಾರಿಗೆ ಭೂಮಿಪೂಜೆ ನೆರವೇರಿಸಿ, ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿನ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ. ಯಾವುದೇ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿಲ್ಲ. ಈಗ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದು ಹೇಳಿದರು.ಸಮಾರಂಭದಲ್ಲಿ 50 ಸಾವಿರ ಮಂದಿ ಭಾಗಿಯಾಗಲಿದ್ದಾರೆ. ಎಲ್ಲರಿಗೂ ತಾಲ್ಲೂಕಿಗೆ ಬಿಡುಗಡೆಯಾದ ಅನುದಾನದ ಅಂಕಿ ಅಂಶಗಳ ‘ಸಾಧನೆ ಸಂಭ್ರಮ’ ಎಂಬ ಕಿರುಪತ್ರಿಕೆ ವಿತರಿಸಲಾಗುವುದು. ಡಿಸಿಎಂ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ತಹಶೀಲ್ದಾರ್ ಎಂ.ವಿ.ರೂಪಾ, ತಾ.ಪಂ ಇಒ ವಿ.ಕೃಷ್ಣಪ್ಪ, ನಗರಸಭೆ ಪೌರಾಯುಕ್ತ ಎಂ.ಎಸ್. ಮಹದೇವ್, ಮಡಿವಾಳ ಗ್ರಾಮ ಪಂಚಾಯಿತಿ ಪಿಡಿಒ ಕಾಶಿನಾಥ್, ಮುಖಂಡರಾದ ಮುನಿರಾಜು, ರಮೇಶ್, ಇಂತಿಯಾಜ್, ಮುರಳಿ, ಆರ್.ವೆಂಕಟೇಶ್, ಹನುಮಂತ್ ರೆಡ್ಡಿ, ಶಬೀರ್, ತನ್ವೀರ್, ಹರೀಶ್ ಗೌಡ, ವಸಂತ್, ಮಾಸ್ತಿ ಚೇತನ್, ನಾಗರಾಜ್ ಉಪಸ್ಥಿತರಿದ್ದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260712-18-2070428761