ಕಾಲು ಕಳೆದುಕೊಂಡ ಮಹಿಳೆ: ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಎಫ್ಐಆರ್
ಕೋಲ್ಕತ್ತ: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಚಿಕಿತ್ಸೆ ಪಡೆದ ನಂತರ ಕಾಲು ಕಳೆದುಕೊಂಡಿದ್ದಾಗಿ ಮಹಿಳೆಯೊಬ್ಬರು ದೂರು ನೀಡಿದ್ದು, ದೂರಿನನ್ವಯ ಅಭಿಷೇಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಟಿಎಂಸಿ ಅಧಿಕಾರವಧಿಯಲ್ಲಿ ಜನವರಿ 2ರಂದು ಅಭಿಷೇಕ್ ಅವರು ‘ಸೇವಾಶ್ರಯ ಶಿಬಿರ’ ಎಂಬ ಆರೋಗ್ಯ ಸೇವೆ ಯೋಜನೆಯನ್ನು ಪ್ರಾರಂಭಿಸಿದ

ಕೋಲ್ಕತ್ತ: ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಚಿಕಿತ್ಸೆ ಪಡೆದ ನಂತರ ಕಾಲು ಕಳೆದುಕೊಂಡಿದ್ದಾಗಿ ಮಹಿಳೆಯೊಬ್ಬರು ದೂರು ನೀಡಿದ್ದು, ದೂರಿನನ್ವಯ ಅಭಿಷೇಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಟಿಎಂಸಿ ಅಧಿಕಾರವಧಿಯಲ್ಲಿ ಜನವರಿ 2ರಂದು ಅಭಿಷೇಕ್ ಅವರು ‘ಸೇವಾಶ್ರಯ ಶಿಬಿರ’ ಎಂಬ ಆರೋಗ್ಯ ಸೇವೆ ಯೋಜನೆಯನ್ನು ಪ್ರಾರಂಭಿಸಿದ್ದರು. ಈ ಆರೋಗ್ಯ ಶಿಬಿರಗಳಲ್ಲಿ ಅಕ್ರಮ ಎಸಗಿರುವ ಆರೋಪದಡಿ ಅಭಿಷೇಕ್ ವಿರುದ್ಧ ಈಗಾಗಲೇ ಎರಡು ಎಫ್ಐಆರ್ಗಳು ದಾಖಲಾಗಿವೆ. ದಕ್ಷಿಣ 24 ಪರಗಣ ಜಿಲ್ಲೆಯ ಮಾಲೋತಿ ಬಿಸ್ವಾ ಎಂಬ ಮಹಿಳೆಯು, ಶಿಬಿರದಲ್ಲಿನ ವೈದ್ಯರ ನಿರ್ಲಕ್ಷ್ಯದಿಂದ ತಮ್ಮ ಕಾಲನ್ನೇ ಕತ್ತರಿಸಬೇಕಾಯಿತು ಎಂದು ದೂರಿನಲ್ಲಿ ಹೇಳಿದ್ದಾರೆ.ಮೊಣಕಾಲು ನೋವಿನಿಂದ ಬಳಲುತ್ತಿದ್ದ ಮಹಿಳೆಯು ಕೆಲ ದಿನಗಳ ಹಿಂದೆ ಸೇವಾಶ್ರಯ ಶಿಬಿರಕ್ಕೆ ಹೋಗಿ ಅಲ್ಲಿನ ವೈದ್ಯರು ನೀಡಿದ ಔಷಧಗಳನ್ನು ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ.‘ಔಷಧಿಯಿಂದ ಸ್ವಲ್ಪವೂ ಚೇತರಿಕೆ ಕಂಡು ಬರಲಿಲ್ಲ ಹಾಗೂ ನನ್ನ ಸ್ಥಿತಿ ಮತ್ತಷ್ಟು ಹದಗೆಟ್ಟಿತು. ಮತ್ತೆ ಸೇವಾಶ್ರಯಕ್ಕೆ ಹೋದಾಗ ಅಲ್ಲಿನ ವೈದ್ಯರು ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟರು. ಹಣ ಕೊಡಲು ನಿರಾಕರಿಸಿದ ಬಳಿಕ ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು. ಬಲಗಾಲಿಗೆ ಆಗಿರುವ ಗಾಯವನ್ನು ಗುಣಪಡಿಸಲು ಸಾಧ್ಯವಿಲ್ಲ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ಕಾಲನ್ನು ಕತ್ತರಿಸಿದರು’ ಎಂದು ದೂರಿನಲ್ಲಿ ಹೇಳಿದ್ದಾರೆ.