ಅಪಘಾತ: 2ನೇ ಸ್ಥಾನದಲ್ಲಿ ಬೆಂಗಳೂರು
ನವದೆಹಲಿ: 2024ರಲ್ಲಿ ದೇಶದ ಮಹಾ ನಗರಗಳಲ್ಲಿ ಸಂಭವಿಸಿದ ರಸ್ತೆ ಅಪಘಾತ ಗಳಲ್ಲಿ ಪಾದಚಾರಿಗಳು ಮೃತಪಟ್ಟ ಘಟನೆಗಳಿಗೆ ಸಂಬಂಧಿಸಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಇದೇ ವಿಚಾರವಾಗಿ, ರಾಜ್ಯಗಳ ಪೈಕಿ ಕರ್ನಾಟಕ ಐದನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ 584 ಪಾದಚಾರಿಗಳು ಮೃತಪಟ್ಟಿದ್ದು, ಮೊದಲ ಸ್ಥಾನದಲ್ಲಿದೆ.ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಇತ್ತೀಚೆಗೆ
ನವದೆಹಲಿ: 2024ರಲ್ಲಿ ದೇಶದ ಮಹಾ ನಗರಗಳಲ್ಲಿ ಸಂಭವಿಸಿದ ರಸ್ತೆ ಅಪಘಾತ ಗಳಲ್ಲಿ ಪಾದಚಾರಿಗಳು ಮೃತಪಟ್ಟ ಘಟನೆಗಳಿಗೆ ಸಂಬಂಧಿಸಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಇದೇ ವಿಚಾರವಾಗಿ, ರಾಜ್ಯಗಳ ಪೈಕಿ ಕರ್ನಾಟಕ ಐದನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ 584 ಪಾದಚಾರಿಗಳು ಮೃತಪಟ್ಟಿದ್ದು, ಮೊದಲ ಸ್ಥಾನದಲ್ಲಿದೆ.ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಭಾರತದಲ್ಲಿ ರಸ್ತೆ ಅಪಘಾತಗಳು’ ವರದಿಯಲ್ಲಿ ಈ ಆಘಾತಕಾರಿ ಮಾಹಿತಿ ಇದೆ.ಬೆಂಗಳೂರಿನಲ್ಲಿ 1,216 ರಸ್ತೆ ಅಪಘಾತಗಳು ಸಂಭವಿಸಿದ್ದವು. ಈ ಅಪಘಾತಗಳಲ್ಲಿ 246 ಪಾದಚಾರಿಗಳು ಮೃತಪಟ್ಟು, ಇತರ 1,039 ಪಾದಚಾರಿ ಗಳು ಗಾಯಗೊಂಡಿದ್ದರು. ಮೃತಪಟ್ಟವರ ಪೈಕಿ ಹೆಚ್ಚು ಜನರು 60 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನವರಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.ದೆಹಲಿಯಲ್ಲಿ 2,184 ಅಪಘಾತಗಳು ಸಂಭವಿಸಿದ್ದವು ಎಂದೂ ಹೇಳಲಾಗಿದೆ.ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ, ಬೆಂಗಳೂರಿನಲ್ಲಿ ಪಾದಚಾರಿಗಳ ಸಾವುಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. 2020 ಹಾಗೂ 2024ರ ನಡುವೆ ಪಾದಚಾರಿಗಳನ್ನೊಳಗೊಂಡ 4,954 ಅಪಘಾತಗಳು ಸಂಭವಿಸಿದ್ದವು. ಈ ವೇಳೆ ಒಟ್ಟು 1,108 ಪಾದಚಾರಿಗಳು ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.ವರದಿಯ ಪ್ರಮುಖ ಅಂಶಗಳುರಸ್ತೆ ದಾಟುವಾಗ ಫುಟ್ಪಾತ್ಗಳ ಮೇಲೆ ನಿಂತಿರುವಾಗ ಮತ್ತು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವಾಹನಗಳು ಡಿಕ್ಕಿ ಹೊಡೆದು ಅಪಘಾತಗಳು ಸಂಭವಿಸಿವೆ ಪಾದಚಾರಿಗಳಿಗೆ ದ್ವಿಚಕ್ರ ವಾಹನಗಳೇ ಅತಿದೊಡ್ಡ ಅಪಾಯಕಾರಿಯಾಗಿವೆ. ಬೆಂಗಳೂರಿನಲ್ಲಿ ಸಂಭವಿಸಿದ ಪಾದಚಾರಿಗಳ ಸಾವುಗಳಲ್ಲಿ ಶೇ28.4 ರಷ್ಟು ಪ್ರಕರಣಗಳಲ್ಲಿ ದ್ವಿಚಕ್ರ ವಾಹನಗಳಿಂದ ಸಂಭವಿಸಿದ ಅಪಘಾತಗಳೇ ಕಾರಣ ರಾಜ್ಯಗಳ ವಿಚಾರದಲ್ಲಿ 2024ರಲ್ಲಿ 2321 ಸಾವುಗಳೊಂದಿಗೆ ಕರ್ನಾಟಕ ಐದನೇ ಸ್ಥಾನದಲ್ಲಿದೆ ಅತಿವೇಗವಾಗಿ ವಾಹನಗಳನ್ನು ಓಡಿಸುವುದು ಪಥಗಳ ಶಿಸ್ತು ಪಾಲನೆ ಮಾಡದಿರುವುದು ಫುಟ್ಪಾತ್ಗಳು ಝೀಬ್ರಾ ಕ್ರಾಸಿಂಗ್ಗಳ ಕೊರತೆ ಹಾಗೂ ಪಾದಚಾರಿಗಳ ಓಡಾಟಕ್ಕೆ ಮೀಸಲಾದ ಜಾಗಗಳನ್ನು ಒತ್ತುವರಿ ಮಾಡಿಕೊಳ್ಳುವುದು ಸಾವುಗಳು ಹೆಚ್ಚಾಗಲು ಕಾರಣ