ಮಾರ್ಗರೆಟಾ ಗೆಲ್ಲುವ ಫೇವರಿಟ್
ಬೆಂಗಳೂರು: ‘ಉದ್ಯಾನನಗರಿ’ಯ ರೇಸ್ಪ್ರಿಯರ ಬಹುನಿರೀಕ್ಷಿತ ‘ಬೇಸಿಗೆ ಡರ್ಬಿ’ಗೆ ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಸಜ್ಜಾಗಿದೆ. ಜವಾರೆ ಎಸ್. ಪೂನಾವಾಲಾ ಪ್ರಾಯೋಜಕತ್ವದಲ್ಲಿ ಏರ್ಪಡಿಸಿರುವ ಡರ್ಬಿಯ ಒಟ್ಟು ಬಹುಮಾನದ ಮೊತ್ತ ಈ ಬಾರಿ ಐದು ಕೋಟಿ ರೂಪಾಯಿ ಇದೆ.ಭಾರತದ ರೇಸಿಂಗ್ ಇತಿಹಾಸದಲ್ಲಿ ಅತ್ಯಂತ ಶ್ರೀಮಂತ ಡರ್ಬಿ ರೇಸ್ ಇದಾಗಿದ್ದು, ವಿಜೇತ ಕ

ಬೆಂಗಳೂರು: ‘ಉದ್ಯಾನನಗರಿ’ಯ ರೇಸ್ಪ್ರಿಯರ ಬಹುನಿರೀಕ್ಷಿತ ‘ಬೇಸಿಗೆ ಡರ್ಬಿ’ಗೆ ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಸಜ್ಜಾಗಿದೆ. ಜವಾರೆ ಎಸ್. ಪೂನಾವಾಲಾ ಪ್ರಾಯೋಜಕತ್ವದಲ್ಲಿ ಏರ್ಪಡಿಸಿರುವ ಡರ್ಬಿಯ ಒಟ್ಟು ಬಹುಮಾನದ ಮೊತ್ತ ಈ ಬಾರಿ ಐದು ಕೋಟಿ ರೂಪಾಯಿ ಇದೆ.ಭಾರತದ ರೇಸಿಂಗ್ ಇತಿಹಾಸದಲ್ಲಿ ಅತ್ಯಂತ ಶ್ರೀಮಂತ ಡರ್ಬಿ ರೇಸ್ ಇದಾಗಿದ್ದು, ವಿಜೇತ ಕುದುರೆಯ ಮಾಲೀಕರು ಸುಮಾರು ₹ 2.45 ಕೋಟಿ ಜೊತೆಗೆ ₹ 5 ಲಕ್ಷ ಮೌಲ್ಯದ ಟ್ರೋಫಿಯನ್ನು ಪಡೆಯಲಿದ್ದಾರೆ. ಅಲ್ಲದೆ ತಲಾ ₹1 ಲಕ್ಷ ಮೌಲ್ಯದ ಟ್ರೋಫಿಯನ್ನು ಕುದುರೆಯ ತರಬೇತುದಾರ, ಸವಾರ ಮತ್ತು ಬ್ರೀಡರ್ಸ್ಗಳಿಗೆ ನೀಡಲಾಗುತ್ತದೆ.ಬಿಟಿಸಿ ಸಹಬಾಗಿತ್ವದಲ್ಲಿ ನಡೆಯುವ ಈ ಪ್ರತಿಷ್ಠಿತ ರೇಸ್ನಲ್ಲಿ ಚಾಂಪಿಯನ್ ತರಬೇತುದಾರ ಪೆಸಿ ಶ್ರಾಫ್ ಮತ್ತೊಮ್ಮೆ ಪ್ರಾಬಲ್ಯ ಮೆರೆಯುವ ಉತ್ಸಾಹದಲ್ಲಿದ್ದಾರೆ. ಇವರ ತರಬೇತಿಯಲ್ಲಿ ಪಳಗಿರುವ ಗಂಡು ಕುದುರೆ ಡಾರ್ಟಗ್ನಾನ್ ಮತ್ತು ಹೆಣ್ಣು ಕುದುರೆ ಮಾರ್ಗರೆಟ್ಟಾ ಕಣದಲ್ಲಿರುವ ಪ್ರಮುಖ ಸ್ಪರ್ಧಿಗಳಾಗಿವೆ. ಒಟ್ಟು ಎಂಟು ಅಶ್ವಗಳು ಸ್ಪರ್ಧೆಯಲ್ಲಿವೆ. ಅದರಲ್ಲಿ ಎರಡು ಗಂಡು ಮತ್ತು ಆರು ಹೆಣ್ಣು ಕುದುರೆಗಳು ಕಣದಲ್ಲಿವೆ. ಮಾರ್ಗರೆಟ್ಟಾ ಅಮೋಘ ಫಾರ್ಮ್ನಲ್ಲಿದೆ. ಡಾರ್ಟಗ್ನಾನ್ ಕೂಡ ತೀವ್ರ ಪೈಪೋಟಿ ಯೊಡ್ಡುವ ನಿರೀಕ್ಷೆ ಇದೆ. ಉಳಿದ ಆರು ಕುದುರೆಗಳೂ ಉತ್ತಮ ಲಯದಲ್ಲಿವೆ.ಡರ್ಬಿ ರೇಸ್ ನಡೆಯುವ ಸಮಯ: ಸಂಜೆ 4ಹ್ಯವಾಕ್ಡಾರ್ಟಗ್ನಾನ್ನಾಟಿ ಎಂಪರರ್ಡಿಜಿಟಲ್ ಎಂಪ್ರೆಸ್ಮೂನ್ವೀಲ್ವೋರ್ಟೆಕ್ಸ್ಪರ್ಲ್ ಸ್ಟಾರ್