ಸರ್ಕಾರಿ ಗೌರವದೊಂದಿಗೆ ಗಾನಕೋಗಿಲೆ ಎಸ್.ಜಾನಕಿ ಅಂತ್ಯಕ್ರಿಯೆ
ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಕಣಿಯನ ಹುಂಡಿಯ ತೋಟದ ಮನೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ಅಂತ್ಯಕ್ರಿಯೆಯು ಭಾನುವಾರ ಸಂಜೆ ಸಕಲ ಸರ್ಕಾರಿ ಗೌರವದೊಂದಿಗೆ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು.ಜಾನಕಿ ಮೊಮ್ಮಗಳು ಅಪ್ಸರಾ ಹಾಗೂ ಸೊಸೆ ಉಮಾ ಅವರು ಮುಂದೆ ನಿಂತು ಧಾರ್ಮಿಕ ವಿಧಿ ವಿಧಾನ ನಡೆಸಿಕೊಟ್ಟರು. ಅಪ್ಸರಾ ಸಂಜೆ 5.36ಕ್ಕೆ ಚಿತೆಗೆ ಬೆಂ
ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಕಣಿಯನ ಹುಂಡಿಯ ತೋಟದ ಮನೆಯಲ್ಲಿ ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ಅಂತ್ಯಕ್ರಿಯೆಯು ಭಾನುವಾರ ಸಂಜೆ ಸಕಲ ಸರ್ಕಾರಿ ಗೌರವದೊಂದಿಗೆ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು.ಜಾನಕಿ ಮೊಮ್ಮಗಳು ಅಪ್ಸರಾ ಹಾಗೂ ಸೊಸೆ ಉಮಾ ಅವರು ಮುಂದೆ ನಿಂತು ಧಾರ್ಮಿಕ ವಿಧಿ ವಿಧಾನ ನಡೆಸಿಕೊಟ್ಟರು. ಅಪ್ಸರಾ ಸಂಜೆ 5.36ಕ್ಕೆ ಚಿತೆಗೆ ಬೆಂಕಿ ಇಟ್ಟರು. ಆ ಮೂಲಕ ಸಂಗೀತ ಲೋಕದ ಅಪ್ರಮತಿಮ ಧ್ವನಿಯೊಂದು ಮರೆಯಾಯಿತು.ಸಶಸ್ತ್ರ ಮೀಸಲು ಪಡೆಯ ಇನ್ ಸ್ಪೆಕ್ಟರ್ ದೇವಿಪ್ರಸಾದ್ ನೇತೃತ್ವದ ಹತ್ತು ಜನ ಪೊಲೀಸ್ ಸಿಬ್ಬಂದಿಗಳ ತಂಡ ಗಾಳಿಯಲ್ಲಿ ಮೂರು ಸುತ್ತು ಗುಂಡು ಹೊಡೆದರು. ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆ ನುಡಿಸಿತು.ನೆಚ್ಚಿನ ಗಾಯಕಿಯ ಅಂತ್ಯಕ್ರಿಯೆಗಾಗಿ ಸಾವಿರಾರು ಅಭಿಮಾನಿಗಳು ಸೇರಿದ್ದರು. ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಜನ ಒಲ ಬರದಂತೆ ತಡೆಲಾಗಿತ್ತು. ಚಿತೆಗೆ ಬೆಂಕಿ ಇಡುತ್ತಿದ್ದಂತೆ ಅಭಿಮಾನಿಗಳು 'ಅಮರವಾಗಲಿ ಜಾನಕಮ್ಮ ಅಮರವಾಗಲಿ' ಎಂದು ಕೂಗಿದರು.ರಸ್ತೆಯುದ್ದಕ್ಕೂ ಅಭಿಮಾನಿಗಳಿಂದ ನಮನ: ಮಹಾರಾಜ ಮೈದಾನದಿಂದ ಹೊರಟ ಪಾರ್ಥೀವ ಶರೀರವು ಕಣಿಯನಹುಂಡಿ ತಲುಪುವ ರಸ್ತೆಯ ಉದ್ದಕ್ಕೂ ಅಭಿಮಾನಿಗಳು ಗುಂಪು- ಗುಂಪಾಗಿ ಸೇರಿದ್ದರು. ಹೂವಿನಿಂದ ಅಲಂಕೃತಗೊಂಡಿದ್ದ ವಾಹನ ತೆರಳುತ್ತಿದ್ದಂತೆ ರಸ್ತೆ ಬದಿ ನಿಂತಿದ್ದ ಮಹಿಳೆಯರು ಕೈ ಮುಗಿದು ಕಣ್ಣೀರಾದರು. ಹಳ್ಳಿಗಳಲ್ಲಿ ಮನೆಯಿಂದ ಓಡೋಡಿ ಬಂದು ಅಂತಿಮ ಯಾತ್ರೆ ಕಣ್ತುಂಬಿಕೊಂಡರು. ಆಂಧ್ರಪ್ರದೇಶದಲ್ಲಿ ಹುಟ್ಟಿ ತನ್ನ ಕಂಠದ ಮೂಲಕವೇ ದೇಶದೆಲ್ಲೆಡೆ ಹೆಸರು ಮಾಡಿದ ಎಸ್.ಜಾನಕಿ ಅವರ ಕೊನೆಯ ಯಾತ್ರೆಗೆ ಮೈಸೂರಿನ ಜನ ಗೌರವದಿಂದ ನಮಿಸಿದರು.ಭಾವುಕರಾದ ಕಣಿಯನಹುಂಡಿ ಗ್ರಾಮಸ್ಥರು: ಕಿರಿದಾದ ಊರಿನ ರಸ್ತೆಯಲ್ಲಿ ಪಾರ್ಥೀವ ಶರೀರ ಆಗಮಿಸುತ್ತಿದ್ದಂತೆ ಕಣಿಯನಹುಂಡಿ ಗ್ರಾಮಸ್ಥರೆಲ್ಲಾ ರಸ್ತೆಯುದ್ದಕ್ಕೂ ಸಾಲಾಗಿ ನಿಂತು ಅಂತಿಮ ದರ್ಶನ ಪಡೆದರು. ತಮ್ಮೂರಿನ ರಸ್ತೆಯುದ್ದಕ್ಕೂ ನಿಧಾನಗತಿಯಲ್ಲಿ ಸಾಗುತ್ತಿದ್ದ ನೂರಾರು ವಾಹನಗಳು ಕಂಡು ಮೊಬೈಲ್ ನಲ್ಲಿ ಚಿತ್ರೀಕರಿಸಿದರು. 'ಜನಪ್ರಿಯ ಗಾಯಕಿಯ ಅಂತ್ಯಕ್ರಿಯೆ ನಮ್ಮೂರಿನಲ್ಲಿ ನಡೆಯುತ್ತಿರುವುದಕ್ಕೆ ನಮ್ಮೂರು ಪುಣ್ಯ ಮಾಡಿತ್ತು' ಎಂದು ಹಿರಿಯರು ಮಾತನಾಡಿಕೊಂಡರು.ಬಿಗಿ ಪೊಲೀಸ್ ಬಂದೊಬಸ್ತ್: ಜಿಲ್ಲಾ ಪೊಲೀಸ್ ಇಲಾಖೆಯು ಅಂತ್ಯಕ್ರಿಯೆ ಸ್ಥಳದಲ್ಲಿ ಹಾಗೂ ರಸ್ತೆಯುದ್ದಕ್ಕೂ ಬಿಗಿಬಂದೊಬಸ್ತ್ ಮಾಡಿದ್ದರು.