ಪಹಲ್ಗಾಮ್ನಲ್ಲಿ ಮೇಘಸ್ಫೋಟದಿಂದ ಹಠಾತ್ ಪ್ರವಾಹ – ಮನೆ, ಹೋಟೆಲ್ಗಳಿಗೆ ಜಲ ದಿಗ್ಬಂಧನ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಂಟಾದ ಮೇಘಸ್ಫೋಟದಿಂದ (Cloudburst) ಹಠಾತ್ ಪ್ರವಾಹ ಸಂಭವಿಸಿದ್ದು, ಭಾರೀ ಅನಾಹುತ ಸೃಷ್ಟಿಸಿದೆ. ಪ್ರವಾಹದಿಂದ ಪಹಲ್ಗಾಮ್ನಲ್ಲಿ ಹಲವಾರು ಮನೆ ಹೋಟೆಲ್ಗಳು ಜಲಾವೃತಗೊಂಡಿವೆ. ದಕ್ಷಿಣ ಕಾಶ್ಮೀರದ ಅನಂತ್ನಾಗ್ (Anantnag) ಜಿಲ್ಲೆಯ ಅವೂರಾ ಮತ್ತು ದೆವಾತು ಅರಣ್ಯ ಪ್ರದೇಶಗಳಿಗೂ ಪ್ರವಾಹ ಅಪ್ಪಳಿಸಿದೆ. ವರದಿಗಳ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಂಟಾದ ಮೇಘಸ್ಫೋಟದಿಂದ (Cloudburst) ಹಠಾತ್ ಪ್ರವಾಹ ಸಂಭವಿಸಿದ್ದು, ಭಾರೀ ಅನಾಹುತ ಸೃಷ್ಟಿಸಿದೆ. ಪ್ರವಾಹದಿಂದ ಪಹಲ್ಗಾಮ್ನಲ್ಲಿ ಹಲವಾರು ಮನೆ ಹೋಟೆಲ್ಗಳು ಜಲಾವೃತಗೊಂಡಿವೆ. ದಕ್ಷಿಣ ಕಾಶ್ಮೀರದ ಅನಂತ್ನಾಗ್ (Anantnag) ಜಿಲ್ಲೆಯ ಅವೂರಾ ಮತ್ತು ದೆವಾತು ಅರಣ್ಯ ಪ್ರದೇಶಗಳಿಗೂ ಪ್ರವಾಹ ಅಪ್ಪಳಿಸಿದೆ. ವರದಿಗಳ ಪ್ರಕಾರ, ಶನಿವಾರ ಸಂಜೆ 6:00 ರಿಂದ ರಾತ್ರಿ 9:30 ರ ನಡುವೆ ಪ್ರದೇಶದಲ್ಲಿ ನಿರಂತರ ಮತ್ತು ಭಾರೀ ಮಳೆಯಾಗಿದೆ. ರಾತ್ರಿ 8:00 ರಿಂದ ರಾತ್ರಿ 9:00 ರ ನಡುವೆ ಪಹಲ್ಗಾಮ್ನಲ್ಲಿ ಹಠಾತ್ ಪ್ರವಾಹ (Pahalgam Flash Flood) ಸಂಭವಿಸಿದೆ. ಇದರಿಂದ ಹಲವಾರು ಮನೆ ಮತ್ತು ಹೋಟೆಲ್ಗಳಿಗೆ ನೀರು ನುಗ್ಗಿದ್ದು, ಜಲಾವೃತ್ತಗೊಂಡಿದೆ. ಚರಂಡಿಗಳಿಗೂ ನೀರು ತುಂಬಿಕೊಟ್ಟು ರಸ್ತೆಗೆ ಹರಿದಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಆದಾಗ್ಯೂ ಪ್ರದೇಶದಲ್ಲಿ ಎಲ್ಲಾ ಪ್ರವಾಸಿಗರು ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. A cloudburst has struck #Pahalgam in Indian-administered Kashmir, India triggering flash floods that swept through the area surrounding hotels along the banks of the Nallah Afura River. Local authorities are monitoring the situation, and no casualties have been reported so… pic.twitter.com/V0gdJJaGQA — sustainme.in® (@sustainme_in) July 11, 2026 ರಕ್ಷಣಾ ತಂಡಗಳು ಕೂಡಲೇ ಪ್ರವಾಹಪೀಡಿತ ಪ್ರದೇಶದ ಹೋಟೆಲ್ಗಳಲ್ಲಿದ್ದ ಪ್ರವಾಸಿಗರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ರು. ಸದ್ಯಕ್ಕೆ ಯಾವುದೇ ಜೀವಹಾನಿ – ಆಸ್ತಿಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ. ಭಾನುವಾರ (ಇಂದು) ಕಳೆದ ಕೆಲ ಗಂಟೆಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ಶೇಷ್ನಾಗ್ ನುಲ್ಲಾ ಮತ್ತು ಲಿಡ್ಡರ್ ನುಲ್ಲಾ ಪ್ರದೇಶಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಏರುತ್ತಿದೆ. ಎಡರಡೂ ಜಲಾಶಯಗಳು ಅಪಾಯಪಟ್ಟಕ್ಕಿಂತ ಕಡಿಕೆ ಇರೋದ್ರಿಂದ ಸದ್ಯಕ್ಕೆ ಯಾವುದೇ ಆತಂಕ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೇ, ಮಳೆಯಿಂದಾಗಿ ಪ್ರವಾಹ ಒಂದುಕಡೆಯಾದ್ರೆ, ಕಿಶ್ತ್ವಾರ್ ಮತ್ತು ದೋಡಾದಲ್ಲಿ ಭೂಕುಸಿತಗಳು ಸಂಭವಿಸಿವೆ ಎಂದು ವರದಿಗಳು ತಿಳಿಸಿವೆ.