ಜಾನಕಿ ಅಮ್ಮನ ನೆನಪಿಗಾಗಿ ಮೈಸೂರು ವಿವಿಯಲ್ಲಿ ಸಂಗೀತ ಅಧ್ಯಯನ ಪೀಠ ತೆರೆಯಬೇಕು – ಸರ್ಕಾರಕ್ಕೆ ಜಯಮಾಲ ಮನವಿ
ಮೈಸೂರು: ‘ದಕ್ಷಿಣ ಭಾರತದ ಗಾನ ಕೋಗಿಲೆ’ ಎಸ್ ಜಾನಕಿ (S Janaki) ಅವರ ಸಂಗೀತ ಪಯಣ ಭಾರತೀಯ ಸಿನಿಸಂಗೀತದ ಸುವರ್ಣ ಅಧ್ಯಾಯ. 1957ರಲ್ಲಿ ಗಾಯನ ಆರಂಭಿಸಿದ ಎಸ್ ಜಾನಕಿ 6 ದಶಕಗಳಿಗೂ ಹೆಚ್ಚು ಕಾಲ 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದರು. ಕನ್ನಡದಲ್ಲೇ ಅತಿ ಹೆಚ್ಚು ಹಾಡುಗಳನ್ನು ಹಾಡಿರುವ ಜಾನಕಿ ಅವರ

ಮೈಸೂರು: ‘ದಕ್ಷಿಣ ಭಾರತದ ಗಾನ ಕೋಗಿಲೆ’ ಎಸ್ ಜಾನಕಿ (S Janaki) ಅವರ ಸಂಗೀತ ಪಯಣ ಭಾರತೀಯ ಸಿನಿಸಂಗೀತದ ಸುವರ್ಣ ಅಧ್ಯಾಯ. 1957ರಲ್ಲಿ ಗಾಯನ ಆರಂಭಿಸಿದ ಎಸ್ ಜಾನಕಿ 6 ದಶಕಗಳಿಗೂ ಹೆಚ್ಚು ಕಾಲ 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದರು. ಕನ್ನಡದಲ್ಲೇ ಅತಿ ಹೆಚ್ಚು ಹಾಡುಗಳನ್ನು ಹಾಡಿರುವ ಜಾನಕಿ ಅವರು 4 ರಾಷ್ಟ್ರೀಯ ಪ್ರಶಸ್ತಿಗಳು, 33 ರಾಜ್ಯ ಪ್ರಶಸ್ತಿಗಳು ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರರಾಗಿದ್ದರು. ಅವರೀಗ ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ನಟಿ ಜಯಮಾಲ (KFCC President Jayamala), ಜಾನಕಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಜಾನಕಿ ಅಮ್ಮನ ನೆನಪಿಗಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ (Mysuru University) ಸಂಗೀತ ಅಧ್ಯಯನ ಪೀಠ ತೆರೆಯಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 1975ರಿಂದ ಜಾನಕಮ್ಮರನ್ನ ಬಲ್ಲೆ. ಪ್ರೇಮದ ಕಾಣಿಕೆ ವೇಳೆ ಪರಿಚಯ ಆಯ್ತು. ಅವರಲ್ಲಿರುವ ವೈವಿಧ್ಯತೆ ಇನ್ಯಾರಲ್ಲೂ ಕಾಣಲು ಸಾಧ್ಯವಿಲ್ಲ. ಭಾರತದ ಇತಿಹಾಸದಲ್ಲಿ ಅವರದ್ದೊಂದು ದಾಖಲೆ. ಅವರು ಶ್ರೇಷ್ಠ ಗಾನಕೋಗಿಲೆ, ಅವರನ್ನ ಕಳೆದುಕೊಂಡಿರುವುದು ಭಾರತೀಯ ಚಿತ್ರರಂಗಕ್ಕೆ ಬಹಳ ದೊಡ್ಡ ನೋವು ಆಗಿದೆ. ನಮ್ಮ ಗೆಲುವಿನ ಹಿಂದೆ ಜಾನಕಿ ಅವರು ಇದ್ರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಮನವಿ ಮಾಡಿದ್ದಾರೆ. ಜಾನಕಮ್ಮ ಮೈಸೂರಿನ ಸೊಸೆ. ಇದೇ ಜಾಗದಲ್ಲಿ ಅವರು ಉಸಿರು ಬಿಟ್ಟಿದ್ದಾರೆ. ಮೈಸೂರು ವಿವಿಯಲ್ಲಿ ಸಂಗೀತದ ಅಧ್ಯಯನ ಪೀಠ ತೆರೆಯಬೇಕು. ಈ ಮೂಲಕ ಜಾನಕಮ್ಮ ಅವರನ್ನು ನಮ್ಮ ಜೊತೆ ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ನಟಿ ಜಯಮಾಲಾ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.