ಹಾಡು ನಿಲ್ಲಿಸಿದ ಸ್ವರ ಸಾಮ್ರಾಜ್ಞಿ: ಅಪರೂಪದ ಚಿತ್ರಗಳು ಇಲ್ಲಿವೆ..
ಸತತವಾಗಿ 69 ವರ್ಷಗಳಿಂದ ಹಾಡುತ್ತಿದ್ದ ಗಾನಕೋಗಿಲೆಯ ದನಿ ಈಗ ವಿರಮಿಸಿದೆ. 20 ಭಾಷೆಗಳ ಚಲನಚಿತ್ರಗಳಲ್ಲಿ ತಮ್ಮ ಪ್ರತಿಭೆ ಮೆರೆದಿರುವ ಜಾನಕಿ, ಕನ್ನಡದಲ್ಲಿ ಸುಮಾರು ಮೂರು ಸಾವಿರ ಹಾಡುಗಳನ್ನು ಹಾಡಿದ್ದಾರೆ. ಮೂಲತಃ ತೆಲುಗಿನವರಾದ ಎಸ್.ಜಾನಕಿ, ಗುಂಟೂರಿನ ರೆಪೆಲ್ಲೆ ತಾಲ್ಲೂಕಿನ ಪಲ್ಲಪಟ್ಟ ದವರು. ದಕ್ಷಿಣ ಭಾರತದ ಎಲ್ಲ ಚಿತ್ರರಂಗಕ್ಕೂ ಬೇಕಾದವರಾದದ್ದು ಅವರ ಶೈಲಿಯ

ಸತತವಾಗಿ 69 ವರ್ಷಗಳಿಂದ ಹಾಡುತ್ತಿದ್ದ ಗಾನಕೋಗಿಲೆಯ ದನಿ ಈಗ ವಿರಮಿಸಿದೆ. 20 ಭಾಷೆಗಳ ಚಲನಚಿತ್ರಗಳಲ್ಲಿ ತಮ್ಮ ಪ್ರತಿಭೆ ಮೆರೆದಿರುವ ಜಾನಕಿ, ಕನ್ನಡದಲ್ಲಿ ಸುಮಾರು ಮೂರು ಸಾವಿರ ಹಾಡುಗಳನ್ನು ಹಾಡಿದ್ದಾರೆ. ಮೂಲತಃ ತೆಲುಗಿನವರಾದ ಎಸ್.ಜಾನಕಿ, ಗುಂಟೂರಿನ ರೆಪೆಲ್ಲೆ ತಾಲ್ಲೂಕಿನ ಪಲ್ಲಪಟ್ಟ ದವರು. ದಕ್ಷಿಣ ಭಾರತದ ಎಲ್ಲ ಚಿತ್ರರಂಗಕ್ಕೂ ಬೇಕಾದವರಾದದ್ದು ಅವರ ಶೈಲಿಯಿಂದ. ಸಂಗೀತ ನಿರ್ದೇಶಕಿ, ರಾಗಸಂಯೋಜಕಿ, ಕವಯತ್ರಿಯೂ ಆಗಿದ್ದ ಎಸ್.ಜಾನಕಿಗೆಕರ್ನಾಟಕವೆಂದರೆ ಅಚ್ಚುಮೆಚ್ಚು.ಜಾನಕಿ ಅವರು ಕನ್ನಡ ಚಿತ್ರಗಳಿಗೆ ಹಾಡಲಾರಂಭಿಸಿದ್ದು 1957ರಲ್ಲಿ. ರಾಜ್ಕುಮಾರ್ ಅವರು ಅಭಿನಯಿಸಿದ ಮೊದಲ ಸಾಮಾಜಿಕ ಚಿತ್ರ ‘ರಾಯರಸೊಸೆ’ ಜಾನಕಿ ಹಾಡಿದ ಮೊದಲ ಕನ್ನಡ ಚಿತ್ರ.ಬೆಂಗಳೂರಿನಲ್ಲಿ ನಡೆದ ಡಾ. ರಾಜ್ಕುಮಾರ್ ಅವರ ಸನ್ಮಾನ ಸಮಾರಂಭದಲ್ಲಿ ಜಾನಕಿ, ನಟಿ ಲಕ್ಷ್ಮಿಗಾಯಕತ್ರಯರ ಸಮ್ಮಿಲನ... ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಪಿ.ಬಿ. ಶ್ರೀನಿವಾಸ್ ಅವರ ಜೊತೆ ಎಸ್. ಜಾನಕಿ ಮೈಸೂರಿನ ವಿಜಯನಗರದಲ್ಲಿರುವ ಯೋಗಾನರಸಿಂಹ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಕ್ಷಣ.ಪಿರಿಯಾಪಟ್ಟಣದ ಇತಿಹಾಸ ಪ್ರಸಿದ್ಧ ಮಸಣಿಕಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ದೇವಿಗೆ ಸೀರೆ ಅರ್ಪಿಸಿದ ಕ್ಷಣಎಸ್.ಜಾನಕಿಎಸ್. ಜಾನಕಿ ಅವರೊಂದಿಗೆ ಕೆ.ಕಲ್ಯಾಣ್ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸಾರ್ವಜನಿಕವಾಗಿ ಕೊನೆಯ ಬಾರಿ ಹಾಡಿದ್ದ ಎಸ್. ಜಾನಕಿಮೈಸೂರಿನಲ್ಲಿ ಈಚೆಗೆ ತಮ್ಮ ಅಭಿಮಾನಿಗಳೊಂದಿಗೆ ಫೋಟೊ ತೆಗೆಸಿಕೊಂಡಿದ್ದ ಎಸ್.ಜಾನಕಿ.ಮೈಸೂರಿನ ಬೋಗಾದಿಯಲ್ಲಿರುವ ಅಭಿಮಾನಿಯೊಬ್ಬರ ಮನೆಯಲ್ಲಿ ಎಸ್. ಜಾನಕಿ ವಾಸವಿದ್ದರು. ಅವರು ಕೊನೆ ದಿನಗಳನ್ನು ಕಳೆದದ್ದು ಇದೇ ಮನೆಯಲ್ಲಿ.ಮಹಾರಾಜ ಕಾಲೇಜು ಮೈದಾನಕ್ಕೆ ಜಾನಕಿ ಪಾರ್ಥಿವ ಶರೀರ