ಕಟಕ ರಾಶಿಯಲ್ಲಿ ರವಿ ಸಂಚಾರ; ಯಾವ ರಾಶಿಯವರಿಗೆ ಶುಭ, ಅಶುಭ ಫಲ?
2026ರ ಜುಲೈ 16ರಂದು ರವಿಯು ಮಿಥುನ ರಾಶಿಯಿಂದ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಕಟಕ ರಾಶಿಯಲ್ಲಿ ರವಿಯು ಆಗಸ್ಟ್ 17ರವರೆಗೂ ಸಂಚರಿಸುತ್ತಾನೆ. ಈ ಅವಧಿಯಲ್ಲಿ ರವಿಯು ಪ್ರತಿಯೊಂದು ರಾಶಿಗಳಿಗೂ ವಿಭಿನ್ನವಾದ ಫಲಗಳನ್ನು ನೀಡುತ್ತಾನೆ. ಹಾಗಾದರೆ ಯಾವ ರಾಶಿಗೆ ಯಾವ ಫಲ ಲಭಿಸಲಿದೆ ಎಂಬುದನ್ನು ನೋಡೋಣ.ಮೇಷಸಣ್ಣ–ಪುಟ್ಟ ವಿಚಾರಗಳಿಗೂ ಎಲ್ಲರೊಡನೆ ವಾದ ಮಾಡುವಿರಿ. ಈ ಕಾರಣದಿ

2026ರ ಜುಲೈ 16ರಂದು ರವಿಯು ಮಿಥುನ ರಾಶಿಯಿಂದ ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಕಟಕ ರಾಶಿಯಲ್ಲಿ ರವಿಯು ಆಗಸ್ಟ್ 17ರವರೆಗೂ ಸಂಚರಿಸುತ್ತಾನೆ. ಈ ಅವಧಿಯಲ್ಲಿ ರವಿಯು ಪ್ರತಿಯೊಂದು ರಾಶಿಗಳಿಗೂ ವಿಭಿನ್ನವಾದ ಫಲಗಳನ್ನು ನೀಡುತ್ತಾನೆ. ಹಾಗಾದರೆ ಯಾವ ರಾಶಿಗೆ ಯಾವ ಫಲ ಲಭಿಸಲಿದೆ ಎಂಬುದನ್ನು ನೋಡೋಣ.ಮೇಷಸಣ್ಣ–ಪುಟ್ಟ ವಿಚಾರಗಳಿಗೂ ಎಲ್ಲರೊಡನೆ ವಾದ ಮಾಡುವಿರಿ. ಈ ಕಾರಣದಿಂದ ನಿಮಗೆ ದೊರೆಯಬೇಕಾದ ಅಮೂಲ್ಯ ಅವಕಾಶವು ಬೇರೆಯವರ ಪಾಲಾಗಬಹುದು. ನಿಮಗೆ ಇಷ್ಟವೆನಿಸುವ ಹೊಸ ವಾಹನವನ್ನು ಕೊಳ್ಳುವಿರಿ. ದುರ್ಗಾಪೂಜೆಯಿಂದ ಶುಭಫಲಗಳು ದೊರೆಯುತ್ತವೆ. ದೃಷ್ಟಿ ದೋಷ ಇದ್ದವರಿಗೆ ಸಹಾಯ ಮಾಡುವುದು ಒಳಿತು.ವೃಷಭಬುದ್ಧಿವಂತಿಕೆಯಿಂದ ಆರಂಭಿಸಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಮಕ್ಕಳ ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಸತತ ಪ್ರಯತ್ನದಿಂದ ಭೂ ವಿವಾದದಲ್ಲಿ ಯಶಸ್ಸು ಸಾಧಿಸುವಿರಿ. ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವರ ಪೂಜೆಯಿಂದ ಶುಭವಿದೆ. ತಾಯಿಯ ಆಶೀರ್ವಾದದಿಂದ ಒಳ್ಳೆಯದಾಗುತ್ತದೆ.ಶನಿ–ರವಿ ಯೋಗ: ಈ ರಾಶಿಯವರಿಗೆ ಯಶಸ್ಸಿಗೆ ತಕ್ಕ ಪ್ರಯತ್ನ ಮುಖ್ಯಯುಗಾದಿಯಿಂದ ಶನಿ, ರವಿ ಯೋಗದ ಪ್ರಭಾವ: ಕನ್ಯಾ ರಾಶಿಯವರಿಗೆ ಮಿಶ್ರಫಲಮಕರ ರಾಶಿ; ಕೇತುಗ್ರಸ್ತ ಚಂದ್ರಗ್ರಹಣದಿಂದ ವ್ಯತಿರಿಕ್ತ ಪ್ರಭಾವವಿರಲಿದೆಶನಿ–ರವಿ ಯೋಗ: ಸಿಂಹ ರಾಶಿಯವರಿಗೆ ಲಕ್ಷೀ ಕೃಪೆಮಿಥುನಸೌಂದರ್ಯ ಕುಂದುತ್ತದೆ. ಕಣ್ಣಿನ ತೊಂದರೆ ಕಂಡುಬರುತ್ತದೆ. ವಿದ್ಯಾರ್ಥಿಗಳು ಏಕಾಗ್ರತೆಯ ಕೊರತೆ ಅನುಭವಿಸುತ್ತಾರೆ. ಅನವಶ್ಯಕ ಖರ್ಚು ವೆಚ್ಚಗಳು ಇರಲಿವೆ. ಉದ್ಯೋಗದಲ್ಲಿ ಆಂತರಿಕ ಬದಲಾವಣೆಗಳು ಕಂಡುಬರುತ್ತದೆ. ಸರಸ್ವತಿಯ ಪೂಜೆಯಿಂದ ಶುಭಫಲ ದೊರೆಯುತ್ತದೆ. ಬಡರೋಗಿಗಳಿಗೆ ಧನ ಸಹಾಯ ಮಾಡುವುದು ಒಳಿತು.ಕಟಕಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ನಿಮ್ಮ ಮನಸ್ಸಿನ ವಿಚಾರವನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಮನೆತನದ ಹಣ ಮತ್ತು ಆಸ್ತಿಯಲ್ಲಿ ಉತ್ತಮ ಪಾಲು ದೊರೆಯುತ್ತದೆ. ನಿಮ್ಮ ಮಕ್ಕಳಿಗೆ ಉದ್ಯೋಗ ಲಭಿಸುವ ಸಾಧ್ಯತೆಗಳಿವೆ. ದುರ್ಗಾಪೂಜೆಯಿಂದ ಶುಭವಿದೆ. ಉತ್ತರ ದಿಕ್ಕನ್ನು ಶುಭ್ರವಾಗಿಡಿ.ಆಷಾಢ ಮಾಸ ಅಶುಭವಲ್ಲ, ಆಧ್ಯಾತ್ಮಿಕ ಸಾಧನೆಯ ಪವಿತ್ರ ಕಾಲಸಿಂಹಅನವಶ್ಯಕ ಖರ್ಚು ವೆಚ್ಚಗಳು ಇರಲಿವೆ. ಸಾಕುಪ್ರಾಣಿಯಿಂದ ತೊಂದರೆ ಉಂಟಾಗಲಿದೆ. ಅನಿವಾರ್ಯವಾಗಿ ದೀರ್ಘಕಾಲದ ಪ್ರಯಾಣ ಮಾಡುವಿರಿ. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ ಯೋಗವಿದೆ. ದಂಪತಿಗಳ ನಡುವಿನ ಮನಸ್ತಾಪ ದೂರವಾಗಲಿದೆ. ಗುರುದತ್ತರ ಪೂಜೆಯನ್ನು ಮಾಡಿ. ವಯೋವೃದ್ಧರಿಗೆ ಕಡಲೆಬೇಳೆಯಿಂದ ಮಾಡಿದ ಸಿಹಿ ತಿಂಡಿ ನೀಡಿ.ಕನ್ಯಾಅತಿಯಾದ ಜ್ವರದಿಂದ ಬಳಲುವ ಸಾಧ್ಯತೆಗಳಿವೆ. ಹಣಕಾಸಿನ ಪರಿಸ್ಥಿತಿಯು ಉತ್ತಮಗೊಳ್ಳುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಗಳಿಸುವಿರಿ. ಸಮಯಕ್ಕೆ ತಕ್ಕಂತೆ ಬುದ್ಧಿವಂತಿಕೆಯಿಂದ ವರ್ತಿಸುವಿರಿ. ಹಣ ಉಳಿತಾಯಕ್ಕೆ ಯೋಜನೆ ರೂಪಿಸುವಿರಿ. ಶ್ರೀ ಲಕ್ಷ್ಮೀನಾರಾಯಣರ ಪೂಜೆಯನ್ನು ಮಾಡಿ, ಅಪಾಯದಲ್ಲಿರುವ ಸಾಕುಪ್ರಾಣಿಗಳ ಬಗ್ಗೆ ಗಮನ ಮತ್ತು ಅನುಕಂಪ ತೋರಿಸಿದರೆ ಒಳಿತಾಗುತ್ತದೆ. ತುಲಾವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುತ್ತದೆ. ಸತತ ಪ್ರಯತ್ನದಿಂದ ಉದ್ಯೋಗದಲ್ಲಿ ಬಡ್ತಿ ಪಡೆಯುವಿರಿ. ದೇವಾಲಯದ ಜೀರ್ಣೋದ್ದಾರ ಕೆಲಸದಲ್ಲಿ ಭಾಗವಹಿಸುವಿರಿ. ಕೋಪವನ್ನು ಹತೋಟಿಯಲ್ಲಿ ಇಡುವುದು ಒಳೆಯದು. ಧಾರ್ಮಿಕ ಸ್ಥಳಕ್ಕೆ ಬೇಟಿ ನೀಡುವಿರಿ. ಪಾರಿವಾಳಗಳಿಗೆ ಆಹಾರ ನೀಡಿ. ಶ್ರೀ ವಿಷ್ಣುಸಹಸ್ರನಾಮ ಪಠಣೆ ಮಾಡುವುದರಿಂದ ಶುಭಫಲ ದೊರೆಯುತ್ತದೆ.ವಾರ ಭವಿಷ್ಯ | ಅಕ್ಟೋಬರ್ 1ರಿಂದ 7ರವರೆಗೆ: ಈ ರಾಶಿಯವರು ಹೊಸ ವಾಹನ ಖರೀದಿಸುವರುವಾರ ಭವಿಷ್ಯ 16-4-2023 ರಿಂದ 22-4-2023 ರವರೆಗೆವೃಶ್ಚಿಕಕೌಟುಂಬಿಕ ಕೆಲಸ ಕಾರ್ಯಗಳಲ್ಲಿ ಮುಖ್ಯಪಾತ್ರ ವಹಿಸುವಿರಿ. ಬಿಡುವಿಲ್ಲದ ಕೆಲಸದಿಂದ ಬೇಸರಗೊಳ್ಳುವಿರಿ. ದೇವತಾ ಕಾರ್ಯಗಳಲ್ಲಿ ಭಾಗವಹಿಸುವಿರಿ. ತಂದೆಯ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಬಿನ್ನಾಭಿಪ್ರಾಯ ಉಂಟಾಗುತ್ತದೆ. ಧರ್ಮ ಗುರುಗಳ ಆಶೀರ್ವಾದವನ್ನು ಪಡೆಯಿರಿ. ಮಕ್ಕಳಿಗೆ ಬೆಳ್ಳಿ ಲೋಟದಲ್ಲಿ ನೀರು ಅಥವಾ ದ್ರವರೂಪದ ಆಹಾರ ಕುಡಿಯಲು ನೀಡಿ.ಧನಸ್ಸುತಲೆಗೆ ಪೆಟ್ಟಾಗುವ ಸಾಧ್ಯತೆಗಳಿವೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ಆರೋಗ್ಯದಲ್ಲಿ ಏರಿಳಿತ ಇರುತ್ತದೆ. ಸ್ವಂತ ವ್ಯಾಪಾರದಲ್ಲಿ ಉತ್ತಮ ಪ್ರಗತಿ ಸಾಧಿಸುವಿರಿ. ನಿಮ್ಮ ಮಕ್ಕಳು ಮನೆತನದ ವೃತ್ತಿಯನ್ನು ಅವಲಂಭಿಸುತ್ತಾರೆ. ಶ್ರೀ ಆಂಜನೇಯಸ್ವಾಮಿ ಪೂಜೆಯಿಂದ ಶುಭವಾಗಲಿದೆ. ಗೋವಿಗೆ ಆಹಾರ ನೀಡಿ.ಮಕರವಿವಾಹ ಕಾರ್ಯವು ಮುಂದೂಡಲ್ಪಡುತ್ತದೆ. ಪತ್ನಿಯ ಜೊತೆಯಲ್ಲಿ ವಾದ ವಿವಾದಗಳು ಇರಲಿವೆ. ಆಹಾರ ಸೇವನೆಯ ಬಗ್ಗೆ ಎಚ್ಚರಿಕೆ ಇರಲಿ. ಹಣಕಾಸಿನ ಸಮಸ್ಯೆ ಬಗೆಹರಿಯಲಿದೆ. ಸೋದರಿಯ ಜೀವನದಲ್ಲಿ ಉತ್ತಮ ಬದಲಾವಣೆಗಳು ಕಾಣಲಿವೆ. ಶ್ರೀ ಮಂಜುನಾಥನ ಪೂಜೆಯನ್ನು ಮಾಡಿರಿ. ಅವಶ್ಯಕತೆ ಇದ್ದವರಿಗೆ ಪುಸ್ತಕ ಮತ್ತು ಲೇಖನಿ ನೀಡಿ.ಕುಂಭಬೇಡದ ವಿಚಾರಗಳಿಗೆ ಚಿಂತೆ ಮಾಡುವಿರಿ. ನಿಮ್ಮ ತಂದೆಯವರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಆತ್ಮೀಯರ ಜೊತೆಯಲ್ಲಿ ಉತ್ತಮ ಬಾಂಧವ್ಯ ಉಳಿಸಿಕೊಳ್ಳಲು ವಿಫಲರಾಗುವಿರಿ. ಆತ್ಮೀಯರ ಸಹಾಯದಿಂದ ವಿವಾಹ ನಿಶ್ಚಯವಾಗುತ್ತದೆ. ಶ್ರೀ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಿ. ಇರುವೆಗಳಿಗೆ ಆಹಾರ ನೀಡಿ.ಮೀನಮಕ್ಕಳ ಜೀವನದಲ್ಲಿ ಉತ್ತಮ ಬದಲಾವಣೆಗಳು ಉಂಟಾಗಲಿವೆ. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುತ್ತದೆ. ಕೌಟುಂಬಿಕ ಕಲಹಗಳು ಉಂಟಾಗಲಿವೆ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನೇರವಾದ ನಡೆ–ನುಡಿಯಿಂದ ಇಕ್ಕಟ್ಟಿನ ಸನ್ನಿವೇಶ ಎದುರಿಸುವಿರಿ. ಗರ್ಭಿಣಿಯರಿಗೆ ಸಹಾಯ ಮಾಡುವುದು ಒಳಿತು.