ಸಿಎಸ್ಕೆ ಮುಖ್ಯಕೋಚ್ ಹುದ್ದೆ ತ್ಯಜಿಸಿದ ಫ್ಲೆಮಿಂಗ್
ಚೆನ್ನೈ (ಪಿಟಿಐ): ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರೊಂದಿಗಿನ ಬಾಂಧವ್ಯವನ್ನು ಸೋಮವಾರ ಕೊನೆಗೊಳಿಸಿದೆ. ತಂಡದ ಆಡಳಿತದ ಜೊತೆಗೆ ‘ಮುಕ್ತ ಮತ್ತು ಪ್ರಾಮಾಣಿಕ ಚರ್ಚೆ’ಗಳ ನಂತರ ಹುದ್ದೆ ತ್ಯಜಿಸಿರುವುದಾಗಿ ಫ್ಲೆಮಿಂಗ್ ಹೇಳಿದ್ದಾರೆ.2008ರಲ್ಲಿ ಐಪಿಎಲ್ನ ಮೊದಲ ಆವೃತ್ತಿಯಲ್ಲಿ ಆಟಗಾರರಾಗಿ ಸಿಎಸ್ಕೆ ತಂಡ ಸೇರಿಕೊಂಡಿದ್ದ ಫ್ಲೆ

ಚೆನ್ನೈ (ಪಿಟಿಐ): ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರೊಂದಿಗಿನ ಬಾಂಧವ್ಯವನ್ನು ಸೋಮವಾರ ಕೊನೆಗೊಳಿಸಿದೆ. ತಂಡದ ಆಡಳಿತದ ಜೊತೆಗೆ ‘ಮುಕ್ತ ಮತ್ತು ಪ್ರಾಮಾಣಿಕ ಚರ್ಚೆ’ಗಳ ನಂತರ ಹುದ್ದೆ ತ್ಯಜಿಸಿರುವುದಾಗಿ ಫ್ಲೆಮಿಂಗ್ ಹೇಳಿದ್ದಾರೆ.2008ರಲ್ಲಿ ಐಪಿಎಲ್ನ ಮೊದಲ ಆವೃತ್ತಿಯಲ್ಲಿ ಆಟಗಾರರಾಗಿ ಸಿಎಸ್ಕೆ ತಂಡ ಸೇರಿಕೊಂಡಿದ್ದ ಫ್ಲೆಮಿಂಗ್, ಮರು ವರ್ಷವೇ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು.ಕೃತಜ್ಞತೆಯೊಂದಿಗೆ ನಿರ್ಗಮಿಸುತ್ತಿದ್ದೇನೆ. ಜೊತೆಯಾಗಿ ನಾವು ಅವಿಸ್ಮರಣೀಯ ಗೆಲುವುಗಳನ್ನು ಆಚರಿಸಿದ್ದೇವೆ. ಸಂಕಷ್ಟದ ಸಂದರ್ಭಗಳನ್ನು ಎದುರಿಸಿದ್ದೇವೆ. ತಂಡದ ಸಾಧನೆಗೆ ಹೆಮ್ಮೆಯಿದೆ’ ಎಂದು ಫ್ರಾಂಚೈಸಿಯು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ನ್ಯೂಜಿಲೆಂಡ್ನ ದಿಗ್ಗಜ ಬ್ಯಾಟರ್ ತಿಳಿಸಿದ್ದಾರೆ.ಅವರ ಅವಧಿಯಲ್ಲಿ ಸಿಎಸ್ಕೆ ಐದು ಸಲ ಚಾಂಪಿಯನ್ ಆಗಿತ್ತು. ತಂಡವು ಎರಡು ಬಾರಿ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿ ಗೆದ್ದಿತ್ತು. ಐಪಿಎಲ್ನಲ್ಲಿ ದಾಖಲೆಯ 12 ಬಾರಿ ಪ್ಲೇಆಫ್ ಪ್ರವೇಶಿಸಿದ್ದು, 10 ಬಾರಿ ಫೈನಲ್ನಲ್ಲಿ ಆಡಿತ್ತು.ಆಗಿನ ನಾಯಕ ಮಹೇಂದ್ರ ಸಿಂಗ್ ಧೋನಿ ಜೊತೆ ಅವರು ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ ಮೂರು ವರ್ಷಗಳಿಂದ ತಂಡ ಹಿನ್ನಡೆಕಂಡು ಪ್ಲೇಆಫ್ಗೇರಲು ವಿಫಲವಾಗಿತ್ತು. ‘ಫ್ಲೆಮಿಂಗ್ ಅವರು ಕೋಚಿಂಗ್ ತಂಡದ ಉಸಿರಾಗಿದ್ದರು’ ಎಂದು ಫ್ರಾಂಚೈಸಿ ಮಾಲೀಕರಾದ ರೂಪಾ ಗುರುನಾಥ್ ಬಣ್ಣಿಸಿದ್ದಾರೆ.