ಮಹಿಳೆ ಮನೆಗೆ ನುಗ್ಗಿದ ಡೆಲಿವರಿ ಬಾಯ್: ವಿಷಾದ ವ್ಯಕ್ತಪಡಿಸಿದ ಫ್ಲಿಪ್ಕಾರ್ಟ್
ಬೆಂಗಳೂರು: ಶೌಚಾಲಯ ಬಳಸುವ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಆರೋಪದಲ್ಲಿ ಇ–ಕಾಮರ್ಸ್ ವೇದಿಕೆ ಫ್ಲಿಪ್ಕಾರ್ಟ್ನ ಡೆಲಿವರಿ ಬಾಯ್ ವಿಜಯ್ ಮಲ್ಲಿಕಾರ್ಜುನ್ ಕಾಮತ್ ಎಂಬಾತನನ್ನು ಬೆಂಗಳೂರು ಪೊಲೀಸರು ಭಾನುವಾರ ಬಂಧಿಸಿದ್ದಾರೆ.ಪ್ರಕರಣ ಸಂಬಂಧ ಫ್ಲಿಪ್ಕಾರ್ಟ್ ವಿಷಾದ ವ್ಯಕ್ತಪಡಿಸಿದೆ.‘ಈ ಘಟನೆಯಿಂದ ನಮಗೆ ತೀವ್ರ ಆಘಾತವಾಗಿದ್ದು, ಸಂತ್ರಸ್ತ ಗ್

ಬೆಂಗಳೂರು: ಶೌಚಾಲಯ ಬಳಸುವ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿದ ಆರೋಪದಲ್ಲಿ ಇ–ಕಾಮರ್ಸ್ ವೇದಿಕೆ ಫ್ಲಿಪ್ಕಾರ್ಟ್ನ ಡೆಲಿವರಿ ಬಾಯ್ ವಿಜಯ್ ಮಲ್ಲಿಕಾರ್ಜುನ್ ಕಾಮತ್ ಎಂಬಾತನನ್ನು ಬೆಂಗಳೂರು ಪೊಲೀಸರು ಭಾನುವಾರ ಬಂಧಿಸಿದ್ದಾರೆ.ಪ್ರಕರಣ ಸಂಬಂಧ ಫ್ಲಿಪ್ಕಾರ್ಟ್ ವಿಷಾದ ವ್ಯಕ್ತಪಡಿಸಿದೆ.‘ಈ ಘಟನೆಯಿಂದ ನಮಗೆ ತೀವ್ರ ಆಘಾತವಾಗಿದ್ದು, ಸಂತ್ರಸ್ತ ಗ್ರಾಹಕರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಗ್ರಾಹಕರ ಸುರಕ್ಷತೆಯ ವಿಷಯದಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಹಾಗಾಗಿ, ಈ ವಿಷಯ ನಮ್ಮ ಗಮನಕ್ಕೆ ಬಂದ ತಕ್ಷಣವೇ, ಘಟನೆಯಲ್ಲಿ ಭಾಗಿಯಾದ ಡೆಲಿವರಿ ಪಾರ್ಟ್ನರ್ ಸೇವೆಯನ್ನು ರದ್ದು ಮಾಡಿದ್ದೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.‘ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ತನಿಖಾಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸಲು ಬದ್ಧರಾಗಿದ್ದೇವೆ’ ಎಂದಿದೆ.ಬೆಂಗಳೂರು: ಶೌಚಾಲಯಕ್ಕೆ ಹೋಗಬೇಕೆಂದು ಒಂಟಿ ಮಹಿಳೆಯ ಮನೆಗೆ ನುಗ್ಗಿದ ಡೆಲಿವರಿ ಬಾಯ್ಮುಂದುವರಿದು, ‘ನಮ್ಮ ಎಲ್ಲಾ ಡೆಲಿವರಿ ಪಾರ್ಟ್ನರ್ಗಳನ್ನು ಕರ್ತವ್ಯಕ್ಕೆ ಸೇರಿಸಿಕೊಳ್ಳುವ ಮುನ್ನ ಕಡ್ಡಾಯವಾಗಿ ಹಿನ್ನೆಲೆ ಪರಿಶೀಲನೆ ನಡೆಸುತ್ತೇವೆ. ಸೂಕ್ತ ತರಬೇತಿಯನ್ನೂ ನೀಡಲಾಗುತ್ತದೆ. ಈ ರೀತಿಯ ಘಟನೆಗಳು ಅತ್ಯಂತ ಅಪರೂಪ. ಆದರೂ, ಇಂತಹ ಯಾವುದೇ ಘಟನೆಯನ್ನು ನಾವು ಎಂದಿಗೂ ಸಹಿಸುವುದಿಲ್ಲ’ ಎಂದು ಒತ್ತಿ ಹೇಳಿದೆ.‘ಗ್ರಾಹಕರ ಸುರಕ್ಷತಾ ಪ್ರಕ್ರಿಯೆಗಳನ್ನು ಮತ್ತಷ್ಟು ಬಲಪಡಿಸಲು ಏನೆಲ್ಲ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದೇವೆ’ ಎಂದೂ ತಿಳಿಸಿದೆ.ಪಾರ್ಸೆಲ್ ತಲುಪಿಸಲು ಮಹಿಳೆಯ ಮನೆಗೆ ಬಂದಿದ್ದ ಆರೋಪಿ, ನಂತರ ಶೌಚಾಲಯ ಬಳಸಬಹುದೇ ಎಂದು ಕೇಳಿದ್ದ. ಆ ಸಮಯದಲ್ಲಿ ಮಹಿಳೆಯು ಮನೆಯಲ್ಲಿ ಒಬ್ಬರೇ ಇದ್ದ ಕಾರಣ, ಅನುಮತಿ ನಿರಾಕರಿಸಿದ್ದರು. ಆದರೆ, ಅದನ್ನು ಲೆಕ್ಕಿಸದ ಆರೋಪಿ, ಬಲವಂತವಾಗಿ ಮನೆಗೆ ನುಗ್ಗಿದ್ದ ಎಂಬುದಾತಿ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.ಆರೋಪಿಯನ್ನು ಬಂಧಿಸಿರುವ ಮಾರತಹಳ್ಳಿ ಪೊಲೀಸರು, ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ವಿವಿಧ ಸೆಕ್ಷಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.