ಎಸ್ಐಆರ್: ಮತದಾರರ ಹಕ್ಕು ಕಸಿಯುವ ಸಂಚು
ಬೆಂಗಳೂರು: ಎಸ್ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಹೆಸರಿನಲ್ಲಿ ಬಡವರು, ತಳಸಮುದಾಯಗಳು, ಮಹಿಳೆಯರು ಹಾಗೂ ದುಡಿಯುವ ವರ್ಗದ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಂಚು ನಡೆಯುತ್ತಿದೆ ಎಂದು ಸಿಪಿಎಂ ಹಿರಿಯ ನಾಯಕ ಜಿ.ಎನ್. ನಾಗರಾಜ ಆರೋಪಿಸಿದರು.ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಸಿಪಿಎಂನ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತ

ಬೆಂಗಳೂರು: ಎಸ್ಐಆರ್ (ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ) ಹೆಸರಿನಲ್ಲಿ ಬಡವರು, ತಳಸಮುದಾಯಗಳು, ಮಹಿಳೆಯರು ಹಾಗೂ ದುಡಿಯುವ ವರ್ಗದ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಂಚು ನಡೆಯುತ್ತಿದೆ ಎಂದು ಸಿಪಿಎಂ ಹಿರಿಯ ನಾಯಕ ಜಿ.ಎನ್. ನಾಗರಾಜ ಆರೋಪಿಸಿದರು.ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಸಿಪಿಎಂನ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿ ಆಯೋಜಿಸಿದ್ದ ‘ಬೆಂಗಳೂರು ನಾಗರಿಕರ ಜನಾಕ್ರೋಶ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗವು ಬಿಜೆಪಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದರು.ಇದು ಭೂಗಳ್ಳರ ಸರ್ಕಾರ. ಭೂಮಾಫಿಯಾಗಳ ರಕ್ಷಣೆಗೆ ನಿಂತಿರುವ ಶಾಸಕರ ಸಂಖ್ಯೆಯೇ ಹೆಚ್ಚಾಗಿದೆ. ಬಣ್ಣದ ಮಾತುಗಳ ಮೂಲಕ ಬಡಜನರ ಭೂಮಿಯನ್ನು ಕಸಿಯುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿವೆ. ಚನ್ನರಾಯಪಟ್ಟಣದಲ್ಲಿ ಹೋರಾಟದ ಮೂಲಕ ಭೂಮಿಯನ್ನು ಉಳಿಸಿಕೊಳ್ಳಲಾಗಿದೆ. ಬಿಡದಿ, ದೊಡ್ಡಬೆಳವಂಗಲ ಹಾಗೂ ಆನೇಕಲ್ನಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಬೃಹತ್ ಜನಾಂದೋಲನಗಳು ನಡೆಯುತ್ತಿವೆ ಎಂದು ಹೇಳಿದರು.ಬೆಂಗಳೂರು ದಕ್ಷಿಣದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಮಂಜುನಾಥ ಮಾತನಾಡಿ, ಐದು ನಗರ ಪಾಲಿಕೆಗಳಾಗಿ ವಿಂಗಡಿಸಿದರೂ, ಅವು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಆರು ವರ್ಷಗಳಿಂದ ಚುನಾವಣೆ ನಡೆದಿಲ್ಲ, ಸಲ್ಲದ ಕಾರಣಗಳನ್ನು ಹೇಳುತ್ತಾ ಮುಂದೂಡುತ್ತಲೇ ಬರಲಾಗಿದೆ ಎಂದರು.ಬೆಂಗಳೂರು ಉತ್ತರ ಜಿಲ್ಲೆಯ ಕಾರ್ಯದರ್ಶಿ ಪ್ರತಾಪಸಿಂಹ ಮಾತನಾಡಿ, ‘ನಗರದಲ್ಲಿ ಶುದ್ಧ ಕುಡಿಯುವ ನೀರಿನ ಬವಣೆ ನೀಗಿಸಲು ಜಲಮಂಡಳಿ ವಿಫಲವಾಗಿದೆ. ಬೇಡಿಕೆಯಷ್ಟು ನೀರು ಪೂರೈಸಲು ಸಾಧ್ಯವಾಗದಿದ್ದರೂ ನೀರಿನ ಶುಲ್ಕವನ್ನು ವಿಪರೀತ ಏರಿಸಲಾಗಿದೆ. ನಗರದೆಲ್ಲೆಡೆ ಮ್ಯಾನ್ಹೋಲ್ಗಳು ಉಕ್ಕಿ ಹರಿಯುತ್ತಿದ್ದರೂ ಶಾಶ್ವತ ಪರಿಹಾರ ಕಂಡುಹಿಡಿದಿಲ್ಲ, ಇದರಿಂದ ನಗರ ನೈರ್ಮಲ್ಯ ಹದಗೆಟ್ಟಿದೆ. ಕಸ ವಿಲೇವಾರಿಗಾಗಿ ಪ್ರತ್ಯೇಕ ಸಂಸ್ಥೆಯನ್ನು ಮಾಡಿದ್ದರೂ ಎಲ್ಲೆಂದರಲ್ಲಿ ಕಸದ ರಾಶಿ ಕಂಡು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಿರಿಯ ಮುಖಂಡ ಗೋಪಾಲಗೌಡ ಮಾತನಾಡಿ, ನಗರದಲ್ಲಿ ಖಾಸಗಿ ಆಸ್ಪತ್ರೆ ಮತ್ತು ಖಾಸಗಿ ಶಾಲೆಗಳು ಜನರನ್ನು ಸುಲಿಗೆ ಮಾಡುತ್ತಿವೆ. ಆಸ್ಪತ್ರೆಗಳಲ್ಲಿ ಏಕರೂಪದ ದರ ಎಂಬುದಿಲ್ಲ ಎಂದರು. ಸಮಾವೇಶದಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಕೆ.ಎಸ್.ವಿಮಲಾ, ಮುಖಂಡರಾದ ಲಿಂಗರಾಜು ಮಳವಳ್ಳಿ, ಶಶಿಕಲಾ, ನಾಗರಾಜ, ಚಂದ್ರಶೇಖರ್ ಕೆ.ಎಸ್. ಲಕ್ಷ್ಮೀ, ನರಸಿಂಹಮೂರ್ತಿ, ಹುಳ್ಳಿ ಉಮೇಶ್ ಪಾಲ್ಗೊಂಡಿದ್ದರು. 'ಬಿ' ಖಾತಾ ಆಸ್ತಿಗಳನ್ನು 'ಎ' ಖಾತಾಗೆ ಪರಿವರ್ತಿಸಲು ಅಧಿಕ ಮೊತ್ತ ವಿಧಿಸಲಾಗಿದೆ. ನೀರಿನ ದರ ಬಿಎಂಟಿಸಿ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಗಾಯದ ಮೇಲಿನ ಬರೆ ಆಗಲಿದೆ. ಗೋಪಾಲಕೃಷ್ಣ ಅರಳಹಳ್ಳಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರೈತ ಕುಟುಂಬ ಬೀದಿಗೆನಗರವನ್ನು ಮತ್ತಷ್ಟು ವಿಸ್ತರಿಸಲು ಹೊರವಲಯದ ಕೃಷಿ ಭೂಮಿಯನ್ನು ಸರ್ಕಾರ ಸ್ವಾಧೀನ ಮಾಡಿಕೊಳ್ಳುತ್ತಿದೆ. ಇದರಿಂದ ರೈತ ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ಗೌರಮ್ಮ ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಗರದಲ್ಲಿ ಮನೆ ನಿವೇಶನದ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿದೆ. ಮನೆ ಬಾಡಿಗೆ ಹೊರೆಯಾಗುತ್ತಿದೆ. ಹೀಗಿರುವಾಗ ಬಿಡಿಎ ಗೃಹಮಂಡಳಿ ರಾಜೀವ್ ಗಾಂಧಿ ನಿಗಮದಿಂದ ನಿರ್ಮಾಣವಾಗಿರುವ ಫ್ಲ್ಯಾಟ್ಗಳ ದರಗಳು ಬಡವರ ಕೈಗೆಟುಕದಾಗಿವೆ ಎಂದರು.