ಪದಾಂಕಿತ ಹಿರಿಯ ವಕೀಲರ ನಿಯೋಜನೆಗೆ ಎ.ಪಿ.ರಂಗನಾಥ್ ಆಗ್ರಹ
ಬೆಂಗಳೂರು: ‘ಕರ್ನಾಟಕ ಹೈಕೋರ್ಟ್ನಲ್ಲಿ ಪದಾಂಕಿತ ಹಿರಿಯ ವಕೀಲರನ್ನು ನಿಯೋಜಿಸುವ ನಿಟ್ಟಿನಲ್ಲಿ ಕೂಡಲೇ ಅಧಿಸೂಚನೆ ಹೊರಡಿಸಬೇಕು’ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಆಗ್ರಹಿಸಿದ್ದಾರೆ.ಈ ಕುರಿತಂತೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರವೊಂದನ್ನು ಬರೆದಿರುವ ಅವರು, ‘ಕಳೆದ ಐದು ವರ್ಷಗಳಿಂದ ಹೊಸದಾಗಿ ಪದಾಂಕಿತ ಹಿರಿಯ ವಕೀಲ

ಬೆಂಗಳೂರು: ‘ಕರ್ನಾಟಕ ಹೈಕೋರ್ಟ್ನಲ್ಲಿ ಪದಾಂಕಿತ ಹಿರಿಯ ವಕೀಲರನ್ನು ನಿಯೋಜಿಸುವ ನಿಟ್ಟಿನಲ್ಲಿ ಕೂಡಲೇ ಅಧಿಸೂಚನೆ ಹೊರಡಿಸಬೇಕು’ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್ ಆಗ್ರಹಿಸಿದ್ದಾರೆ.ಈ ಕುರಿತಂತೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರವೊಂದನ್ನು ಬರೆದಿರುವ ಅವರು, ‘ಕಳೆದ ಐದು ವರ್ಷಗಳಿಂದ ಹೊಸದಾಗಿ ಪದಾಂಕಿತ ಹಿರಿಯ ವಕೀಲರ ನಿಯೋಜನೆ ನಡೆದಿಲ್ಲ. ಇದರಿಂದ ಸತ್ಯನಿಷ್ಠ, ಅರ್ಹ ಮತ್ತು ವಕೀಲ ವೃಂದದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಪ್ರತಿಭಾವಂತ ವಕೀಲರಿಗೆ ಅನ್ಯಾಯವಾಗುತ್ತಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.‘ಪ್ರತಿ ವರ್ಷವೂ ನಿಯೋಜನೆ ನಡೆಯಬೇಕೆಂದು; ಇಂದಿರಾ ಜೈಸಿಂಗ್ ಮತ್ತು ಸುಪ್ರೀಂ ಕೋರ್ಟ್ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ನಿರ್ದೇಶನಗಳು ಸದ್ಯದ ಸ್ತಬ್ಧತೆಯಿಂದಾಗಿ ಮೂಲೆಗುಂಪಾಗಿವೆ. ಕರ್ನಾಟಕ ವಕೀಲ ವೃಂದದಲ್ಲಿ ಅಗಣಿತ ಸಂಖ್ಯೆಯ ವೃತ್ತಿಪರ ವಕೀಲರಿಗೆ ಮಾನ್ಯತೆ ದೊರೆಯಬೇಕಾದ ಅಗತ್ಯವಿದೆ’ ಎಂದು ಪ್ರತಿಪಾದಿಸಿದ್ದಾರೆ. ‘ನ್ಯಾಯಾಂಗದ ಆಡಳಿತ ವೃದ್ಧಿಗೆ ಮತ್ತು ಅರ್ಹ ವಕೀಲರನ್ನು ಪಾರದರ್ಶಕವಾಗಿ ಗುರುತಿಸಿ ಅವರನ್ನು ಪದಾಂಕಿತ ಹಿರಿಯ ವಕೀಲರಾಗಿ ನಿಯೋಜಿಸಲು ಈ ಕೂಡಲೇ ಕಾರ್ಯಪ್ರವೃತ್ತರಾಗಬೇಕು’ ಎಂದು ರಂಗನಾಥ್ ಮನವಿ ಮಾಡಿದ್ದಾರೆ.