ಕುವೈತ್, ಬಹರೇನ್ ಮೇಲೆ ಮತ್ತೆ ದಾಳಿ – ಜಲಮಾರ್ಗ ಬಂದ್ ಎಂದ ಇರಾನ್
ವಾಷಿಂಗ್ಟನ್/ ಟೆಹರಾನ್: ಹಾರ್ಮುಜ್ ಜಲಸಂಧಿಯ (Strait of Hormuz) ನಿಯಂತ್ರಣದ ವಿಚಾರವಾಗಿ ಅಮೆರಿಕ (USA) ಹಾಗೂ ಇರಾನ್ (Iran) ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಭಾನುವಾರ ಸಂಜೆಯಿಂದ ಇರಾನ್, ಕುವೈತ್ಮ ಬಹರೇನ್ ಮೇಲೆ ಮತ್ತೆ ಹೊಸ ದಾಳಿಗಳು ನಡೆದಿವೆ. ಈ ಪ್ರಮುಖ ಜಲಮಾರ್ಗ ಸಂಚಾರಕ್ಕೆ ಮುಕ್ತವಾಗಿದೆಯೇ ಇಲ್ಲವೇ ಎಂಬ ಬಗ್ಗೆ ವಾಷಿಂಗ್ಟನ್ ಮತ್ತು ಟೆಹ್ರಾನ್ ಪರಸ್

ವಾಷಿಂಗ್ಟನ್/ ಟೆಹರಾನ್: ಹಾರ್ಮುಜ್ ಜಲಸಂಧಿಯ (Strait of Hormuz) ನಿಯಂತ್ರಣದ ವಿಚಾರವಾಗಿ ಅಮೆರಿಕ (USA) ಹಾಗೂ ಇರಾನ್ (Iran) ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಭಾನುವಾರ ಸಂಜೆಯಿಂದ ಇರಾನ್, ಕುವೈತ್ಮ ಬಹರೇನ್ ಮೇಲೆ ಮತ್ತೆ ಹೊಸ ದಾಳಿಗಳು ನಡೆದಿವೆ. ಈ ಪ್ರಮುಖ ಜಲಮಾರ್ಗ ಸಂಚಾರಕ್ಕೆ ಮುಕ್ತವಾಗಿದೆಯೇ ಇಲ್ಲವೇ ಎಂಬ ಬಗ್ಗೆ ವಾಷಿಂಗ್ಟನ್ ಮತ್ತು ಟೆಹ್ರಾನ್ ಪರಸ್ಪರ ವಿರುದ್ಧ ಹೇಳಿಕೆಗಳನ್ನು ನೀಡಿವೆ. ತನ್ನ ದಕ್ಷಿಣ ಭಾಗದ ಎರಡು ದ್ವೀಪಗಳ ಮೇಲೆ ದಾಳಿ ನಡೆದಿರುವುದಾಗಿ ಇರಾನ್ ತಿಳಿಸಿದೆ. ಇತ್ತ ಇರಾನ್ನಿಂದ ಪದೇ ಪದೇ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿಗೊಳಗಾಗುತ್ತಿರುವ ಕುವೈತ್, ತನ್ನ ಗಡಿ ಠಾಣೆಗಳು ಮತ್ತು ಕಡಲಾಚೆಯ ತೈಲ ಸಂಸ್ಕರಣಾ ಕೇಂದ್ರದ (Offshore oil platform) ಮೇಲೆ ದಾಳಿ ನಡೆದಿದೆ ಎಂದು ಹೇಳಿದೆ. ಭಾನುವಾರ ಬೆಳಗ್ಗೆ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ವಾಣಿಜ್ಯ ಹಡಗೊಂದರ ಮೇಲೆ ದಾಳಿ ನಡೆಸಿತ್ತು. ದಾಳಿಯ ಬೆನ್ನಲ್ಲೇ ಹಡಗು ಹೊತ್ತಿ ಉರಿದಿದ್ದರಿಂದ ಅದರ ಸಿಬ್ಬಂದಿ ಹಡಗನ್ನು ಬಿಟ್ಟು ಹೊರಬರಬೇಕಾಯಿತು. Footage shows the aftermath of U.S. airstrikes against Omidiyeh Airport, Khuzestan Province of Iran. pic.twitter.com/4tb24wWCj6 — Open Source Intel (@Osint613) July 13, 2026 ಈ ಘಟನೆಯ ನಂತರ ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ (IRGC)ಈ ವಲಯದಲ್ಲಿ ಅಮೆರಿಕದ ಹಸ್ತಕ್ಷೇಪ ಕೊನೆಗೊಳ್ಳುವವರೆಗೆ ಹಾರ್ಮುಜ್ ಜಲಸಂಧಿಯನ್ನು ಮುಂದಿನ ಸೂಚನೆವರೆಗೆ ಮುಚ್ಚಲಾಗುತ್ತದೆ ಎಂದು ಇರಾನ್ನ ಅಧಿಕೃತ ಸುದ್ದಿ ಸಂಸ್ಥೆ ಇರ್ನಾ (IRNA) ಮೂಲಕ ಪ್ರಕಟಿಸಿದೆ. ಇದನ್ನೂ ಓದಿ: ಹಾರ್ಮುಜ್ ಮತ್ತೆ ಬಂದ್; ಇರಾನ್ನ 140 ಗುರಿಗಳ ಮೇಲೆ ಅಮೆರಿಕ ದಾಳಿ ಈ ಹೇಳಿಕೆಯನ್ನು ನಿರಾಕರಿಸಿರುವ ಅಮೆರಿಕದ ಮಿಲಿಟರಿ ಸೆಂಟ್ರಲ್ ಕಮಾಂಡ್ (CENTCOM),ಹಾರ್ಮುಜ್ ಜಲಸಂಧಿಯು ಕಾನೂನುಬದ್ಧವಾಗಿ ಸಂಚರಿಸುವ ಎಲ್ಲಾ ಹಡಗುಗಳಿಗೆ ಮುಕ್ತವಾಗಿದೆ. ಸಂಚಾರ ಮುಕ್ತವಾಗಿ ಸಾಗುತ್ತಿದ್ದು, ಇರಾನ್ ಜಲಸಂಧಿಯನ್ನು ನಿಯಂತ್ರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಇರಾನ್ ಮೇಲೆ ದಾಳಿ: ಭಾನುವಾರ ಮಧ್ಯಾಹ್ನದಿಂದ ಇರಾನ್ನ ದಕ್ಷಿಣ ಪ್ರಾಂತ್ಯದ ಕೇಶ್ಮ್ (Qeshm) ದ್ವೀಪದ ಮೇಲೆ ಕನಿಷ್ಠ 10 ಶತ್ರು ಕ್ಷಿಪಣಿಗಳು ಅಪ್ಪಳಿಸಿವೆ. ಹತ್ತಿರದ ಫಾರುರ್ (Farur) ದ್ವೀಪದಲ್ಲೂ ದಾಳಿಯಾಗಿದ್ದು, ಟೆಲಿಕಾಂ ಉದ್ಯೋಗಿಯೊಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಬಂದರ್ ಅಬ್ಬಾಸ್ ಮತ್ತು ಹಜ್ಜಿಬಾದ್ ಮಿಲಿಟರಿ ವಲಯಗಳಲ್ಲೂ ಸ್ಫೋಟಗಳು ಸಂಭವಿಸಿವೆ. ಭಾರತೀಯ ನಾವಿಕನೊಬ್ಬ ನಾಪತ್ತೆಯಾಗಿದ್ದಾನೆ ಎಂದು ನವದೆಹಲಿ ತಿಳಿಸಿದೆ. ಕುವೈತ್ ಮೇಲೆ ದಾಳಿ: ಕುವೈತ್ನ ಉತ್ತರದ ಮೂರು ಭೂಗಡಿ ಪೋಸ್ಟ್ಗಳು ಹಾನಿಗೊಳಗಾಗಿದ್ದು, ಡ್ರೋನ್ ದಾಳಿಯಿಂದ ತೈಲ ಬಾವಿ ಕೊರೆಯುವ ಜಾಗಗಳಿಗೆ ಹಾನಿಯಾಗಿದೆ ಮತ್ತು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಇರಾನ್ ಮತ್ತು ಅಮೆರಿಕದ ಈ ಸಂಘರ್ಷದ ಬಿಸಿ ಕತಾರ್, ಯುಎಇ, ಬಹರೇನ್, ಜೋರ್ಡಾನ್ ಮತ್ತು ಒಮನ್ ದೇಶಗಳಿಗೂ ತಟ್ಟಿದ್ದು, ಅಲ್ಲಿ ಸ್ಫೋಟ ಹಾಗೂ ಸೈರನ್ ಸೌಂಡ್ಗಳು ಕೇಳಿಬಂದಿವೆ. ಇದನ್ನೂ ಓದಿ: ಒಮನ್ ಕರಾವಳಿಯಲ್ಲಿ ʻಗ್ಯಾಲಕ್ಸಿʼ ಮೇಲೆ ದಾಳಿ – ಓರ್ವ ಭಾರತೀಯ ಮಿಸ್ಸಿಂಗ್, 10 ಜನರ ರಕ್ಷಣೆ BREAKING: The Aghajari Oil and Gas Airport in Omidiyeh, Iran, has been hit by US airstrikes. Almost all cities in Khuzestan Province have been struck in the past three hours. pic.twitter.com/Psz1mUiOLW — The Hormuz Letter (@HormuzLetter) July 13, 2026 ಇರಾನ್ನ ದಾಳಿಗೆ ಪ್ರತಿಕ್ರಿಯೆಯಾಗಿ ತಾವು ಇರಾನ್ನ ಸುಮಾರು 140 ನೆಲೆಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಿರುವುದಾಗಿ ಅಮೆರಿಕ ತಿಳಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾವು ನಿನ್ನೆ ರಾತ್ರಿ ಅವರಿಗೆ ತಕ್ಕ ಶಾಸ್ತಿ ಮಾಡಿದ್ದೇವೆ ಎಂದು ಗುಡುಗಿದ್ದಾರೆ. ಅಷ್ಟೇ ಅಲ್ಲದೇ ಯುದ್ದ ವಿಮಾನಗಳ ಫೋಟೋವನ್ನು ಟ್ರೂಥ್ ಸೋಶಿಯಲ್ನಲ್ಲಿ ಅಪ್ಲೋಡ್ ಮಾಡಿ ಭೀಕರ ದಾಳಿಯ ಎಚ್ಚರಿಕೆ ನೀಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗಾಣಿಸಲು ನಡೆಯುತ್ತಿದ್ದ ರಾಜತಾಂತ್ರಿಕ ಮಾತುಕತೆಗಳ ಬೆನ್ನಲ್ಲೇ ಈ ದಾಳಿಗಳು ನಡೆದಿರುವುದು ಶಾಂತಿ ಪ್ರಕ್ರಿಯೆಗೆ ಹಿನ್ನಡೆ ತಂದಿದೆ. ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರಸ್ ತಕ್ಷಣವೇ ದಾಳಿಗಳನ್ನು ನಿಲ್ಲಿಸಿ ಮಾತುಕತೆಗೆ ಮರಳುವಂತೆ ಎರಡೂ ದೇಶಗಳಿಗೆ ಕರೆ ನೀಡಿದ್ದಾರೆ.