ಕೇವಲ 10 ರೂಪಾಯಿ ವಿಚಾರಕ್ಕೆ ಗಲಾಟೆ: ಕಾರ್ಮಿಕನನ್ನು ಇರಿದು ಕೊಂದ ಚಹಾ ವ್ಯಾಪಾರಿ
ನಾಗಪುರ: ಕೇವಲ 10 ರೂಪಾಯಿ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಚಹಾ ಮಾರಾಟಗಾರನೊಬ್ಬ 47 ವರ್ಷದ ಕೂಲಿ ಕಾರ್ಮಿಕನನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಭಾನುವಾರ ನಾಗ್ಪುರದ ಕಪಿಲ್ ನಗರದಲ್ಲಿ ನಡೆದಿದೆ.ಮೃತನನ್ನು ಮನೋಜ್ ವಿಶ್ವನಾಥ್ ಯಾದವ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮು

ನಾಗಪುರ: ಕೇವಲ 10 ರೂಪಾಯಿ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಚಹಾ ಮಾರಾಟಗಾರನೊಬ್ಬ 47 ವರ್ಷದ ಕೂಲಿ ಕಾರ್ಮಿಕನನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಭಾನುವಾರ ನಾಗ್ಪುರದ ಕಪಿಲ್ ನಗರದಲ್ಲಿ ನಡೆದಿದೆ.ಮೃತನನ್ನು ಮನೋಜ್ ವಿಶ್ವನಾಥ್ ಯಾದವ್ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕಾರ್ಯಕ್ರಮಕ್ಕಾಗಿ ಹಾಕಲಾಗಿದ್ದ ಸ್ಟೇಜ್ ತೆರವು ಕಾರ್ಯ ಶುರುವಾದ ಕೆಲವೇ ಹೊತ್ತಿನಲ್ಲಿ, ಅಂದರೆ ಮಧ್ಯಾಹ್ನ 3:30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಕಾರ್ಯಕ್ರಮದ ಬಳಿಕ ಮನೋಜ್ ಚಹಾ ಅಂಗಡಿಗೆ ಹೋಗಿದ್ದ. ಅಲ್ಲಿ ಚಹಾ ಮತ್ತು ತಂಬಾಕಿಗಾಗಿ ಹತ್ತು ರೂಪಾಯಿ ನೀಡುವಂತೆ ಅಂಗಡಿ ಮಾಲೀಕ ಕೈಲಾಶ್ ಲಾಲ್ಚಂದ್ ಗನ್ವೀರ್ (42) ಕೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಜೋರು ಗಲಾಟೆ ನಡೆದಿದ್ದು, ಮನೋಜ್ ವ್ಯಾಪಾರಿ ಕೈಲಾಶ್ಗೆ ಅವನ ಹೆಂಡತಿಯ ಮುಂದೆಯೇ ಕಪಾಳಮೋಕ್ಷ ಮಾಡಿದ್ದಾನೆ ಎನ್ನಲಾಗಿದೆ.ಇದರಿಂದ ತೀವ್ರ ಆಕ್ರೋಶಗೊಂಡ ಕೈಲಾಶ್, ಅಂಗಡಿಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಮನೋಜ್ನ ಕುತ್ತಿಗೆಗೆ ಇರಿದಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವನು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.