ವ್ಯಸನ ಮುಕ್ತ ಕೇಂದ್ರದಲ್ಲಿ ನೇಣಿಗೆ ಶರಣಾದ ಕಾನ್ಸ್ಟೇಬಲ್
ಕೊಪ್ಪಳ: ವ್ಯಸನ ಮುಕ್ತ ಕೇಂದ್ರಕ್ಕೆ (Rehabilitation Center) ದಾಖಲಾಗಿದ್ದ ಪೊಲೀಸ್ ಪೇದೆಯೊಬ್ಬರು ನೇಣಿಗೆ ಶರಣಾದ ಘಟನೆ ಕುಷ್ಟಗಿಯಲ್ಲಿ (Kushtagi) ನಡೆದಿದೆ. ಶರಣಪ್ಪ ಉಪ್ಪಾರ (49) ನೇಣಿಗೆ ಶರಣಾದ ಪೊಲೀಸ್ ಪೇದೆ. ಇವರು ಮುನಿರಾಬಾದ್ ಐಆರ್ಬಿಯಲ್ಲಿ ಕೆಲಸ ಮಾಡುತ್ತಿದ್ದರು. ಮದ್ಯ ವ್ಯಸನಕ್ಕೆ ದಾಸರಾಗಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕುವೈತ್, ಬಹ

ಕೊಪ್ಪಳ: ವ್ಯಸನ ಮುಕ್ತ ಕೇಂದ್ರಕ್ಕೆ (Rehabilitation Center) ದಾಖಲಾಗಿದ್ದ ಪೊಲೀಸ್ ಪೇದೆಯೊಬ್ಬರು ನೇಣಿಗೆ ಶರಣಾದ ಘಟನೆ ಕುಷ್ಟಗಿಯಲ್ಲಿ (Kushtagi) ನಡೆದಿದೆ. ಶರಣಪ್ಪ ಉಪ್ಪಾರ (49) ನೇಣಿಗೆ ಶರಣಾದ ಪೊಲೀಸ್ ಪೇದೆ. ಇವರು ಮುನಿರಾಬಾದ್ ಐಆರ್ಬಿಯಲ್ಲಿ ಕೆಲಸ ಮಾಡುತ್ತಿದ್ದರು. ಮದ್ಯ ವ್ಯಸನಕ್ಕೆ ದಾಸರಾಗಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕುವೈತ್, ಬಹರೇನ್ ಮೇಲೆ ಮತ್ತೆ ದಾಳಿ – ಜಲಮಾರ್ಗ ಬಂದ್ ಎಂದ ಇರಾನ್ ಎರಡು ದಿನಗಳ ಹಿಂದೆ ಅವರು ವ್ಯಸನಮುಕ್ತ ಕೇಂದ್ರದಿಂದ ಮನೆಗೆ ಕರೆದುಕೊಂಡು ಹೋಗುವಂತೆ ಪತ್ನಿಗೆ ಕರೆ ಮಾಡಿದ್ದರು. ಮನೆಗೆ ಕರೆದುಕೊಂಡು ಹೋಗದೇ ಇದ್ದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಅಳಿಯನಿಂದ ಡೆಡ್ಲಿ ಅಟ್ಯಾಕ್ಗೆ ಒಳಗಾಗಿದ್ದ ಅತ್ತೆ ಸಾವು
Read the complete story at Public TV Kannada