ಏಕದಿನ ಕ್ರಿಕೆಟ್ 40 ಓವರ್ಗಳಿಗೆ ಸೀಮಿತ ಮಾಡಬಾರದು: ಶುಭಮನ್ ಗಿಲ್
ಬರ್ನಿಂಗ್ಹ್ಯಾಮ್: ಏಕದಿನ ಕ್ರಿಕೆಟ್ ಅನ್ನು 50 ಓವರ್ಗಳಿಂದ 40 ಓವರ್ಗೆ ಇಳಿಸುವ ಯೋಜನೆಯನ್ನು ನಾನು ವಿರೋಧಿಸುತ್ತೇನೆ ಎಂದು ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಹೇಳಿದ್ದಾರೆ.ಟಿ–20 ಕ್ರಿಕೆಟ್ನ ಜನಪ್ರಿಯತೆ ಮತ್ತು ಪ್ರಾಂಚೈಸಿ ಕ್ರಿಕೆಟ್ನಿಂದ ಅಭಿಮಾನಿಗಳಲ್ಲಿ ಏಕದಿನ ಕ್ರಿಕೆಟ್ ಕಡೆಗಿನ ಆಸಕ್ತಿ ಕಡಿಮೆಯಾಗಿದೆ. ಹಾಗಾಗಿ, ಏಕದಿನ ಕ್ರಿಕೆಟ್ ಅನ್ನ

ಬರ್ನಿಂಗ್ಹ್ಯಾಮ್: ಏಕದಿನ ಕ್ರಿಕೆಟ್ ಅನ್ನು 50 ಓವರ್ಗಳಿಂದ 40 ಓವರ್ಗೆ ಇಳಿಸುವ ಯೋಜನೆಯನ್ನು ನಾನು ವಿರೋಧಿಸುತ್ತೇನೆ ಎಂದು ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಹೇಳಿದ್ದಾರೆ.ಟಿ–20 ಕ್ರಿಕೆಟ್ನ ಜನಪ್ರಿಯತೆ ಮತ್ತು ಪ್ರಾಂಚೈಸಿ ಕ್ರಿಕೆಟ್ನಿಂದ ಅಭಿಮಾನಿಗಳಲ್ಲಿ ಏಕದಿನ ಕ್ರಿಕೆಟ್ ಕಡೆಗಿನ ಆಸಕ್ತಿ ಕಡಿಮೆಯಾಗಿದೆ. ಹಾಗಾಗಿ, ಏಕದಿನ ಕ್ರಿಕೆಟ್ ಅನ್ನು 40 ಓವರ್ಗಳಿಗೆ ಸೀಮಿತಗೊಳಿಸಬೇಕು ಎಂದು ಐಸಿಸಿ ಮಟ್ಟದಲ್ಲಿ ಚರ್ಚೆಗಳಾಗುತ್ತಿವೆ.ಏಕದಿನ ಕ್ರಿಕೆಟ್ನ ಜನಪ್ರಿಯತೆಯನ್ನು ಉಳಿಸಲು ಅದನ್ನು 40 ಓವರ್ಗಳಿಗೆ ಕಡಿತಗೊಳಿಸುವ ಬದಲು, ಹೆಚ್ಚಿನ ತ್ರಿಕೋನ ಸರಣಿಗಳನ್ನು ಆಡಿಸಬೇಕು ಎಂದು ಗಿಲ್ ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತವು ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದ್ದು, ನಾಳೆ(ಜುಲೈ 14) ಮೊದಲ ಪಂದ್ಯ ನಡೆಯಲಿದೆ.
Read the complete story at Prajavani