ಲಾರ್ಡ್ಸ್ ಅಂಗಳದಲ್ಲಿ ಐತಿಹಾಸಿಕ ಟೆಸ್ಟ್ ಜಯ ಸಾಧಿಸಿದ ಭಾರತದ ವನಿತೆಯರು
ಲಂಡನ್: ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ ಲಾರ್ಡ್ಸ್ ಮೈದಾನದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವು 270 ರನ್ಗಳ ಗೆಲುವು ಸಾಧಿಸಿದೆ.ಇದು ಲಾಡ್ಸ್ ಮೈದಾನದಲ್ಲಿ ನಡೆದ ಮೊದಲ ಮಹಿಳಾ ಟೆಸ್ಟ್ ಪಂದ್ಯವಾಗಿತ್ತು.ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು, ಮೊದಲ ಇನಿಂಗ್ಸ್ನಲ್ಲಿ ಸ್ಮೃತಿ ಮಂದಾನ(83 ರನ್), ನಾಯಕಿ

ಲಂಡನ್: ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ ಲಾರ್ಡ್ಸ್ ಮೈದಾನದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವು 270 ರನ್ಗಳ ಗೆಲುವು ಸಾಧಿಸಿದೆ.ಇದು ಲಾಡ್ಸ್ ಮೈದಾನದಲ್ಲಿ ನಡೆದ ಮೊದಲ ಮಹಿಳಾ ಟೆಸ್ಟ್ ಪಂದ್ಯವಾಗಿತ್ತು.ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು, ಮೊದಲ ಇನಿಂಗ್ಸ್ನಲ್ಲಿ ಸ್ಮೃತಿ ಮಂದಾನ(83 ರನ್), ನಾಯಕಿ ಹರ್ಮನ್ಪ್ರೀತ್ ಕೌರ್(58 ರನ್), ದೀಪ್ತಿ ಶರ್ಮಾ(57 ರನ್) ಅವರ ಅರ್ಧಶತಕದ ನೆರವಿನಿಂದ 74.5 ಓವರ್ಗಳಲ್ಲಿ 285 ರನ್ಗಳಿಗೆ ಆಲೌಟ್ ಆಗಿತ್ತು. ಭಾರತದ ಬಿಗಿ ಬೌಲಿಂಗ್ ದಾಳಿಗೆ ರನ್ ಗಳಿಸಲು ಪರದಾಡಿದ ಇಂಗ್ಲೆಂಡ್ ತಂಡವು, 170 ರನ್ಗಳಿಗೆ ಸರ್ವಪತನ ಕಂಡಿತು.ಎರಡನೇ ಇನಿಂಗ್ಸ್ನಲ್ಲಿ ಯಸ್ತಿಕಾ ಭಾಟಿಯಾ(113 ರನ್) ಅವರ ಶತಕದ ನೆರವಿನಿಂದ ಭಾರತ ತಂಡವು 7 ವಿಕೆಟ್ ನಷ್ಟಕ್ಕೆ 341 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಪಂದ್ಯದ ನಾಲ್ಕನೇ ದಿನ ಇಂಗ್ಲೆಂಡ್ ಬ್ಯಾಟರ್ಗಳನ್ನು ಕಾಡಿದ ಸ್ನೇಹಾ ರಾಣಾ, 4 ವಿಕೆಟ್ ಪಡೆಯುವ ಮೂಲಕ ತವರಿನ ಬ್ಯಾಟರ್ಗಳನ್ನು ಕಟ್ಟಿಹಾಕಿದರು. ಎರಡನೇ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವು 186 ರನ್ಗೆ ಆಲೌಟ್ ಆಗುವ ಮೂಲಕ ಟೀಂ ಇಂಡಿಯಾವು 270 ರನ್ಗಳ ಭರ್ಜರಿ ಜಯ ಸಾಧಿಸಿತು.ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್, ಎರಡನೇ ಇನಿಂಗ್ಸ್ನಲ್ಲಿ 2 ವಿಕೆಟ್ ಕಬಳಿಸಿದ ಕ್ರಾಂತಿ ಗೌಡ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.