ಲಾರ್ಡ್ಸ್ನಲ್ಲಿ ಚರಿತ್ರೆ ಸೃಷ್ಟಿಸಿದ ಟೀಂ ಇಂಡಿಯಾ ಕ್ವೀನ್ಸ್ – ಇಂಗ್ಲೆಂಡ್ ವಿರುದ್ಧ 270 ರನ್ಗಳ ಭರ್ಜರಿ ಜಯ
ಲಂಡನ್: ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಹರ್ಮನ್ಪ್ರೀತ್ ಕೌರ್ (Harmanpreet Kaur)ನಾಕಯತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಚರಿತ್ರೆ ಸೃಷ್ಟಿಸಿದೆ. 142 ವರ್ಷಗಳ ಐತಿಹಾಸಿಕ ಲಾರ್ಡ್ಸ್ (Lord’s) ಮೈದಾನದಲ್ಲಿ ಮೊದಲ ಸಲ ಮಹಿಳಾ ಟೆಸ್ಟ್ಗ

ಲಂಡನ್: ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಹರ್ಮನ್ಪ್ರೀತ್ ಕೌರ್ (Harmanpreet Kaur)ನಾಕಯತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಇಂಗ್ಲೆಂಡ್ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಚರಿತ್ರೆ ಸೃಷ್ಟಿಸಿದೆ. 142 ವರ್ಷಗಳ ಐತಿಹಾಸಿಕ ಲಾರ್ಡ್ಸ್ (Lord’s) ಮೈದಾನದಲ್ಲಿ ಮೊದಲ ಸಲ ಮಹಿಳಾ ಟೆಸ್ಟ್ಗೆ (Women Test Cricket) ಈ ಪಂದ್ಯ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ಪಡೆ 270 ರನ್ಗಳ ಭರ್ಜರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಇತ್ತೀಚೆಗಷ್ಟೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದಲ್ಲೇ ಹೊರಬಿದ್ದು ನಿರಾಸೆ ಮೂಡಿಸಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡವು (India Womens Team) ಇದೀಗ ಲಾರ್ಡ್ಸ್ ಅಂಗಳದಲ್ಲಿ ಇಂಗ್ಲೆಂಡ್ (England) ಗೆದ್ದು ಇನ್ನೂ ಅರ್ಧದಿನ ಬಾಕಿಯಿರುವಂತೆಯೇ ಪಂದ್ಯವನ್ನ ಮುಗಿಸಿದೆ. ಸಂಕ್ಷಿಪ್ತ ಸ್ಕೋರ್ ಮೊದಲ ಇನ್ನಿಂಗ್ಸ್ ಭಾರತ – 282/10, ಇಂಗ್ಲೆಂಡ್ – 170/10 2ನೇ ಇನ್ನಿಂಗ್ಸ್ ಭಾರತ – 341/7 ಡಿಕ್ಲೇರ್, ಇಂಗ್ಲೆಂಡ್ – 186/10
Read the complete story at Public TV Kannada