ಟ್ರಂಪ್ ಆಪ್ತ ಸೆನೆಟರ್ ಸಾವಿನ ಹಿಂದೆ ಹತ್ಯೆಯ ಶಂಕೆ – ಇರಾನ್, ರಷ್ಯಾ ಕೈವಾಡದ ಬಗ್ಗೆ ಚರ್ಚೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಅತ್ಯಂತ ಆಪ್ತ ಒಡನಾಡಿ ಹಾಗೂ ಹಿರಿಯ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ (71) ಅವರು ಹಠಾತ್ ನಿಧನ ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಉಕ್ರೇನ್ ಪ್ರವಾಸ ಮುಗಿಸಿ ಮರಳಿದ ಕೆಲವೇ ಗಂಟೆಗಳಲ್ಲಿ ಅವರು ನಿಧನರಾಗಿರುವುದು ಜಾಗತಿಕ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದ್ದು, ಟ್ರಂಪ್ ಅವರ ‘ಮಾಗ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಅತ್ಯಂತ ಆಪ್ತ ಒಡನಾಡಿ ಹಾಗೂ ಹಿರಿಯ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ (71) ಅವರು ಹಠಾತ್ ನಿಧನ ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ. ಉಕ್ರೇನ್ ಪ್ರವಾಸ ಮುಗಿಸಿ ಮರಳಿದ ಕೆಲವೇ ಗಂಟೆಗಳಲ್ಲಿ ಅವರು ನಿಧನರಾಗಿರುವುದು ಜಾಗತಿಕ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದ್ದು, ಟ್ರಂಪ್ ಅವರ ‘ಮಾಗಾ’ (MAGA – Make America Great Again) ಬೆಂಬಲಿಗರು ಹತ್ಯೆಯ(Assassination) ಶಂಕೆ ಹಾಗೂ ಹಲವು ಪಿತೂರಿ ಸಿದ್ಧಾಂತಗಳ ಬಗ್ಗೆ ಈಗ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸೆನೆಟರ್ ಲಿಂಡ್ಸೆ ಗ್ರಹಾಂ(Lindsey Graham) ಅವರು ಜುಲೈ 11ರ ಶನಿವಾರ ಸಂಜೆ ವಾಷಿಂಗ್ಟನ್ನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಸ್ತಂಭನದಿಂದ ಕೊನೆಯುಸಿರೆಳೆದಿದ್ದರು. ಆದರೆ ಲಿಂಡ್ಸೆ ಗ್ರಹಾಂ ಅವರ ಸಾವಿನ ಹಿಂದೆ ರಷ್ಯಾ ಅಥವಾ ಇರಾನ್ ಕೈವಾಡವಿರಬಹುದು ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಅಮೆರಿಕ-ಇರಾನ್ ನಡುವೆ ಭೀಕರ ದಾಳಿ – ಕಚ್ಚಾ ತೈಲ ಬೆಲೆ ಶೇ. 4ರಷ್ಟು ಏರಿಕೆ ಸಾವಿಗೂ ಮುನ್ನವಷ್ಟೇ ಗ್ರಹಾಂ ಉಕ್ರೇನ್ಗೆ ಭೇಟಿ ನೀಡಿ, ರಷ್ಯಾದ ತೈಲ ಮತ್ತು ಅನಿಲ ರಫ್ತಿನ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಬೇಕೆಂದು ಒತ್ತಾಯಿಸಿದ್ದರು. ಉಕ್ರೇನ್ನಿಂದ ಮರಳಿದ ಕೆಲವೇ ಗಂಟೆಗಳಲ್ಲಿ ಅವರು ನಿಧನರಾಗಿದ್ದು, ಇದರ ಸಮಯದ ಬಗ್ಗೆ ಟ್ರಂಪ್ ಬೆಂಬಲಿಗರು ಪ್ರಶ್ನೆ ಎತ್ತುತ್ತಿದ್ದಾರೆ. ಇದನ್ನೂ ಓದಿ: ಇಸ್ರೇಲ್ ನೀಡಿದ ಸ್ಫೋಟಕ ಮಾಹಿತಿ ಕೇಳಿ ಸಿಐಎ ಶಾಕ್ – ಇರಾನ್ ಮೇಲೆ ದಾಳಿಗೆ ಟ್ರಂಪ್ ಆದೇಶ ಇತ್ತೀಚೆಗಷ್ಟೇ ಇರಾನ್ ದೇಶವು ಲಿಂಡ್ಸೆ ಗ್ರಹಾಂ ಅವರಿಗೆ ಜೀವ ಬೆದರಿಕೆ ಹಾಕಿತ್ತು. ಗ್ರಹಾಂ ನಿಧನರಾಗುತ್ತಿದ್ದಂತೆ ಇರಾನ್ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಈ ಸುದ್ದಿಯನ್ನು ಸಂಭ್ರಮಿಸುವ ರೀತಿಯಲ್ಲಿ ಪ್ರಸಾರ ಮಾಡಿರುವುದು ಶಂಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ತಮ್ಮ ಆಪ್ತ ಮಿತ್ರನ ಅಗಲಿಕೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ನಾನು ಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿ ಹಾಗೂ ಸೆನೆಟರ್ಗಳಲ್ಲಿ ಒಬ್ಬರಾದ ಲಿಂಡ್ಸೆ ಗ್ರಹಾಂ ಇನ್ನಿಲ್ಲ! ಅವರು ಯಾವಾಗಲೂ ದೇಶಕ್ಕಾಗಿ ಶ್ರಮಿಸುತ್ತಿದ್ದ ನಿಜವಾದ ಅಮೆರಿಕನ್ ದೇಶಭಕ್ತ. ಲಿಂಡ್ಸೆ ಅವರ ಅನುಪಸ್ಥಿತಿ ನಮ್ಮನ್ನು ಬಹುವಾಗಿ ಕಾಡಲಿದೆ ಎಂದು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಕುವೈತ್, ಬಹರೇನ್ ಮೇಲೆ ಮತ್ತೆ ದಾಳಿ – ಜಲಮಾರ್ಗ ಬಂದ್ ಎಂದ ಇರಾನ್ ಭಾರತದ ಜತೆಗಿನ ಜಾಗತಿಕ ರಾಜತಾಂತ್ರಿಕ ವ್ಯವಹಾರಗಳಲ್ಲೂ ಲಿಂಡ್ಸೆ ಗ್ರಹಾಂ ಪ್ರಮುಖ ಪಾತ್ರ ವಹಿಸಿದ್ದರು. ರಷ್ಯಾದಿಂದ ಭಾರತ ಕಚ್ಚಾ ತೈಲ ಖರೀದಿಸುವುದನ್ನು ಅವರು ತೀವ್ರವಾಗಿ ವಿರೋಧಿಸಿದ್ದರು. ಭಾರತವು ರಷ್ಯಾ ತೈಲವನ್ನು ಖರೀದಿಸುವ ಮೂಲಕ ವ್ಲಾಡಿಮಿರ್ ಪುಟಿನ್ ಅವರ ಯುದ್ಧಕ್ಕೆ ಆರ್ಥಿಕ ನೆರವು ನೀಡುತ್ತಿದೆ ಎಂದು ಆರೋಪಿಸಿದ್ದ ಗ್ರಹಾಂ, ಭಾರತದ ರಫ್ತುಗಳ ಮೇಲೆ ಶೇ. 500 ರಷ್ಟು ಸುಂಕ (Tariff) ವಿಧಿಸುವುದಾಗಿ ಈ ಹಿಂದೆ ಎಚ್ಚರಿಕೆ ನೀಡಿದ್ದರು.