ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಕಂಪನಿಯಿಂದ ಪ್ರವಾಸ ತೆರಳಿದ್ದ ನಾಲ್ವರು ಟೆಕ್ಕಿಗಳು ದುರ್ಮರಣ
– ಮೂವರಿಗೆ ಗಂಭೀರ ಗಾಯ – ಕಟ್ಟರ್ನಿಂದ ಕಾರು ತುಂಡರಿಸಿ ಮೃತದೇಹಗಳನ್ನು ಹೊರತೆಗೆದ ಪೊಲೀಸರು ಲಕ್ನೋ: ಕಂಪನಿಯಿಂದ ಆಯೋಜಿಸಿದ್ದ ಪ್ರವಾಸಕ್ಕಾಗಿ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ (Jim Corbett Park) ತೆರಳುತ್ತಿದ್ದ ವೇಳೆ ನಿಂತಿದ್ದ ಲಾರಿಗೆ (Lorry) ಕಾರು (Car) ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಟೆಕ್ಕಿಗಳು (Techie) ಮೃತಪಟ್ಟಿದ್ದು, ಮೂವರು ಗಂಭೀರ

– ಮೂವರಿಗೆ ಗಂಭೀರ ಗಾಯ – ಕಟ್ಟರ್ನಿಂದ ಕಾರು ತುಂಡರಿಸಿ ಮೃತದೇಹಗಳನ್ನು ಹೊರತೆಗೆದ ಪೊಲೀಸರು ಲಕ್ನೋ: ಕಂಪನಿಯಿಂದ ಆಯೋಜಿಸಿದ್ದ ಪ್ರವಾಸಕ್ಕಾಗಿ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ (Jim Corbett Park) ತೆರಳುತ್ತಿದ್ದ ವೇಳೆ ನಿಂತಿದ್ದ ಲಾರಿಗೆ (Lorry) ಕಾರು (Car) ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಟೆಕ್ಕಿಗಳು (Techie) ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ರಾಮ್ಪುರ್ ಜಿಲ್ಲೆಯಲ್ಲಿ ನಡೆದಿದೆ. ದೆಹಲಿ ಮೂಲದ ಖಾಸಗಿ ಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 12 ಮಂದಿ ಸಿಬ್ಬಂದಿ ಕಂಪನಿಯ ವತಿಯಿಂದ ಆಯೋಜಿಸಲಾಗಿದ್ದ ಪ್ರವಾಸಕ್ಕಾಗಿ ಉತ್ತರಾಖಂಡದ ರಾಮನಗರದಲ್ಲಿರುವ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನಕ್ಕೆ ಎರಡು ವಾಹನಗಳಲ್ಲಿ ಹೊರಟಿದ್ದರು. ಇವರಲ್ಲಿ ಏಳು ಮಂದಿ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಮತ್ತೊಂದು ವಾಹನದಲ್ಲಿದ್ದ ಐವರು ಸುರಕ್ಷಿತರಾಗಿದ್ದಾರೆ. ಇದನ್ನೂ ಓದಿ: 500 ರೂ. ಡ್ರಾ ಮಾಡಲು ಹೋದ ವೃದ್ಧನಿಗೆ ಶಾಕ್- ತಂದೆ, ಮಗನ ಖಾತೆಯಲ್ಲಿತ್ತು ಬರೋಬ್ಬರಿ 1,500 ಕೋಟಿ ಹಣ ಅಪಘಾತದಲ್ಲಿ ಮೃತಪಟ್ಟವರನ್ನು ಅಭಿಷೇಕ್ ಅಗ್ನಿಹೋತ್ರಿ (30), ಕಾರ್ತಿಕ್ (24), ನೀರಜ್ (24) ಹಾಗೂ ಗುಲ್ಬುದ್ದೀನ್ (35) ಎಂದು ಗುರುತಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ಅಭಿಷೇಕ್ ಅಗ್ನಿಹೋತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಲ್ಲಿ ಒಬ್ಬರು ಬಾಗ್ಪತ್ ಜಿಲ್ಲೆಯವರಾಗಿದ್ದು, ಉಳಿದವರು ದೆಹಲಿಯ ನಿವಾಸಿಗಳಾಗಿದ್ದಾರೆ. ಇದನ್ನೂ ಓದಿ: ಕರ್ನಾಟಕದಂತೆ ಮಹಾರಾಷ್ಟ್ರದಲ್ಲೂ ಗ್ಯಾರಂಟಿ ಪರಿಷ್ಕರಣೆ – `ಲಡ್ಕಿ ಬಹಿನ್’ ಯೋಜನೆಯಿಂದ 92 ಲಕ್ಷ ಮಹಿಳೆಯರು ಔಟ್ ಅಭಿಷೇಕ್ ಅಗ್ನಿಹೋತ್ರಿ, ಕಾರ್ತಿಕ್ ಹಾಗೂ ನೀರಜ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರವಾಗಿ ಗಾಯಗೊಂಡಿದ್ದ ಗುಲ್ಬುದ್ದೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಸರ್ಕಾರದ ಚಿತಾವಣೆಯಿಂದ ಬಿಡದಿ ಟೌನ್ಶಿಪ್ಗೆ ಸರ್ವೆ: ಹೆಚ್ಡಿಕೆ ಇಂದು ಬೆಳಗಿನ ಜಾವ ಸುಮಾರು 5 ಗಂಟೆ ವೇಳೆಗೆ ಸ್ವಾರ್-ಟಾಂಡಾ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಟ್ಟರ್ ಮೂಲಕ ಕಾರನ್ನು ತುಂಡರಿಸಿ ಅದರೊಳಗೆ ಸಿಲುಕಿದ್ದ ಮೃತದೇಹಗಳು ಮತ್ತು ಗಾಯಾಳುಗಳನ್ನು ಪೊಲೀಸರು ಹೊರತೆಗೆದಿದ್ದಾರೆ. ಇದನ್ನೂ ಓದಿ: ವಯನಾಡಿನಲ್ಲಿ ಭೂಕುಸಿತವಾದರೂ ಪ್ರಿಯಾಂಕಾ ಗಾಂಧಿ ಏಕೆ ಬರಲಿಲ್ಲ? – ಬಿಜೆಪಿ ಪ್ರಶ್ನೆ ಅಪಘಾತದಲ್ಲಿ ಗಾಯಗೊಂಡ ಮೂವರನ್ನು ಮೊದಲಿಗೆ ರಾಮ್ಪುರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ದೆಹಲಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ, ಚಾಲಕನಿಗೆ ನಿದ್ರೆ ಬಂದಿದ್ದರಿಂದ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬದರಿನಾಥ್ ದೇಣಿಗೆ ಕಳವು: ಪ್ರಮುಖ ಆರೋಪಿ ಡೆಹ್ರಾಡೂನ್ನಲ್ಲಿ ಅರೆಸ್ಟ್ ಘಟನಾ ಸ್ಥಳಕ್ಕೆ ರಾಮ್ಪುರ್ ಜಿಲ್ಲಾ ಪೊಲೀಸ್ ಅಧೀಕ್ಷಕ ಸೋಮೇಂದ್ರ ಮೀನಾ ಭೇಟಿ ನೀಡಿ ಪರಿಶೀಲನೆ ನಡೆಸಿ, ರಕ್ಷಣಾ ಹಾಗೂ ತನಿಖಾ ಕಾರ್ಯಾಚರಣೆಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗದ ಮುಪ್ಪಾನೆ – ಹಲ್ಕೆ ನಡುವಿನ ಲಾಂಚ್ ಸೇವೆ ಪುನಾರಂಭ