ಬ್ಯಾಂಕಾಕ್ ಪಬ್ನಲ್ಲಿ ಬೆಂಕಿ, ಸ್ಫೋಟ: 27 ಮಂದಿ ಸಜೀವ ದಹನ
ಬ್ಯಾಂಕಾಕ್: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನ ಪ್ರಸಿದ್ಧ ಪಬ್ವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 27 ಮಂದಿ ಸಜೀವವಾಗಿ ದಹನವಾಗಿದ್ದಾರೆ.ಛತುಛಕ್ ಜಿಲ್ಲೆಯ ಪಬ್ನಲ್ಲಿ ಭಾನುವಾರ ತಡರಾತ್ರಿ 11.57ರ ಸುಮಾರಿಗೆ ದುರಂತ ಸಂಭವಿಸಿದೆ.‘27 ಮಂದಿ ಮೃತಪಟ್ಟಿದ್ದಾರೆ. 60ಕ್ಕೂ ಹೆಚ್ಚು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ’ ಎಂದು ಬ್ಯಾಂಕಾಕ್ ನಗ
ಬ್ಯಾಂಕಾಕ್: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನ ಪ್ರಸಿದ್ಧ ಪಬ್ವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 27 ಮಂದಿ ಸಜೀವವಾಗಿ ದಹನವಾಗಿದ್ದಾರೆ.ಛತುಛಕ್ ಜಿಲ್ಲೆಯ ಪಬ್ನಲ್ಲಿ ಭಾನುವಾರ ತಡರಾತ್ರಿ 11.57ರ ಸುಮಾರಿಗೆ ದುರಂತ ಸಂಭವಿಸಿದೆ.‘27 ಮಂದಿ ಮೃತಪಟ್ಟಿದ್ದಾರೆ. 60ಕ್ಕೂ ಹೆಚ್ಚು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ’ ಎಂದು ಬ್ಯಾಂಕಾಕ್ ನಗರಾಡಳಿತದ ‘ವಿಪತ್ತು ತಡೆ ಮತ್ತು ನಿವಾರಣಾ ಘಟಕದ’ ನಿರ್ದೇಶಕ ಸುರಿಯಾಚೈ ರವಿವಾನ್ ಸೋಮವಾರ ತಿಳಿಸಿದ್ದಾರೆ.‘ಆಸ್ಪತ್ರೆಗೆ ದಾಖಲಾಗಿರುವವರಲ್ಲಿ 22 ಜನರ ಸ್ಥಿತಿ ಗಂಭೀರವಾಗಿದೆ’ ಎಂದು ಬ್ಯಾಂಕಾಕ್ ಗವರ್ನರ್ ಚಾದ್ಚರ್ಟ್ ಸಿತ್ತಿಪುಂಟ್ ಮಾಹಿತಿ ನೀಡಿದ್ದಾರೆ.ಪ್ರತ್ಯಕ್ಷದರ್ಶಿಗಳ ಪ್ರಕಾರ, ಪಬ್ನಲ್ಲಿದ್ದ ವೇದಿಕೆ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ವಲ್ಪದರಲ್ಲೇ ಸ್ಫೋಟ ಸಂಭವಿಸಿತು ಎನ್ನಲಾಗಿದೆ.‘ಬೆಂಕಿ ಕಾಣಿಸಿಕೊಂಡ ಕೆಲವೇ ಹೊತ್ತಿನಲ್ಲಿ ಇಡೀ ಪಬ್ನಲ್ಲಿ ಹೊಗೆ ತುಂಬಿಕೊಂಡಿತು. ಕೂಡಲೇ ಬೆಂಕಿ ಆವರಿಸಿತು. ಅನೇಕರು ಶೌಚಾಲಯದ ಹಿಂಭಾಗಕ್ಕೆ ಓಡಿ ಹೋದರು. ಅಲ್ಲಿಂದ ತಪ್ಪಿಸಿಕೊಳ್ಳುವ ದಾರಿಯೇ ಇರಲಿಲ್ಲ’ ಎಂದು ಬದುಕುಳಿದ ವ್ಯಕ್ತಿಯೊಬ್ಬರು ಹೇಳಿದ್ದಾರೆ.ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪ್ರಧಾನಿ ಅನುಟಿವ್ ಚರ್ನ್ವಿರಾಕುಲ್, ‘ಶವಗಳನ್ನು ಹೊರಗೆ ತೆಗೆಯಲಾಗಿದೆ. ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ’ ಎಂದು ಹೇಳಿದ್ದಾರೆ. SENSITIVE FOOTAGE: Distressing footage shows survivors scrambling to escape a deadly fire at a restaurant in Bangkok’s Chatuchak district.Reports say 27 people have died and many others were injured as authorities investigate.#Bangkok #Thailand #Fire #BreakingNews #Emergency https://t.co/jR3BdURx96 pic.twitter.com/iuM3Z9rQX2— Rosa News Official (@Mirha1206) July 12, 2026 27 dead and 18 injured as tragedy strikes Bangkok nightlifeLate last night, a massive fire engulfed the popular entertainment venue "Rong Beer at Ladprao" near the Ladprao Intersection. Emergency services responded around midnight to a fierce blaze, with thick smoke and… pic.twitter.com/vuPsMO7eZn— Thai Enquirer (@ThaiEnquirer) July 12, 2026