500 ರೂ. ಡ್ರಾ ಮಾಡಲು ಹೋದ ವೃದ್ಧನಿಗೆ ಶಾಕ್- ತಂದೆ, ಮಗನ ಖಾತೆಯಲ್ಲಿತ್ತು ಬರೋಬ್ಬರಿ 1,500 ಕೋಟಿ ಹಣ
ಪಾಟ್ನಾ: ತಮ್ಮ ಪಿಂಚಣಿಯಲ್ಲಿ 500 ರೂ. ಹಣ ಡ್ರಾ ಮಾಡಿಕೊಂಡ ವೃದ್ಧರೊಬ್ಬರು ನಂತರ ಬಾಕಿ ಹಣ ಪರಿಶೀಲಿಸಿದಾಗ ಬ್ಯಾಂಕ್ ಖಾತೆಯಲ್ಲಿ 759 ಕೋಟಿ ರೂ, ಹಣ ಇರೋದನ್ನು ನೋಡಿ ಬೆಚ್ಚಿಬಿದ್ದಿರುವ ಘಟನೆ ಬಿಹಾರದಲ್ಲಿ (Bihar) ನಡೆದಿದೆ. ಮುಜಫರ್ಪುರ (Muzaffarpur) ಜಿಲ್ಲೆಯ ಸಕ್ರಾ ಬ್ಲಾಕ್ನ ಥಾಟಿಯಾ ಸಿಹೋ ಗ್ರಾಮದ ನಿವಾಸಿ ಕಾಮೇಶ್ವರ ಮಿಶ್ರಾ (82), ತಮ್ಮ ವಿಕಲಚೇತನ ಪುತ್

ಪಾಟ್ನಾ: ತಮ್ಮ ಪಿಂಚಣಿಯಲ್ಲಿ 500 ರೂ. ಹಣ ಡ್ರಾ ಮಾಡಿಕೊಂಡ ವೃದ್ಧರೊಬ್ಬರು ನಂತರ ಬಾಕಿ ಹಣ ಪರಿಶೀಲಿಸಿದಾಗ ಬ್ಯಾಂಕ್ ಖಾತೆಯಲ್ಲಿ 759 ಕೋಟಿ ರೂ, ಹಣ ಇರೋದನ್ನು ನೋಡಿ ಬೆಚ್ಚಿಬಿದ್ದಿರುವ ಘಟನೆ ಬಿಹಾರದಲ್ಲಿ (Bihar) ನಡೆದಿದೆ. ಮುಜಫರ್ಪುರ (Muzaffarpur) ಜಿಲ್ಲೆಯ ಸಕ್ರಾ ಬ್ಲಾಕ್ನ ಥಾಟಿಯಾ ಸಿಹೋ ಗ್ರಾಮದ ನಿವಾಸಿ ಕಾಮೇಶ್ವರ ಮಿಶ್ರಾ (82), ತಮ್ಮ ವಿಕಲಚೇತನ ಪುತ್ರನೊಂದಿಗೆ ಬ್ಯಾಂಕ್ಗೆ ಹೋಗಿದ್ದರು. 500 ರೂ. ವಿತ್ಡ್ರಾ ಮಾಡಿ ಬ್ಯಾಲೆನ್ಸ್ ನೋಡಿದಾಗ ಖಾತೆಯಲ್ಲಿ 7,59,69,51,951 ರೂ. ಇರೋದನ್ನು ನೋಡಿದ್ದಾರೆ. ನಂತರ ವಿಕಲಚೇತನ ಮಗನ ಖಾತೆಯಲ್ಲಿರುವ ಹಣ ಬಾಕಿ ಪರಿಶೀಲಿಸಿದಾಗ ಅಲ್ಲೂ ಇದೇ ಪ್ರಮಾಣದ ಹಣ ಕಂಡಿದೆ. ಅಂದರೆ ಒಟ್ಟು 1,500 ಕೋಟಿ ರೂ. ಹಣದ ಬಗ್ಗೆ ತಿಳಿದ ತಂದೆ-ಮಗ ಇಬ್ಬರೂ ಆಶ್ಚರ್ಯಗೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಂತೆ ಮಹಾರಾಷ್ಟ್ರದಲ್ಲೂ ಗ್ಯಾರಂಟಿ ಪರಿಷ್ಕರಣೆ – `ಲಡ್ಕಿ ಬಹಿನ್’ ಯೋಜನೆಯಿಂದ 92 ಲಕ್ಷ ಮಹಿಳೆಯರು ಔಟ್ ಕವಿಯೂ ಆಗಿರುವ ಕಾಮೇಶ್ವರ ಮಿಶ್ರಾ ವಿವೇಚನೆಯಿಂದ ಬ್ಯಾಂಕ್ ಮತ್ತು ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ, ಇಷ್ಟೊಂದು ಹಣ ಇರುವ ಬಗ್ಗೆ ತಿಳಿಸಿ, ತಕ್ಷಣವೇ ಸರಿಪಡಿಸುವಂತೆ ಕೇಳಿದ್ದಾರೆ. ಬ್ಯಾಂಕ್ ಅಧಿಕಾರಿಗಳಿಗೂ ಈ ವಿಚಾರ ಆಶ್ಚರ್ಯ ತರಿಸಿದ್ದು, ಪರಿಶೀಲಿಸಿದ್ದಾರೆ. ಬ್ಯಾಂಕ್ ಸರ್ವರ್ನಲ್ಲಿನ ತಾಂತ್ರಿಕ ದೋಷ ಅಥವಾ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ದೋಷ ಇದಕ್ಕೆ ಕಾರಣ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ. ನಂತರ ಇಬ್ಬರ ಖಾತೆ ಸರಿಹೋಗಿದೆ.