ಗೃಹ ಪ್ರವೇಶದ ಸಂಭ್ರಮದಲ್ಲಿ ನಟಿ ಶ್ರುತಿ ಹಾಸನ್
ನಟ-ಚಿತ್ರ ನಿರ್ಮಾಪಕ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಸುದ್ದಿಯಲ್ಲಿದ್ದಾರೆ. ನಟಿ ಮತ್ತು ಗಾಯಕಿ ಶ್ರುತಿ ಹಾಸನ್ ಅವರು ಚೆನ್ನೈನಲ್ಲಿ ಗೃಹಪ್ರವೇಶ ಮಾಡಿದ್ದಾರೆ. ತಮ್ಮ ನೂತನ ಮನೆಯಲ್ಲಿ ಪೂಜೆ ನೆರವೇರಿಸಿದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.ತಮ್ಮ ಹುಟ್ಟೂರಿನಲ್ಲೇ ಹೊಸ ಮನೆಗೆ ಕಾಲಿಡುವ ಮೂಲಕ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಗೃಹಪ

ನಟ-ಚಿತ್ರ ನಿರ್ಮಾಪಕ ಕಮಲ್ ಹಾಸನ್ ಅವರ ಪುತ್ರಿ ಶ್ರುತಿ ಹಾಸನ್ ಸುದ್ದಿಯಲ್ಲಿದ್ದಾರೆ. ನಟಿ ಮತ್ತು ಗಾಯಕಿ ಶ್ರುತಿ ಹಾಸನ್ ಅವರು ಚೆನ್ನೈನಲ್ಲಿ ಗೃಹಪ್ರವೇಶ ಮಾಡಿದ್ದಾರೆ. ತಮ್ಮ ನೂತನ ಮನೆಯಲ್ಲಿ ಪೂಜೆ ನೆರವೇರಿಸಿದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.ತಮ್ಮ ಹುಟ್ಟೂರಿನಲ್ಲೇ ಹೊಸ ಮನೆಗೆ ಕಾಲಿಡುವ ಮೂಲಕ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ. ಗೃಹಪ್ರವೇಶದ ಪೂಜೆಯ ಸಂದರ್ಭದಲ್ಲಿ ನೀಲಿ ಬಣ್ಣದ ವಸ್ತ್ರದಲ್ಲಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ನೆಲದ ಮೇಲೆ ಕುಳಿತು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುತ್ತಿರುವುದು, ದೇವರ ಮುಂದೆ ಜೋಡಿಸಿಟ್ಟಿರುವ ಸಿಹಿತಿಂಡಿಗಳು ಮತ್ತು ಹೊಸ ಮನೆಯ ಕೀಲಿ ಕೈ ಇರುವ ಫೋಟೊಗಳನ್ನು ಅಭಿಮಾನಿಗಳು ಹಂಚಿಕೊಂಡಿದ್ದಾರೆ.ರಾಜಮೌಳಿ ಚಿತ್ರದಲ್ಲಿ ಹಾಡಿದ ನಟಿ ಶ್ರುತಿ ಹಾಸನ್Photos | ಬಹುಭಾಷಾ ನಟಿ ಶ್ರುತಿ ಹಾಸನ್ ಇತ್ತೀಚಿನ ಚಿತ್ರಗಳು..ಇನ್ನು ನಟಿ ಶ್ರುತಿ ಹಾಸನ್ ಅವರ ಮನೆಯ ಲಿವಿಂಗ್ ರೂಮ್ ಅನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದ್ದು, ಅದರಲ್ಲಿ ಮ್ಯೂಸಿಕ್ ರೂಮ್, ಸಿಟ್ಟಿಂಗ್ ಏರಿಯಾ ಮತ್ತು ಡೈನಿಂಗ್ ಏರಿಯಾಗಳಿವೆ. ಎತ್ತರದ ಸೀಲಿಂಗ್, ನೈಸರ್ಗಿಕ ಬೆಳಕು ಬರುವಂತೆ ವಿನ್ಯಾಸಗೊಳಿಸಲಾದ ದೊಡ್ಡ ಕಿಟಕಿಗಳು, ಆಕರ್ಷಕ ಪೇಂಟಿಂಗ್ಗಳು ಮತ್ತು ಗಿಡಗಳಿಂದ ಆ ಮನೆ ಕಂಗೊಳಿಸುತ್ತಿದೆ. ಕಳೆದ ವರ್ಷ ಮಣಿರತ್ನಂ ನಿರ್ದೇಶನದ ಮತ್ತು ತಂದೆ ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಹಾಗೂ ಲೋಕೇಶ್ ಕನಕರಾಜ್ ನಿರ್ದೇಶನದ ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರಗಳಲ್ಲಿ ಶ್ರುತಿ ಹಾಸನ್ ನಟಿಸಿದ್ದರು. ಬುಚ್ಚಿ ಬಾಬು ಸನಾ ನಿರ್ದೇಶನದ, ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಅಭಿನಯದ ‘ಪೆದ್ದಿ’ ಚಿತ್ರದ ವಿಶೇಷ ಹಾಡೊಂದರಲ್ಲೂ ಅವರು ಕಾಣಿಸಿಕೊಂಡಿದ್ದರು. ಪ್ರಸ್ತುತ ಅವರು ನಟಿಸಿರುವ ‘ಆಕಾಶಂಲೋ ಒಕ ತಾರಾ’ ಮತ್ತು ‘ಟ್ರೈನ್’ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.